ನೂತನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಗೆ ಶಾಕ್ ನೀಡಿದ ಕೋರ್ಟ್ – ರಾಹುಲ್ ಗಾಂಧಿ ವಿರುದ್ಧ ಸಮನ್ಸ್ ಜಾರಿ
ನ್ಯೂಸ್ ಆ್ಯರೋ : ಹಾಲಿ ಲೋಕಸಭೆಗೆ ನೂತನವಾಗಿ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಸಂಸದ ರಾಹುಲ್ ಗಾಂಧಿ ಅವರಿಗೆ ಉತ್ತರ ಪ್ರದೇಶದ ಕೋರ್ಟ್ ಶಾಕ್ ನೀಡಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ರಾಹುಲ್ ಗಾಂಧಿ ಅವರು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆ ಸಂಬಂಧ ಇದೇ ಜು.2ರಂದು ಖುದ್ದು ವಿಚಾರಣೆಗೆ ಹಾಜರಾಗಬೇಕು ಎಂದು ಉತ್ತರ ಪ್ರದೇಶದ ಸಂಸದ-ಶಾಸಕರ ಕೋರ್ಟ್ ಸಮನ್ಸ್ ಜಾರಿ ಮಾಡಿದೆ.
ಗೃಹ ಸಚಿವ ಅಮಿತ್ ಶಾ ವಿರುದ್ಧ ರಾಹುಲ್ ಗಾಂಧಿ ಮಾನಹಾನಿಕರ ಹೇಳಿಕೆಗಳನ್ನ ನೀಡಿದ್ದಾರೆ ಎಂದು ಆಪಾದಿಸಿ ಬಿಜೆಪಿಯ ನಾಯಕ ವಿಜಯ್ ಮಿಶ್ರಾ ಎಂಬುವವರು 2018ರಲ್ಲಿ ಕೇಸ್ ದಾಖಲಿಸಿದ್ದರು. ರಾಮ್ ಪ್ರತಾಪ್ ಎಂಬುವವರು ತಮ್ಮನ್ನು ಈ ಪ್ರಕರಣದಲ್ಲಿ ಭಾಗಿಯನ್ನಾಗಿ ಮಾಡಬೇಕೆಂದು ಒತ್ತಾಯಿಸಿದ್ದರು ಎಂದು ದೂರಿನ ವಕೀಲ ಸಂತೋಷ್ ಕುಮಾರ್ ಪಾಂಡೆ ಹೇಳಿದ್ದಾರೆ.
ಇದಕ್ಕೂ ಮೊದಲು ಈ ಕೇಸ್ ನಲ್ಲಿ ರಾಮ್ ಪ್ರತಾಪ್ ಗೂ ಪಾರ್ಟಿಯನ್ನಾಗಿ ಸೇರಿಸುವ ಮನವಿಯನ್ನು ರಾಹುಲ್ ಗಾಂಧಿ ಪರ ವಕೀಲ ಕಾಶಿ ಪ್ರಸಾದ್ ಶುಕ್ಲಾ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೇ ಪ್ರತಾಪ್ ನೇರವಾಗಿ ಭಾಗಿಯಾಗಿಲ್ಲ ಎಂದೂ ಪ್ರತಿ ವಾದಿಸಿದ್ದರು.
Leave a Comment