ಹುಲ್ಲು ಬಿಟ್ಟು ಜೀವಂತ ಕೋಳಿ ತಿಂದ ಹಸು; ವೈರಲ್ ವಿಡಿಯೋ ಕಂಡು ನೆಟ್ಟಿಗರು ಶಾಕ್
ನ್ಯೂಸ್ ಆ್ಯರೋ: ಈ ಪ್ರಪಂಚದಲ್ಲಿ ನಮ್ಮ ಊಹೆಗೂ ನಿಲುಕದ ಕೆಲವೊಂದು ಅಚ್ಚರಿಯ ಘಟನೆಗಳು ನಡೆಯುತ್ತಲೇ ಇರುತ್ತವೆ. ಇಂತಹ ಘಟನೆಗಳ ಸುದ್ದಿಗಳನ್ನು ಕೇಳಿದಾಗ ಅರೇ ಹಿಂಗೂ ನಡೆಯಲು ಸಾಧ್ಯ ಉಂಟೇ ಎಂದು ನಾವುಗಳು ಬೆಚ್ಚಿ ಬೀಳುತ್ತೇವೆ. ಇದೀಗ ಇಂತಹದ್ದೇ ಮತ್ತೊಂದು ಅಚ್ಚರಿಯ ಘಟನೆ ನಡೆದಿದ್ದು, ಹಸುವೊಂದು ತಾನು ಸಸ್ಯಾಹಾರಿ ಎಂಬುದನ್ನೇ ಮರೆತು ಜೀವಂತ ಕೋಳಿಯನ್ನು ತಿಂದಿದೆ. ಈ ಕುರಿತ ವಿಡಿಯೋವೊಂದು ವೈರಲ್ ಆಗಿದ್ದು, ಈ ಶಾಕಿಂಗ್ ದೃಶ್ಯವನ್ನು ಕಂಡು ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ.
ಈ ಕುರಿತ ವಿಡಿಯೋವನ್ನು TheBrutaNature ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಕೊಟ್ಟಿಗೆಯಲ್ಲಿದ್ದ ದನವೊಂದು ಅಲ್ಲೇ ಪಕ್ಕದಲ್ಲಿ ಓಡಾಡುತ್ತಿದ್ದ ಕೋಳಿಯನ್ನು ಹಿಡಿದು ತಾನು ಸಸ್ಯಾಹಾರಿ ಎಂಬುದನ್ನು ಮರೆತು ಹುಲ್ಲು ಜಗಿದಂತೆ ಜೀವಂತ ಕೋಳಿಯನ್ನು ಬಾಯೊಳಗೆ ಹಾಕಿ ಜಗಿಯುತ್ತಿರುವ ದೃಶ್ಯವನ್ನು ಕಾಣಬಹುದು.
ನವೆಂಬರ್ 27 ರಂದು ಹಂಚಿಕೊಳ್ಳಲಾದ ಈ ವಿಡಿಯೋ 6.4 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನಾನು ಇದೇ ಮೊದಲ ಬಾರಿಗೆ ಮಾಂಸಹಾರಿ ಹಸುವನ್ನು ನೋಡಿದ್ದುʼ ಎಂಬ ತಮಾಷೆಯ ಕಾಮೆಂಟ್ ಬರೆದುಕೊಂಡಿದ್ದಾರೆ.
ಮತ್ತೊಬ್ಬ ಬಳಕೆದಾರರು ʼಬಹುಶಃ ಪ್ರೋಟೀನ್ ಸಿಗಲೆಂದು ಕೋಳಿಯನ್ನು ತಿಂದಿರಬಹುದುʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼದೇಹಕ್ಕೆ ಬೇಕಾದ ಅಗತ್ಯ ಖನಿಜಗಳ ಕೊರತೆಯಿಂದಾಗಿ ಹಸು ಕೋಳಿಯನ್ನು ತಿಂದಿರಬಹುದುʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ.
Leave a Comment