ಬಿಗ್ಬಾಸ್ ಮನೆಯಿಂದ ಹೊರಬಂದ ಚೈತ್ರಾ ಕುಂದಾಪುರ; ಇದಕ್ಕಿದ್ದಂತೆ ʼಫೈರ್ ಬ್ರ್ಯಾಂಡ್ʼ ಹೊರ ಬರಲು ಕಾರಣವೇನು ?
![Chaithra Kundapura](https://news-arrow.com/wp-content/uploads/cwv-webp-images/2024/12/Chaithra-Kundapura.png.webp)
ನ್ಯೂಸ್ ಆ್ಯರೋ: ಬಿಗ್ಬಾಸ್ 11 ಮನೆಯೊಳಗೆ ಸಖತ್ ಸೌಂಡ್ ಮಾಡುತ್ತಿರುವ ಸ್ಪರ್ಧಿ ಚೈತ್ರಾ ಕುಂದಾಪುರ ಅವರು ಬಿಗ್ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ. ಶಾಕಿಂಗ್ ಬೆಳವಣಿಗೆಯಲ್ಲಿ ಚೈತ್ರಾ ಕುಂದಾಪುರ ಅವರು ಬಿಗ್ಬಾಸ್ ಮನೆಯಿಂದ ಹೊರಗೆ ಬಂದಿರುವ ಘಟನೆ ನಡೆದಿದೆ. ನಟಿ ಶೋಭಾ ಶೆಟ್ಟಿ ಅವರು ದೊಡ್ಮನೆಯಿಂದ ಹೊರ ಬಂದ ಬೆನ್ನಲ್ಲೇ ಈ ಘಟನೆ ನಡೆದಿದೆ.
ಚೈತ್ರಾ ಕುಂದಾಪುರ ಅವರು ಕೇಸ್ ಸಂಬಂಧವಾಗಿ ವಿಚಾರಣೆಗೆ ಹಾಜರಾಗಲು ಬಿಗ್ಬಾಸ್ ಮನೆಯಿಂದ ಹೊರಗೆ ಬಂದಿದ್ದರು. ಈಗ ಚೈತ್ರಾ ಕುಂದಾಪುರ ಅವರ ಕೇಸ್ ವಿಚಾರಣೆಯನ್ನು ಜನವರಿ 13ಕ್ಕೆ ಮುಂದೂಡಲಾಗಿದ್ದು ಅವರು ಮತ್ತೆ ಬಿಗ್ಬಾಸ್ ಮನೆಗೆ ಹೋಗಲಿದ್ದಾರೆ ಎನ್ನಲಾಗಿದೆ.
ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ವಂಚನೆ ಪ್ರಕರಣದಲ್ಲಿ ಚೈತ್ರಾ ಕುಂದಾಪುರ ಹಾಗೂ ಆಕೆಯ ಗ್ಯಾಂಗ್‌ನಿಂದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ 5 ಕೋಟಿ ರೂ. ಪಡದು ವಂಚನೆ ಮಾಡಿದ್ದ ಪ್ರಕರಣ ಬಹು ದಿನಗಳ ಕಾಲ ನೆನಪುಳಿಯುವಂತಹ ಕೇಸ್ ಆಗಿದೆ. ಬೈಂದೂರಿನ ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಬಿಜೆಪಿ ಎಂಎಲ್‍ಎ ಟಿಕೆಟ್ ಕೊಡಿಸುವುದಾಗಿ ನಂಬಿಸಿ 5 ಕೋಟಿ ರೂ. ಪಡೆದು ವಂಚಿಸಿದ ಕೇಸಿನಲ್ಲಿ ಜೈಲು ಸೇರಿದ್ದರು. ಕೆಲವು ತಿಂಗಳ ಬಳಿಕ ಜಾಮೀನು ಪಡೆದು ಜೈಲಿನಿಂದ ಹೊರಗೆ ಬಂದಿದ್ದರು. ಇದಾದ ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ನಡೆಸುವ ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ತೆರಳಿದ್ದರು. ಇದೀಗ ಟಿಕೆಟ್ ವಂಚನೆ ಕೇಸಿನಲ್ಲಿ ವಿಚಾರಣೆ ಎದುರಿಸಲು ಹೊರಗೆ ಬಂದಿದ್ದಾರೆ.
ಇಂದು ಕೋರ್ಟ್‌ಗೆ ಹಾಜರಾದ ಬಿಗ್ ಬಾಸ್ ಸ್ಪರ್ಧಿ ಚೈತ್ರಾ ಕುಂದಾಪುರ ಅವರು ವಿಚಾರಣೆಯನ್ನು ಎದುರಿಸಿದ್ದಾರೆ. ಚೈತ್ರ ಕುಂದಾಪುರ, ಶ್ರೀಕಾಂತ್, ಹಿರೇ ಹಡಗಲಿಯ ಹಾಲಸ್ವಾಮಿ ಮಠದ ಸ್ವಾಮೀಜಿ ಸೇರಿದಂತೆ ಮೂವರು ಆರೋಪಿಗಳು ವಂಚನೆ ಮಾಡಿದ್ದರು. ಈ ಪೈಕಿ ಇಂದು ಚೈತ್ರಾ ಕುಂದಾಪುರ ಸೇರಿದಂತೆ ಮೂವರು ಆರೋಪಿಗಳು ಕೋರ್ಟ್‌ಗೆ ಹಾಜರು ಆಗಿದ್ದರು. ಇನ್ನು ಕೋರ್ಟ್‌ಗೆ ಹಾಜರಾಗಲೇಬೇಕು ಎಂಬ ವಾರೆಂಟ್ ಹಿನ್ನೆಲೆಯಲ್ಲಿ ಬಿಗ್ ಬಾಸ್ ಮನೆಯಿಂದ ಚೈತ್ರಾ ಕುಂದಾಪುರ ಅವರ ನೇರವಾಗಿ ಕೋರ್ಟ್ ವಿಚಾರಣೆಗೆ ಹಾಜರಾಗಿದ್ದರು.
Leave a Comment