ಸಂಕಷ್ಟದಲ್ಲಿ ಮಿಲ್ಕ್ ಬ್ಯೂಟಿ ತಮನ್ನಾ; ಇಡಿ ವಿಚಾರಣೆಗೆ ಹಾಜರಾಗುವಂತದ್ದು ಏನಾಯ್ತು ?
ನ್ಯೂಸ್ ಆ್ಯರೋ: ನಟಿ ತಮನ್ನಾ ಭಾಟಿಯಾ ಸಂಕಷ್ಟಗಳು ಹೆಚ್ಚಾಗುತ್ತಿದೆ. ಮಹದೇವ್ ಬೆಟ್ಟಿಂಗ್ ಆಪ್ ಪ್ರಕರಣದಲ್ಲಿ ನಟಿ ಹೆಸರು ಕೇಳಿ ಬಂದಿದೆ. ಚಲನಚಿತ್ರ ನಟಿಯನ್ನು ಜಾರಿ ನಿರ್ದೇಶನಾಲಯ ಗುವಾಹಟಿಯ ಕಚೇರಿಯಲ್ಲಿ ವಿಚಾರಣೆಗೆ ಒಳಪಡಿಸಿದೆ.
ಈ ಪ್ರಕರಣದಲ್ಲಿ, ತಮನ್ನಾ ಭಾಟಿಯಾ ಅವರನ್ನು ಆರೋಪಿಯಾಗಿ ವಿಚಾರಣೆ ಮಾಡಲಾಗುತ್ತಿಲ್ಲ, ಆದರೆ ಈ ಅಪ್ಲಿಕೇಶನ್ ಪ್ರಚಾರಕ್ಕೆ ಸಂಬಂಧಿಸಿದಂತೆ ವಿಚಾರಣೆ ಮಾಡಲಾಗಿದೆ ಎನ್ನಲಾಗಿದೆ. HPZ ಆಪ್ ಹಗರಣದಲ್ಲಿ ತಮನ್ನಾ ಭಾಟಿಯಾ ಅವರನ್ನು ಇಡಿ ವಿಚಾರಣೆಗೆ ಕರೆದಿತ್ತು. ತಮನ್ನಾ ಮಧ್ಯಾಹ್ನ ಗುವಾಹಟಿಯ ಇಡಿ ಕಚೇರಿಗೆ ನಟಿ ಬಂದಿದ್ದಾರೆ.
ಈ ಆ್ಯಪ್ ಮೂಲಕ 57,000 ರೂಪಾಯಿ ಹೂಡಿಕೆಗೆ ದಿನಕ್ಕೆ 4,000 ರೂಪಾಯಿ ನೀಡುವುದಾಗಿ ಭರವಸೆ ನೀಡಿ ಕೋಟ್ಯಂತರ ರೂಪಾಯಿ ವಂಚಿಸಲಾಗಿದೆ. ವಂಚಿಸಲು, ಶೆಲ್ ಕಂಪನಿಗಳ ಹೆಸರಿನಲ್ಲಿ ವಿವಿಧ ಬ್ಯಾಂಕ್‌ಗಳಲ್ಲಿ ನಕಲಿ ಖಾತೆಗಳನ್ನು ತೆರೆಯಲಾಗಿದೆ, ಅದರಲ್ಲಿ ಹೂಡಿಕೆದಾರರಿಂದ ಹಣವನ್ನು ವರ್ಗಾಯಿಸಲಾಗಿದೆ.
ಮಹಾದೇವ್ ಅಪ್ಲಿಕೇಶನ್‌ನ ಕೆಲವು ಸ್ಟಾರ್‌ಗಳು ಸಹ HPZ ಗೆ ಸಂಪರ್ಕಗೊಂಡಿವೆ. ಫೇರ್‌ಪ್ಲೇ ಬೆಟ್ಟಿಂಗ್ ಅಪ್ಲಿಕೇಶನ್‌ನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳನ್ನು ವೀಕ್ಷಿಸುವುದನ್ನು ನಟಿ ಪ್ರಚಾರ ಮಾಡಿದ್ದಾರೆ ಎಂದು ವರದಿಯಾಗಿದೆ.
ಇನ್ನು ಮಹದೇವ್ ಆನ್‌ಲೈನ್ ಗೇಮಿಂಗ್ ಮತ್ತು ಬೆಟ್ಟಿಂಗ್ ಅಪ್ಲಿಕೇಶನ್‌ನಲ್ಲಿ ಐಪಿಎಲ್ ಪಂದ್ಯಗಳ ಅಕ್ರಮ ವೀಕ್ಷಣೆಯನ್ನು ಪ್ರಚಾರ ಮಾಡಿದ ಆರೋಪದಲ್ಲಿ ತಮನ್ನಾ ಭಾಟಿಯಾ ಅವರನ್ನು ಮಾತ್ರ ವಿಚಾರಣೆಗೆ ಒಳಪಡಿಸಲಾಗಿದೆ. ಈ ಸಂಬಂಧ ಇಡಿ ಸಮನ್ಸ್ ನೀಡಿತ್ತು.
Leave a Comment