ಈ ದಾಳಿ ಸ್ಯಾಂಪಲ್ ಅಷ್ಟೇ. . : ಇಸ್ರೇಲ್‌ಗೆ ಇರಾನ್ ವಾರ್ನಿಂಗ್
ಟೆಹ್ರಾನ್: “ಈಗ ನಡೆಸಿರುವ ದಾಳಿ ನಮ್ಮ ಶಕ್ತಿಯ ಒಂದು ಮೂಲೆ ಮಾತ್ರ. ನಮ್ಮೊಂದಿಗೆ ಸಂಘರ್ಷಕ್ಕೆ ಇಳಿಯುವ ಸಾಹಸವನ್ನು ಎಂದೂ ಮಾಡಬೇಡಿ” ಎಂದು ಇಸ್ರೇಲ್‌ಗೆ ಇರಾನ್ ಎಚ್ಚರಿಕೆ ನೀಡಿದೆ.
ಈ ಬಗ್ಗೆ ಎಕ್ಸ್‌ನಲ್ಲಿ ತಿಳಿಸಿರುವ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್, ಈಗ ನಡೆಸಿರುವ ದಾಳಿ ನಮ್ಮ ಶಕ್ತಿಯ ಒಂದು ಮೂಲೆ ಮಾತ್ರ.
ಇರಾನ್ ಜೊತೆ ಸಂಘರ್ಷಕ್ಕೆ ಇಳಿಯುವ ಸಾಹಸ ಮಾಡಬೇಡಿ. ನಮ್ಮ ಈ ಕ್ರಮ ಇರಾನ್‌ನ ಹಿತಾಸಕ್ತಿ ಮತ್ತು ನಾಗರಿಕರ ರಕ್ಷಣೆಗಾಗಿ ಆಗಿದೆ. ಇರಾನ್ ಯುದ್ಧಕೋರನಲ್ಲ ಎಂದು ನೆತನ್ಯಾಹುಗೆ ತಿಳಿದಿರಲಿ. ಆದರೆ ಇರಾನ್ ತನ್ನ ಮೇಲಿನ ಯಾವುದೇ ಬೆದರಿಕೆಯ ವಿರುದ್ಧವೂ ದೃಢವಾಗಿ ನಿಂತಿದೆ ಎಂದು ಹೇಳಿದ್ದಾರೆ.
ಇಸ್ರೇಲ್ ಪಡೆ ಇತ್ತೀಚೆಗೆ ಹಿಜ್ಬುಲ್ಲಾ ಮೇಲೆ ನಡೆಸಿದ ದಾಳಿ ಮತ್ತು ಉನ್ನತ ಕಮಾಂಡರ್‌ಗಳ ಹತ್ಯೆಯ ಸೇಡು ತೀರಿಸಿಕೊಳ್ಳಲು ಮುಂದಾಗಿದೆ. ಮಂಗಳವಾರ ರಾತ್ರಿ ಇಸ್ರೇಲ್ ಮೇಲೆ ಇರಾನ್ 200ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಉಡಾಯಿಸಿದೆ. ಮತ್ತೊಂದೆಡೆ ಇರಾನ್ ಬೆಂಬಲಿತ ಶಂಕಿತ ಉಗ್ರರು ಟೆಲ್ ಅವೀವ್‌ನಲ್ಲಿ ಗುಂಡು ಹಾರಿಸಿ ಎಂಟು ಅಮಾಯಕರ ಸಾವಿಗೆ ಕಾರಣರಾಗಿದ್ದಾರೆ.
ಇನ್ನು ಉಲ್ಬಣಗೊಳ್ಳುತ್ತಿರುವ ಪರಿಸ್ಥಿತಿಯನ್ನು ಚರ್ಚಿಸಲು ಇಸ್ರೇಲ್‌ನ ಭದ್ರತಾ ಕ್ಯಾಬಿನೆಟ್ ಮಂಗಳವಾರ ತಡರಾತ್ರಿ ಸಭೆ ನಡೆಸಿತು. IDF ವಕ್ತಾರ ಡೇನಿಯಲ್ ಹಗರಿ, “ಈ ದಾಳಿಗೆ ಪರಿಣಾಮಗಳು ಇದ್ದೇ ಇರುತ್ತದೆ. ನಾವು ಕೆಲ ಯೋಜನೆಗಳನ್ನು ಹೊಂದಿದ್ದೇವೆ ಮತ್ತು ನಾವು ನಿರ್ಧರಿಸುವ ಸ್ಥಳ ಮತ್ತು ಸಮಯದಲ್ಲಿ ನಾವು ಕಾರ್ಯನಿರ್ವಹಿಸುತ್ತೇವೆ’ ಎಂದಿದ್ದಾರೆ.
ಇರಾನ್ ಅಂದಾಜು 180ಕ್ಕೂ ಅಧಿಕ ಖಂಡಾಂತರ ಕ್ಷಿಪಣಿಗಳನ್ನು ಇಸ್ರೇಲ್‌ನತ್ತ ಎಸೆದಿದೆ. ಟೆಲ್ ಅವೀವ್, ಜೆರುಸಲೇಮ್ ಹಾಗೂ ಜೋರ್ಡನ್‌ನ ರಿವರ್ ವ್ಯಾಲಿಯಲ್ಲಿ ಸ್ಫೋಟದ ಸದ್ದು ಕೇಳಿದೆ. ಗಡೆರಾದ ಸೆಂಟ್ರಲ್ ಸಿಟಿಯಲ್ಲಿ ಶಾಲೆಯ ವಿಡಿಯೋವನ್ನು ಇಸ್ರೇಲ್ ಸೇನೆ ಬಿಡುಗಡೆ ಮಾಡಿದ್ದು, ಶಾಲೆ ಸಂಪೂರ್ಣವಾಗಿ ಇರಾನ್‌ನ ಮಿಸೈಲ್‌ನಿಂದ ಧ್ವಂಸವಾಗಿದೆ.
Leave a Comment