ಕ್ಲಬ್ ಅನ್ನು ಮತಾಂತರಕ್ಕೆ ಬಳಸಿದ ತಂದೆ; ಸದಸ್ಯತ್ವ ಕಳೆದುಕೊಂಡ ಟೀಂ ಇಂಡಿಯಾದ ಸ್ಟಾರ್ ಆಟಗಾರ್ತಿ
ನ್ಯೂಸ್ ಆ್ಯರೋ: ಮುಂಬೈನ ಅತ್ಯಂತ ಹಳೆಯ ಕ್ಲಬ್‌ಗಳಲ್ಲಿ ಒಂದಾದ ಖಾರ್ ಜಿಮ್ಖಾನಾ ಕ್ಲಬ್ ಭಾರತೀಯ ಮಹಿಳಾ ಕ್ರಿಕೆಟರ್ ಜೆಮಿಮಾ ರಾಡ್ರಿಗಸ್ ಅವರ ಸದಸ್ಯತ್ವವನ್ನು ರದ್ದುಗೊಳಿಸಿದೆ. ಜೆಮಿಮಾ ರಾಡ್ರಿಗಸ್ ಅವರ ತಂದೆಯ ‘ಧಾರ್ಮಿಕ ಚಟುವಟಿಕೆಗಳಿಂದ’ ಸದಸ್ಯತ್ವವನ್ನು ರದ್ದುಗೊಳಿಸಿದೆ.
ಭಾನುವಾರ ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಜೆಮಿಮಾ ಅವರ ಸದಸ್ಯತ್ವವನ್ನು ರದ್ದುಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಖಾರ್ ಜಿಮ್ಖಾನಾ ಅಧಿಕಾರಿಗಳ ಪ್ರಕಾರ, ಜೆಮಿಮಾ ರಾಡ್ರಿಗಸ್ ಅವರ ತಂದೆ ಐವಾನ್ ಕ್ಲಬ್ ಆವರಣವನ್ನು ‘ಧಾರ್ಮಿಕ ಚಟುವಟಿಕೆಗಳಿಗೆ’ ಬಳಸುವುದನ್ನು ಕೆಲವು ಸದಸ್ಯರು ಆಕ್ಷೇಪಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ದುರ್ಬಲರನ್ನು ಮತಾಂತರಗೊಳಿಸುವ ಕಾರ್ಯಕ್ರಮಗಳು ನಡೆಯುತ್ತಿತ್ತು ಎಂದು ಆರೋಪಿಸಿದರು.
ಜೆಮಿಮಾ ರೋಡ್ರಿಗಸ್ ಅವರ ಮೂರು ವರ್ಷಗಳ ಸದಸ್ಯತ್ವವನ್ನು ರದ್ದುಗೊಳಿಸಲಾಗಿದೆ. ಮೂಲಗಳ ಪ್ರಕಾರ, ಜೆಮಿಮಾ ರೋಡ್ರಿಗಸ್ ಅವರ ತಂದೆ ಬ್ರದರ್ ಮ್ಯಾನುಯೆಲ್ ಮಿನಿಸ್ಟ್ರೀಸ್ ಎಂಬ ಸಂಸ್ಥೆಯೊಂದಿಗೆ ಸಂಬಂಧ ಹೊಂದಿದ್ದರು. ಜೆಮಿಮಾ ಅವರ ಹೆಸರಿನಲ್ಲಿ ಐವಾನ್ ಅಧ್ಯಕ್ಷೀಯ ಸಭಾಂಗಣವನ್ನು ಸುಮಾರು ಒಂದೂವರೆ ವರ್ಷಗಳ ಕಾಲ ಕಾಯ್ದಿರಿಸಿದ್ದು 35 ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಅವರ ಮೇಲೆ ಧಾರ್ಮಿಕ ಮತಾಂತರದ ಆರೋಪವಿದೆ ಎಂದು ವರದಿಯಾಗಿದೆ.
ಖಾರ್ ಜಿಮಖಾನಾ ವ್ಯವಸ್ಥಾಪಕ ಸಮಿತಿ ಸದಸ್ಯ ಶಿವ ಮಲ್ಹೋತ್ರಾ ಮಾತನಾಡಿ, ದೇಶದಾದ್ಯಂತ ಮತಾಂತರದ ಬಗ್ಗೆ ನಾವು ಕೇಳುತ್ತೇವೆ. ಆದರೆ ಇದು ನಮ್ಮ ಮೂಗಿನ ನೇರಕ್ಕೆ ನಡೆಯುತ್ತಿದೆ. ಖಾರ್ ಜಿಮ್ಖಾನಾ ಸಂವಿಧಾನದ ನಿಯಮ 4A ಪ್ರಕಾರ, ಈ ಕ್ಲಬ್ ಯಾವುದೇ ಧರ್ಮಕ್ಕೆ ಸಂಬಂಧಿಸಿಲ್ಲ. ಧಾರ್ಮಿಕ ಚಟುವಟಿಕೆಗೆ ಅವಕಾಶ ನೀಡುವುದಿಲ್ಲ.
Leave a Comment