ಮಾಜಿ ಪ್ರಿಯಕರನ ಹತ್ಯೆ; ಖ್ಯಾತ ಬಾಲಿವುಡ್ ನಟಿಯ ತಂಗಿ ಅರೆಸ್ಟ್
ನ್ಯೂಸ್ ಆ್ಯರೋ: ಮಾಜಿ ಪ್ರಿಯತಮ ಹಾಗೂ ಆತನ ಸ್ನೇಹಿತರೊಬ್ಬರನ್ನು ಕೊಲೆ ಮಾಡಿದ ಆರೋಪದ ಮೇಲೆ ಬಾಲಿವುಡ್ ನಟಿ ನರ್ಗೀಸ್ ಫಕ್ರಿ ಅವರ ಸಹೋದರಿ ಅಲಿಯಾ ಫಕ್ರಿ ಅವರನ್ನು ಅಮೆರಿಕದಲ್ಲಿ ಬಂಧಿಸಲಾಗಿದೆ.
ಪ್ರಿಯತನಮನ ಮತ್ತೊಬ್ಬ ಯುವತಿಯ ಜತೆ ಸಂಬಂಧ ಬೆಳೆಸಿದ ಎಂಬ ಕಾರಣಕ್ಕೆ ಅವನ ವಿರುದ್ಧ ಅಲಿಯಾ ಸಿಟ್ಟಾಗಿದ್ದರು. ಸಮಯ ನೋಡಿಕೊಂಡು ನ್ಯೂಯಾರ್ಕ್‌ನ ಕ್ವೀನ್ಸ್ ಎಂಬಲ್ಲಿ ಎರಡು ಅಂತಸ್ತಿನ ಗ್ಯಾರೇಜ್‌ಗೆ ಬೆಂಕಿ ಹಚ್ಚಿ ಅವರನ್ನು ಕೊಂದಿದ್ದಾರೆ ಎಂದು ಆರೋಪ ಮಾಡಲಾಗಿದೆ.
ಸದ್ಯ ನ್ಯೂಯಾರ್ಕ್ ಪೊಲೀಸರು ಅಲಿಯಾ ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡೆಸಿದ್ದಾರೆ. ಈ ವೇಳೆ ಸ್ಥಳೀಯರು ಅಲಿಯಾ ವಿರುದ್ಧ ಸಾಕ್ಷಿ ಹೇಳಿದ್ದು, ಹತ್ಯೆ ಮಾಡಿರುವ ಸಾಧ್ಯತೆಗಳು ಹೆಚ್ಚಿವೆ. ಈ ಹಿನ್ನೆಲೆ ನ್ಯಾಯಾಲಯವು ಆಕೆಯನ್ನು ಬಂಧನದಲ್ಲಿಡಲು ಸೂಚನೆ ನೀಡಿದೆ. ಮುಂದಿನ ವಿಚಾರಣೆಯನ್ನು ಡಿಸೆಂಬರ್ 9ಕ್ಕೆ ನಿಗದಿಪಡಿಸಿದೆ.
ನವೆಂಬರ್ 2 ರಂದು ಬೆಳಿಗ್ಗೆ ಅಲಿಯಾ ಗ್ಯಾರೇಜ್‌ಗೆ ಆಗಮಿಸಿ ಅಲ್ಲಿ ಮಲಗಿದ್ದ ಆಕೆಯ ಮಾಜಿ ಪ್ರಿಯತಮನನ್ನು ಎಚ್ಚರಿಸಿದ್ದಾರೆ. “ನೀವೆಲ್ಲರೂ ಇಂದು ಸಾಯುತ್ತೀರಾ” ಎಂದು ಕೂಗಿದರು. ಕೆಲವು ಸೆಕೆಂಡುಗಳ ನಂತರ, ಕಟ್ಟಡಕ್ಕೆ ಬೆಂಕಿ ಹಾಕಿದ್ದಾರೆ ಎನ್ನಲಾಗಿದೆ.
ಮಾಜಿ ಬಾಯ್‌ಫ್ರೆಂಡ್ ಮನೆಗೆ ಆಗಮಿಸುತ್ತಿದ್ದ ಅಲಿಯಾ ಇತ್ತೀಚೆಗೆ ದೊಡ್ಡ ಜಗಳ ಮಾಡಿಕೊಂಡಿದ್ದರು. ತನಗೆ ಮೋಸ ಮಾಡಿದ ಗೆಳೆಯನ ಸುಮ್ಮನೆ ಬಿಡುವುದಿಲ್ಲ ಎಂದು ಆಗಾಗ ಹೇಳುತ್ತಿದ್ದರು. ಮನೆಗೆ ಬೆಂಕಿ ಹಚ್ಚಿ ಮಾಜಿ ಗೆಳೆಯನ ಮೇಲೆ ಸೇಡು ತೀರಿಸಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು ಎಂದು ಸ್ಥಳಿಯರು ಅಲಿಯಾ ಫಾಕ್ರಿಯ ವಿರುದ್ಧ ಸಾಕ್ಷಿ ಹೇಳಿದ್ದಾರೆ ಎಂದು ವರದಿಯಾಗಿದೆ.
Leave a Comment