ಖ್ಯಾತ ಗಾಯಕಿ ಶಾರದಾ ಸಿನ್ಹಾ ನಿಧನ; ಪ್ರಧಾನಿ ನರೇಂದ್ರ ಮೋದಿ ಸಂತಾಪ

Sharda Sinha
Spread the love

ನ್ಯೂಸ್ ಆ್ಯರೋ: ಬಿಹಾರದ ಖ್ಯಾತ ಜಾನಪದ ಗಾಯಕಿ ಶಾರದಾ ಸಿನ್ಹಾ ವಿಧಿವಶರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ವೆಂಟಿಲೇಟರ್ ಸಹಾಯದಿಂದ ಉಸಿರಾಡುತ್ತಿದ್ದರು. ಆದ್ರೆ, ಚಿಕಿತ್ಸೆ ಫಲಿಸದೆ ವಿಧಿವಶರಾಗಿದ್ದಾರೆ.

ತಮ್ಮ ಸುಮಧುರ ಕಂಠದಿಂದ 40 ವರ್ಷಕ್ಕೂ ಹೆಚ್ಚು ಕಲಾ ಮೈಥಿಲಿ ಮತ್ತು ಭೋಜ್‌ಪುರಿ ಸಂಗೀತಕ್ಕೆ ಶಾರದಾ ವಿಶಿಷ್ಟವಾದ ಕೊಡುಗೆ ನೀಡಿದ್ದಾರೆ. ಹಿಂದಿ ಚಿತ್ರರಂಗದಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಅನೇಕ ಜನಪ್ರಿಯ ಹಾಡುಗಳನ್ನ ಹಾದಿ ಸಂಗೀತ ಪ್ರಿಯರ ಮನಗೆದ್ದಿದ್ದಾರೆ.

ಶಾರದಾ ಸಿನ್ಹಾ ಅವರಿಗೆ 72 ವರ್ಷ ವಯಸ್ಸಾಗಿತ್ತು.ಬಾಲ್ಯದಿಂದಲೂ ಸಂಗೀತದಲ್ಲಿ ಶಾರದಾ ಆಸಕ್ತಿ ಹೊಂದಿದ್ದರ ಅವರು ವಿಶಿಷ್ಟ ಕಂಠದಿಂದ ಎಲ್ಲೆಡೆ ಮನೆಮಾತಾಗಿದ್ದರು. ಅವರ ಛತ್ ಪೂಜಾ ಹಾಡುಗಳು ಬಹಳ ಫೇಮಸ್ ಆಗಿದ್ದವು. ಶಾರದಾ ಅವರ ಸಾಧನೆ ಗುರುತಿಸಿದ ಸರ್ಕಾರ ‘ಪದ್ಮಶ್ರೀ’ ಮತ್ತು ‘ಪದ್ಮಭೂಷಣ’ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ.

ಗಾಯಕಿ ಶಾರದಾ ಅವರ ನಿಧನಕ್ಕೆ ಅನೇಕರು ಕಂಬನಿ ಮಿಡಿದಿದ್ದು, ಸ್ವತಃ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ. “ಮೈಥಿಲಿ ಮತ್ತು ಭೋಜ್‌ಪುರಿ ಜಾನಪದ ಹಾಡುಗಳು ಕಳೆದ ಹಲವಾರು ದಶಕಗಳಿಂದ ಬಹಳ ಜನಪ್ರಿಯವಾಗಿವೆ. ಅವರ ಸಾವು ಅತೀವ ದುಃಖ ತಂದಿದೆ. ಮಹಾನ್ ಹಬ್ಬವಾದ ಛಾತ್‌ಗೆ ಸಂಬಂಧಿಸಿದ ಅವರ ಸುಮಧುರ ಹಾಡುಗಳ ಪ್ರತಿಧ್ವನಿ ಯಾವಾಗಲೂ ಉಳಿಯುತ್ತದೆ. ಅವರ ನಿಧನ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Leave a Comment

Leave a Reply

Your email address will not be published. Required fields are marked *

error: Content is protected !!