ಅಂತರಾಷ್ಟ್ರೀಯ ಟಿ20 ಕ್ರಿಕೆಟ್ ನಿಂದ ವಿರಾಟ್ ಕೊಹ್ಲಿ ನಿವೃತ್ತಿ ಘೋಷಣೆ – ಫೈನಲ್ ಪಂದ್ಯವೇ ನನ್ನ ಕೊನೆಯ ಪಂದ್ಯ ಎಂದ ಕಿಂಗ್…!!
ನ್ಯೂಸ್ ಆ್ಯರೋ : ಟಿಟ್ವೆಂಟಿ ವಿಶ್ವಕಪ್ ಟೀಂ ಇಂಡಿಯಾ ಪಾಲಾಗುತ್ತಲೇ ಕಿಂಗ್ ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ಟಿ20 ಪಂದ್ಯಗಳಿಗೆ ವಿದಾಯ ಘೋಷಿಸಿದ್ದಾರೆ.
ಫೈನಲ್ ಪಂದ್ಯದ ಪಂದ್ಯಶ್ರೇಷ್ಟ ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ ತಾನು ಅಂತರಾಷ್ಟ್ರೀಯ ಟಿ20 ಕ್ರಿಕೆಟ್ ಪಂದ್ಯಗಳಿಗೆ ವಿದಾಯ ಘೋಷಿಸುವುದಾಗಿ ಹೇಳಿದರು.
ಇದು ನನ್ನ ಕೊನೆಯ ಟಿ20 ವಿಶ್ವಕಪ್, ಅಲ್ಲದೇ ಇದೇ ನನ್ನ ಕೊನೆಯ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯ ಎಂದು ವಿರಾಟ್ ಕೊಹ್ಲಿ ನುಡಿದರು.
Leave a Comment