ದರ್ಶನ್​ಗೆ ದೀಪಾವಳಿ ಗಿಫ್ಟ್;‌ ಹೈಕೋರ್ಟ್ ನಿಂದ ಷರತ್ತುಬದ್ಧ ಜಾಮೀನು ಮಂಜೂರು

darshan
Spread the love

ನ್ಯೂಸ್ ಆ್ಯರೋ: ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ A1 ಆರೋಪಿಯಾಗಿರುವ ದರ್ಶನ್​​​ಗೆ ಕೊನೆಗೂ ನಿಟ್ಟುಸಿರು ಬಿಡುವಂತಾಗಿದೆ. ಬಳ್ಳಾರಿ ಜೈಲು ಸೇರಿದ ಬಳಿಕ ಸಂಕಷ್ಟ ಅನುಭವಿಸುತ್ತಿದ್ದ ದರ್ಶನ್​ಗೆ ಕೋರ್ಟ್​ ಅಲ್ಪಾವಧಿಯ ಮುಕ್ತಿ ನೀಡಿದೆ. ಬೆನ್ನು ನೋವಿನಿಂದ ಬಳಲುತ್ತಿದ್ದ ದರ್ಶನ್​​ಗೆ ಚಿಕಿತ್ಸೆಯ ಅನಿವಾರ್ಯತೆ ಇರುವ ಕಾರಣ ಮಧ್ಯಂತರ ಜಾಮೀನು ಸಿಕ್ಕಿದೆ. ಇದರಿಂದಾಗಿ ದರ್ಶನ್​ಗೆ ಸ್ಪಲ್ಪ ಸಮಾಧಾನವಾದಂತಿದೆ.

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬಾತ ದರ್ಶನ್​ ಗೆಳತಿ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಕಳುಹಿಸಿದ ಕಾರಣ ಆತನನ್ನು ಕರೆಸಿ ಕೊಲೆ ಮಾಡಲಾಗಿತ್ತು. ಆರ್​​ ಆರ್​ ನಗರದ ಪಟ್ಟಣಗೆರೆ ಶೆಡ್​ನಲ್ಲಿ ಆರೋಪಿ ದರ್ಶನ್​ ಮತ್ತು ಆತನ ಸಹಚರರು ರೇಣುಕಾಸ್ವಾಮಿಗೆ ಹೊಡೆದು ಭೀಕರವಾಗಿ ಕೊಲೆ ಮಾಡಿದ್ದರು.

ಬಳಿಕ ರೇಣುಕಾಸ್ವಾಮಿ ಶವವನ್ನು ಸುಮನಹಳ್ಳಿ ಸೇತುವೆ ಬಳಿ ಎಸೆದಿದ್ದರು. ಈ ಪ್ರಕರಣದ ಸಂಬಂಧ ತನಿಖೆ ನಡೆಸಿದ ಪೊಲೀಸರಿಗೆ ಇದರಲ್ಲಿ ಸ್ಯಾಂಡಲ್​ವುಡ್​ ನಟ ದರ್ಶನ್​ ಇರುವ ಸಂಗತಿ ಬಯಲಾಗಿದೆ. ಪ್ರಕರಣದ ಸಂಬಂಧ ಜೂನ್ 11ರಂದು ದರ್ಶನ್​​ರನ್ನು ಅರೆಸ್ಟ್​ ಮಾಡಲಾಯ್ತು.

ಪ್ರಾರಂಭದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ದರ್ಶನ್​ಗೆ ಜೈಲಿನೊಳಗೆ ವಿಡಿಯೋ ಕರೆ, ರಾಜ ಮರ್ಯಾದೆ ನೀಡುತ್ತಿರುವ ವಿಚಾರ ದೃಶ್ಯ ಸಮೇತ ಬೆಳಕಿಗೆ ಬಂದಿತ್ತು. ಇದೇ ಕಾರಣಕ್ಕೆ ದರ್ಶನ್​​ನನ್ನು ಬಳ್ಳಾರಿ ಶಿಫ್ಟ್ ಮಾಡಲಾಯ್ತು.​ ಬಳಿಕ ದರ್ಶನ್​ಗೆ ಬೆನ್ನು ನೋವು ಜಾಸ್ತಿಯಾಗಿತ್ತು.

ಕೊನೆಗೆ ಫಿಜಿಯೋಥೆರಪಿ ಚಿಕಿತ್ಸೆ ಪಡೆದರು. ಆದರೂ ನೋವು ಕಡಿಮೆಯಾಗಿರಲಿಲ್ಲ. ಹೀಗಾಗಿ ದರ್ಶನ್​ಗೆ ಆಪರೇಷನ್​ ಆಗತ್ಯವಿದ್ದು, ಮಧ್ಯಂತರ ಜಾಮೀನಿಗಾಗಿ ಅರ್ಜಿ ಸಲ್ಲಿಸಲಾಗಿದೆ, ಇದರ ವಾದ-ಪ್ರತಿವಾದ ಮುಕ್ತಾಯವಾಗಿ, ಇಂದು ಕೋರ್ಟ್​ ತೀರ್ಪು ನೀಡಿದೆ.

Leave a Comment

Leave a Reply

Your email address will not be published. Required fields are marked *

error: Content is protected !!