ಅಭಿಷೇಕ್ – ಕರಿಷ್ಮಾ ಕಪೂರ್ ಎಂಗೇಜ್ಮೆಂಟ್; ಸೊಸೆಯನ್ನು ಪರಿಚಯಿಸಿದ್ದ ಜಯಾ ಬಚ್ಚನ್ ವಿಡಿಯೋ ವೈರಲ್
ನ್ಯೂಸ್ ಆ್ಯರೋ: ಸಾಮಾಜಿಕ ಮಾಧ್ಯಮದಲ್ಲಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ವಿಚ್ಛೇದನದ ವದಂತಿಗಳ ಕಳೆದ ಕೆಲವು ತಿಂಗಳುಗಳಿಂದ ಕೇಳಿ ಬರುತ್ತಲೇ ಇದೆ. ಅನಂತ್-ರಾಧಿಕಾ ಮದುವೆಗೆ ಐಶ್ವರ್ಯಾ-ಅಭಿಷೇಕ್ ಪ್ರತ್ಯೇಕವಾಗಿ ಆಗಮಿಸಿದ್ದು ಇದಕ್ಕೆ ಮತ್ತಷ್ಟು ಪುಷ್ಠಿ ನೀಡಿತು. ಇದಾದ ನಂತರ ಒಂದೋ ಎರಡೋ ಬಾರಿ ಬಿಟ್ಟರೆ ಇವರಿಬ್ಬರೂ ಒಟ್ಟಿಗೆ ಕಾಣಿಸಲೇ ಇಲ್ಲ.
ಇನ್ನು ಈ ಸಂದರ್ಭದಲ್ಲಿ ಹೆಚ್ಚು ಸದ್ದು ಮಾಡುತ್ತಿರುವುದು ನಟಿ ಕರಿಷ್ಮಾ ಕಪೂರ್. ಇದಕ್ಕೆ ಕಾರಣವೂ ಇದೆ. ಐಶ್ವರ್ಯರೈ ಜೊತೆ ಲವ್ಗೆ ಬೀಳುವ ಮುನ್ನ ಅಭಿಷೇಕ್ ಅವರು ಕರಿಷ್ಮಾ ಕಪೂರ್ ಜೊತೆ ಸಂಬಂಧದಲ್ಲಿದ್ದರು. ಇವರಿಬ್ಬರೂ ಮದುವೆಯಾಗುತ್ತಾರೆ ಎಂದೇ ಹೇಳಲಾಗಿತ್ತು. 2002ರಲ್ಲಿ ಜಯಾ ಬಚ್ಚನ್ ಅವರು ತಮ್ಮ ಹೊಸ ಸೊಸೆ ಕರಿಷ್ಮಾ ಕಪೂರ್ ಎಂದು ಆಕೆಯ ಪರಿಚಯವನ್ನೂ ಸಾರ್ವಜನಿಕವಾಗಿಸಿದ್ದರು.
ಬಚ್ಚನ್ ಕುಟುಂಬಕ್ಕೆ ಕಪೂರ್ ಫ್ಯಾಮಿಲಿಯಾಕೆಯನ್ನು ಸೊಸೆಯಾಗಿ ಸ್ವೀಕರಿಸುತ್ತಿದ್ದೇವೆ. ಈಕೆ ನಮ್ಮ ಮನೆಯ ಹೊಸ ಅತಿಥಿ ಎಂದು ಕರಿಷ್ಮಾರನ್ನು ಕರೆದಿದ್ದರು. ಆಗ ಕರಿಷ್ಮಾ ಮತ್ತು ಅಭಿಷೇಕ್ ಅವರ ಮೊಗದಲ್ಲಿ ಖುಷಿ ಇರುವುದನ್ನು ಇದೀಗ ವೈರಲ್ ಆಗಿರೋ ವಿಡಿಯೋದಲ್ಲಿ ನೋಡಬಹುದು.
ಆದರೆ ಅದೇನಾಯಿತೋ, ಸಂಬಂಧ ಮುರಿದು ಬಿತ್ತು. ಐಶ್ವರ್ಯ ರೈ ಜೊತೆ ಮದುವೆಯಾಯಿತು. ಐಶ್ವರ್ಯ ಜೊತೆಗಿನ ಮದುವೆ ಅಮಿತಾಭ್ ಅವರ ಪುತ್ರಿ ಶ್ವೇತಾ ಅವರಿಗೆ ಇಷ್ಟವಿರಲಿಲ್ಲ. ಅವರಿಗೆ ಅಭಿಷೇಕ್ ಅವರ ಮಾಜಿ ಲವರ್ ಕರಿಷ್ಮಾ ಕಪೂರ್ ಅವರನ್ನು ಅಣ್ಣನಿಗೆ ಕೊಟ್ಟು ಮದ್ವೆ ಮಾಡಿಸಬೇಕು ಎಂದುಕೊಂಡಿದ್ದರು. ಹೀಗೆ ಬಚ್ಚನ್ ಕುಟುಂಬದ ಕೆಲವರ ವಿರೋಧದ ನಡುವೆ ಐಶ್-ಅಭಿ ಮದುವೆ ನಡೆದಿತ್ತು. ಆದರೆ ಇಷ್ಟು ವರ್ಷಗಳ ಬಳಿಕ ಇಬ್ಬರ ನಡುವೆ ವಿಚ್ಛೇದನದ ಸುದ್ದಿ ಸುಳಿದಾಡುತ್ತಿದೆ. ಇದು ಬಹುತೇಕ ಫಿಕ್ಸ್ ಎನ್ನುವುದಾಗಿ ಬಿ-ಟೌನ್ ಹೇಳುತ್ತಿದೆ. ಆದರೆ ಅಧಿಕೃತವಾಗಿ ಯಾವುದೇ ಸುದ್ದಿ ಹೊರ ಬಂದಿಲ್ಲ.
ಇದರ ನಡುವೆಯೇ, ಅಭಿಷೇಕ್ ಅವರ ಹೆಸರು, ನಟಿ ನಮ್ರತಾ ಕೌರ್ ಜೊತೆ ಕೇಳಿಬರುತ್ತಿದೆ. ಐಷ್-ಅಭಿ ಸಂಬಂಧ ಹಳಸಲು ನಟಿ ನಿಮ್ರತ್ ಕೌರ್ ಎನ್ನುವ ವಿಷಯ ಭಾರಿ ಸದ್ದು ಮಾಡುತ್ತಿದೆ. ದಸ್ವಿ ಚಿತ್ರದ ಶೂಟಿಂಗ್ ಸಮಯದಲ್ಲಿ ಇಬ್ಬರ ನಡುವೆ ಲವ್ ಶುರುವಾಗಿದೆ ಎಂದು ಹೇಳಲಾಗುತ್ತಿದೆ. ಐಶ್ ಮತ್ತು ಅಭಿ ದಾಂಪತ್ಯದ ಬಿರುಕಿಗೆ ಇವರೇ ಕಾರಣ ಎಂದೂ ಹೇಳಲಾಗುತ್ತಿದೆ. ಆದರೆ ಇದುವರೆಗೂ ಅಭಿಷೇಕ್ ಬಚ್ಚನ್ ಆಗಲಿ ಐಶ್ವರ್ಯ ರೈ ಆಗಲಿ, ಅಥವಾ ಆರೋಪ ಹೊತ್ತಿರುವ ನಿಮ್ರತ್ ಕೌರ ಆಗಲಿ ಪ್ರತಿಕ್ರಿಯೆಯನ್ನು ನೀಡಿಲ್ಲ.
ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ:
https://www.instagram.com/reel/C-773r_u5C_/?utm_source=ig_embed&utm_campaign=loading
Leave a Comment