ಕರ್ನಾಟಕದಲ್ಲಿ ಗೋಲ್​ ಗಪ್ಪ ಬ್ಯಾನ್?; ಕಠಿಣ ನಿರ್ಧಾರಕ್ಕೆ ಮುಂದಾದ ಆಹಾರ ಇಲಾಖೆ

gol gappa
Spread the love

ನ್ಯೂಸ್ ಆ್ಯರೋ: ಗೋಲ್​​ ಗಪ್ಪಾ ತಿಂದು ಬರುವ ಯುವಕ-ಯುವತಿಯರಿಗೆ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ಕೆಲವು ಭಾಗಗಳಲ್ಲಿ ಗೋಲ್​ ಗಪ್ಪಾದ ಟೇಸ್ಟ್ ಹೆಚ್ಚಿಸಲು, ಆರೋಗ್ಯಕ್ಕೆ ಹಾನಿಕಾರಕ ವಸ್ತುಗಳನ್ನು ಬಳಸಲಾಗುತ್ತಿದೆ ಎಂಬ ದೂರುಗಳು ಕೇಳಿಬಂದಿದ್ದವು.

ಅದಕ್ಕೆ ಸಂಬಂಧಿಸಿದ ಕೆಲವು ವಿಡಿಯೋ ಹಾಗೂ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಕರ್ನಾಟಕ ಆಹಾರ ಇಲಾಖೆ, ಗೋಲ್ ಗಪ್ಪ ಪೂರಿ ತಯಾರಿಕಾ ಘಟಕಗಳ ಮೇಲೆ ಆಹಾರ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಬೀದಿಬದಿ ಮಾರಾಟವಾಗುವ ಗೋಲ್​ ಗಪ್ಪ ಅಂಗಡಿಗಳ ಮೇಲೆ ಫುಡ್ ಟೆಸ್ಟಿಂಗ್ ಡ್ರೈವ್ ನಡೆಯುತ್ತಿದೆ.

ಗೋಲ್ ಗಪ್ಪವನ್ನ ಪರೀಕ್ಷೆಗೆ ಒಳಪಡಿಸ್ತಿದ್ದು, ಬೆಂಗಳೂರಲ್ಲಿ ಱಂಡಂ ಆಗಿ ಸ್ಯಾಂಪಲ್ಸ್ ಸಂಗ್ರಹ ಮಾಡಲಾಗುತ್ತಿದೆ. ರಾಜ್ಯಾದ್ಯಂತ ಒಟ್ಟು 200ಕ್ಕೂ ಹೆಚ್ಚು ಸ್ಯಾಂಪಲ್ಸ್ ಸಂಗ್ರಹ ಮಾಡಿ ಮಾಹಿತಿ ಕೆಲ ಹಾಕಲಾಗುತ್ತಿದೆ.

ಗೋಲ್ ಗಪ್ಪಗೆ ಬಳಸುವ ಪೂರಿ ಹೇಗೆ ತಯಾರು ಮಾಡ್ತಾರೆ? ಅದಕ್ಕೆ ಏನೆಲ್ಲಾ ಪದಾರ್ಥ ಹಾಕಲಾಗುತ್ತದೆ? ಇದ್ರಿಂದ ಏನೆಲ್ಲಾ ಪರಿಣಾಮ ಬೀರಲಿದೆ ಎಂಬುವುದನ್ನು ತಿಳಿಯಲು ಆಹಾರ ಇಲಾಖೆ ಮುಂದಾಗಿದೆ. ಈ ಹಿನ್ನೆಲೆ ಕಳೆದ ಎರಡು ದಿನದಿಂದ ತಯಾರಿಕಾ ಘಟಕದ ಮೇಲೆ ದಾಳಿ ನಡೆಸುತ್ತಿದ್ದು, ರಾಜ್ಯಾದ್ಯಂತ ಗೋಲ್​ ಗಪ್ಪ ಬ್ಯಾನ್ ಆಗಲಿದೆಯಾ ಎಂಬ ಅನುಮಾನ ಶುರುವಾಗಿದೆ.

Leave a Comment

Leave a Reply

Your email address will not be published. Required fields are marked *

error: Content is protected !!