ಗಣಿ ಕಾರ್ಮಿಕರ ಮೇಲೆ ಗುಂಡಿನ ದಾಳಿ; 20 ಮಂದಿ ಸಾವು, ಹಲವರಿಗೆ ಗಾಯ

20 dead as armed
Spread the love

ನ್ಯೂಸ್ ಆ್ಯರೋ: ಪಾಕಿಸ್ತಾನ ಬಲೂಚಿಸ್ತಾನದಲ್ಲಿ ಬಂಧೂಕುದಾರಿಗಳು ನಡೆಸಿದ ಗುಂಡಿನ​ ದಾಳಿಯಲ್ಲಿ 20 ಮಂದಿ ಸಾವನ್ನಪ್ಪಿದ್ದು, 7ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಇಂದು ಈ ಮಾಹಿತಿ ನೀಡಿದ್ದಾರೆ. ದೇಶದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ನಡೆಯಲಿರುವ ಪ್ರಮುಖ ಭದ್ರತಾ ಶೃಂಗಸಭೆಗೆ ಕೆಲವು ದಿನಗಳ ಮೊದಲು ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ದಾಳಿ ನಡೆದಿದೆ.

ಗುರುವಾರ ತಡರಾತ್ರಿ ದುಕಿ ಜಿಲ್ಲೆಯ ಕಲ್ಲಿದ್ದಲು ಗಣಿ ಬಳಿಯಿರುವ ಮನೆಗಳ ಮೇಲೆ ಬಂದೂಕುಧಾರಿಗಳು ದಾಳಿ ನಡೆಸಿದ್ದಾರೆ. ಬಂದೂಕುಧಾರಿಗಳು ಜನರನ್ನು ಒಟ್ಟುಗೂಡಿಸಿದರು ಮತ್ತು ನಂತರ ಅವರ ಮೇಲೆ ಗುಂಡು ಹಾರಿಸಲು ಪ್ರಾರಂಭಿಸಿದರು. ಬಲಿಪಶುಗಳಲ್ಲಿ ಹೆಚ್ಚಿನವರು ಬಲೂಚಿಸ್ತಾನ ಮೂಲದವರೇ ಆಗಿದ್ದಾರೆ.

ಸತ್ತವರಲ್ಲಿ ಮೂವರು ಮತ್ತು ಗಾಯಗೊಂಡವರಲ್ಲಿ ನಾಲ್ವರು ಅಫ್ಘಾನ್ ಮೂಲದವರು ಎಂದು ಹೇಳಲಾಗಿದೆ. ಸದ್ಯ ಈ ದಾಳಿಯ ಹೊಣೆಯನ್ನು ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ. ಈ ಪ್ರಾಂತ್ಯವು ಸ್ವಾತಂತ್ರ್ಯವನ್ನು ಬಯಸುವ ಪ್ರತ್ಯೇಕತಾವಾದಿ ಗುಂಪುಗಳ ಭದ್ರಕೋಟೆಯಾಗಿದೆ.

ಬಲೂಚ್ ಲಿಬರೇಶನ್ ಆರ್ಮಿ (BLA) ಎಂಬ ಗುಂಪು ಪಾಕಿಸ್ತಾನದ ಅತಿದೊಡ್ಡ ವಿಮಾನ ನಿಲ್ದಾಣದ ಹೊರಗೆ ಚೀನಾದ ನಾಗರಿಕರ ಮೇಲೆ ದಾಳಿ ಮಾಡಿತ್ತು. ಸಾವಿರಾರು ಚೀನೀ ಪ್ರಜೆಗಳು ದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ, ಅವರಲ್ಲಿ ಹೆಚ್ಚಿನವರು ಬೀಜಿಂಗ್‌ನ ಬಿಲಿಯನ್-ಡಾಲರ್ ಬೆಲ್ಟ್ ಮತ್ತು ರೋಡ್ ಇನಿಶಿಯೇಟಿವ್‌ನಲ್ಲಿ ತೊಡಗಿಸಿಕೊಂಡಿದ್ದಾರೆ.

Leave a Comment

Leave a Reply

Your email address will not be published. Required fields are marked *

error: Content is protected !!