ಬಿಗ್​ಬಾಸ್​ಗೆ ಸ್ನೇಹಾ ವೈಲ್ಡ್ ​ಕಾರ್ಡ್ ಎಂಟ್ರಿ; ಈ ಬಗ್ಗೆ ಸಂಜನಾ ಹೇಳಿದ್ದೇನು?

sanajana burli
Spread the love

ನ್ಯೂಸ್ ಆ್ಯರೋ: ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ಯಾರೂ ಊಹಿಸದ ಟ್ವಿಸ್ಟ್ ಬಂದುಬಿಟ್ಟಿದೆ. ಪುಟ್ಟಕ್ಕನ ಮಗಳು ಸ್ನೇಹಾ (ಸಂಜನಾ ಬುರ್ಲಿ) ನಿಧನ ಹೊಂದಿದ್ದಾಳೆ. ಈ ಬೆಳವಣಿಗೆಯಿಂದ ಧಾರಾವಾಹಿಯ ನಿರ್ದೇಶಕರ ಮೇಲೆ ವೀಕ್ಷಕರಿಗೆ ಸಿಟ್ಟು ಬರುವಂತೆ ಆಗಿದೆ. ಇದರಲ್ಲಿನ ಕೊನೆಯ ದೃಶ್ಯಗಳು ಕಲ್ಲು ಹೃದಯಬನ್ನೂ ಕರಗಿಸುವಂತಿವೆ.

Sanjana 2

ಪ್ರತಿಯೊಬ್ಬರ ಅಭಿನಯ ಮನ ಮುಟ್ಟುವಂತಿದೆ. ಅಂದ್ಹಾಗೆ, ಸ್ನೇಹಾಳಿಗೆ ಸಕಲ ಸರ್ಕಾರಿ ಗೌರವಗಳನ್ನ ನೀಡಲಾಯ್ತು. ಈ ದೃಶ್ಯದ ಸಿದ್ಧತೆಗೆ ರಿಯಲ್​ ಪೊಲೀಸ್​ ಬಂದು ಎಲ್ಲಾ ಕಲಾವಿದರಿಗೆ ಟ್ರೈನಿಂಗ್​ ಮಾಡಿದ್ದರಂತೆ. ಇನ್ನೂ ಸ್ನೇಹಾ ಪಾತ್ರ ಮುಕ್ತಾಯವಾಗಿದೆ.

ಸೀರಿಯಲ್​ನಿಂದ ಆಚೆ ಬಂದಿದ್ದ ಸ್ನೇಹ ಅಂದ್ರೆ ಸಂಜನಾ ಬುರ್ಲಿ ಅವರಿಗೆ ಬಿಗ್​ಬಾಸ್​ನಿಂದ ಆಫರ್​ ಬಂದಿದೆ. ಹೀಗಾಗಿ ಅವರನ್ನು ಸೀರಿಯಲ್​ನಲ್ಲಿ ಅಪಘಾತ ಮಾಡಿಸಿದ್ದಾರೆ ಅಂತ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಕಾಮೆಂಟ್ಸ್​ಗಳನ್ನು ಹಾಕುತ್ತಿದ್ದಾರೆ. ಇನ್ನೂ ಈ ಬಗ್ಗೆ ಕೂಡ ಸಂಜನಾ ಅವರು ಮಾತಾಡಿದ್ದಾರೆ.

“ನಾನು ಸೀರಿಯಲ್​ಗೆ 3 ತಿಂಗಳು ನೋಟೀಸ್​ ಪಿರಿಯಡ್ ಕೊಟ್ಟಿದೆ. ಆಗ ನಮ್ಮ ಡೈರೆಕ್ಟರ್ ಆರೂರ್ ಜಗದೀಶ್ ಅವರು ಸೋಷಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್​ ಹಾಕಿದ್ದರು. ಪ್ರಮುಖ ಪಾತ್ರಕ್ಕೆ ನಟಿ ಬೇಕಾಗಿದ್ದಾರೆ ಅಂತ. ಸ್ನೇಹಾಳ ಕ್ಯಾರೆಕ್ಟರ್​ಗೆ ರಿಪ್ಲೇಸ್ ಮಾಡೋದಕ್ಕೆ ಅಲ್ಲ. ಆಗ ಸಾಕಷ್ಟು ಮಂದಿ ಇದನ್ನು ಗೇಸ್​ ಮಾಡಿದ್ದರು. ಸಂಜನಾ ಅವರು ಬಿಗ್​ಬಾಸ್​ಗೆ ಹೋಗುತ್ತಾರೆ ಅಂತ ಮುಂಚೆಯೇ ಗೇಸ್​ ಮಾಡಿದ್ದರು. ಆದರೆ ಈಗ ಸ್ನೇಹಾ ಕ್ಯಾರೆಕ್ಟರ್​ ಎಂಡ್ ಆದ ಮೇಲೆ ಬಿಗ್​ಬಾಸ್​ಗೆ ವೈಲ್ಡ್​ಕಾರ್ಡ್ ಎಂಟ್ರಿ ಕೊಡುತ್ತಾರೆ ಅಂತ ಜನ ಅಂದುಕೊಳ್ಳುತ್ತಿದ್ದಾರೆ. ನಾನು ಯಾವ ರಿಯಾಲಿಟಿ ಶೋಗೂ ಹೋಗುತ್ತಿಲ್ಲ” ಅಂತ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

Leave a Comment

Leave a Reply

Your email address will not be published. Required fields are marked *

error: Content is protected !!