ನವರಾತ್ರಿ ಹಬ್ಬದ ಏಳನೇ ದಿನ ಕಾಳರಾತ್ರಿ ದೇವಿ ಪೂಜಿಸಿ: ಪೂಜೆಯ ವಿಧಾನ ತಿಳಿಯಿರಿ

Kalratri Puja Vidhi
Spread the love

ಶಾರದೀಯ ನವರಾತ್ರಿಯ 7ನೇ ದಿನವನ್ನು ಅಕ್ಟೋಬರ್‌ 9 ರ ಇಂದು ಆಚರಿಸಲಾಗುತ್ತಿದ್ದು, ಈ ದಿನ ದುರ್ಗಾ ದೇವಿಯ 7ನೇ ರೂಪವನ್ನು ಪೂಜಿಸಲಾಗುವುದು. ದುರ್ಗಾ ದೇವಿಯ 7ನೇ ರೂಪವಾದ ಕಾಳಿ ದೇವಿಯನ್ನು ಪೂಜಿಸಲಾಗುತ್ತದೆ. ಆದ್ದರಿಂದ ಈ ದಿನವನ್ನು ಕಾಳರಾತ್ರಿ ದಿನವೆಂದೂ ಕರೆಯಲಾಗುತ್ತದೆ. ಹಾಗೂ ಇದು ನವರಾತ್ರಿಯ ಸಪ್ತಮಿ ತಿಥಿಯಾಗಿದೆ. ದುರ್ಗಾ ದೇವಿಯ ಭಯಾನಕ ರೂಪದಲ್ಲಿ ಕಾಳರಾತ್ರಿ ಪ್ರಮುಖಳು. ದುರ್ಗಾ ದೇವಿಯ ನೈಜ ರೂಪಕ್ಕಿಂತಲೂ ಕಾಳರಾತ್ರಿ ದೇವಿ ಅಥವಾ ಕಾಳಿ ದೇವಿಯ ರೂಪವು ಘೋರವಾಗಿರುತ್ತದೆ.

ಕಾಳರಾತ್ರಿ ದೇವಿ ಪೂಜೆಗೆ ಶುಭ ಮುಹೂರ್ತ​:

  • ಸಪ್ತಮಿ ತಿಥಿ ಆರಂಭ: ಅಕ್ಟೋಬರ್‌ 9 ರಂದು ಬುಧವಾರ ಬೆಳಿಗ್ಗೆ 06:25 ರಿಂದ 07:52 ರವರೆಗೆ
  • ಬೆಳಿಗ್ಗೆ 07:52 ರಿಂದ 09:19 ರವರೆಗೆ
  • ಬೆಳಿಗ್ಗೆ 10:46 ರಿಂದ ಮಧ್ಯಾಹ್ನ 12:14 ರವರೆಗೆ
  • ಮಧ್ಯಾಹ್ನ 03:08 ರಿಂದ ಸಂಜೆ 04:35 ರವರೆಗೆ
  • ಸಂಜೆ 04:35 ರಿಂದ ಸಂಜೆ 06:02 ರವರೆಗೆ.

ಕಾಳರಾತ್ರಿ ದೇವಿ ಪೂಜೆ ವಿಧಾನ​:

ಅಕ್ಟೋಬರ್ 9ರ ಇಂದು ಬೆಳಿಗ್ಗೆ ಸ್ನಾನ ಮಾಡಿದ ನಂತರ, ಉಪವಾಸ ಮತ್ತು ಪೂಜೆ ಮಾಡಲು ಸಂಕಲ್ಪವನ್ನು ತೆಗೆದುಕೊಳ್ಳಿ. ಮನೆಯಲ್ಲಿ ಸ್ವಚ್ಛವಾದ ಸ್ಥಳದಲ್ಲಿ ಸ್ಟೂಲ್ ಅಥವಾ ಇನ್ಯಾವುದೇ ಮರದ ಪೀಠವನ್ನಿಟ್ಟು ಅದರ ಮೇಲೆ ​ಕಾತ್ಯಾಯನಿ ದೇವಿಯ ಫೋಟೋವನ್ನು ಇರಿಸಿ.ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸಿ, ಕುಂಕುಮದಿಂದ ತಿಲಕವನ್ನು ಹಚ್ಚಿ ಮತ್ತು ಹೂವಿನ ಮಾಲೆಯನ್ನು ಆಕೆಗೆ ಹಾಕಿ.ಅಕ್ಕಿ, ಕುಂಕುಮ ಇತ್ಯಾದಿ ಪೂಜೆ ಸಮಾಗ್ರಿಗಳನ್ನು ಒಂದೊಂದಾಗಿ ಆಕೆಗೆ ನೀಡಿ. ಬೆಲ್ಲವನ್ನು ನೈವೇದ್ಯವಾಗಿ ಅರ್ಪಿಸಿ.
ಕಾಳರಾತ್ರಿಗೆ ಸಂಬಂಧಿಸಿದ ಮಂತ್ರವನ್ನು ಕಡ್ಡಾಯವಾಗಿ ಪಠಿಸಿ.ಪೂಜೆಯ ಕೊನೆಯಲ್ಲಿ ಆರತಿಯನ್ನು ಮಾಡಿ ಪೂಜೆ ಪೂರ್ಣಗೊಳಿಸಿ.

ನವರಾತ್ರಿಯ ಏಳನೇ ದಿನ ಕಾಳರಾತ್ರಿಯ ಮಂತ್ರ:

||ಓಂ ದೇವಿ ಕಾಲರಾತ್ರೈ ನಮಃ ಓಂ ದೇವಿ ಕಾಲರಾತ್ರೈ ನಮಃ||
ಏಕವೇನಿ ಜಪಕಾರ್ಣಪೂರ ನಗ್ನಾ ಖರಸ್ಥಿತಾ
ಲಂಬೋಸ್ಥಿತಿ ಕಾರ್ಣಿಕಾ ಕರ್ಣಿ ತೈಲಾಭಯಕ್ತ್ಶಶರೀರಿನಿ
ವಾಮ್ ಪಾದೋಲ್ಲಸಲ್ಲೋಲತಾ ಕಂಠಕ್ಬುಷಾನಾ
ವರ್ಧನ್ ಮೂರ್ಧಮ್ ಧ್ವಜಾ ಕೃಷ್ಣ ಕಾಳರಾತ್ರಿಭಯಂಕರಿ

ಕಾಳರಾತ್ರಿ ಯಾರು?:


ಶುಂಭ-ನಿಶುಂಭ ಹಾಗೂ ರಕ್ತಬೀಜಾಸುರ ಎಂಬ ರಾಕ್ಷಸರು ಮೂರು ಲೋಕದಲ್ಲಿ ತಮ್ಮ ಭಯವನ್ನು ಹುಟ್ಟಿಸಲು ಆರಂಭಿಸಿದರು. ಆಗ ಜನ ಶಿವನ ಬಳಿ ಬಂದು ರಾಕ್ಷಸರನ್ನು ಸಂಹಾರ ಮಾಡಲು ಬೇಡಿಕೊಂಡರು. ಆಗ ಶಿವ ಈ ರಾಕ್ಷಸರನ್ನು ಸಂಹರಿಸಲು ಪಾರ್ವತಿಗೆ ಹೇಳಿದನು. ಆಗ ಪಾರ್ವತಿ ಶುಂಭ-ನಿಶುಂಭ ಎಂಬ ರಾಕ್ಷಸರನ್ನು ಕೊಂದಳು. ಆದರೆ ರಕ್ತಬೀಜಾಸುರನನ್ನು ದುರ್ಗಾಮಾತೆ ಕೊಂದ ಬಳಿಕ ಆತನ ದೇಹದಿಂದ ಹೊರ ಚಿಮ್ಮಿದ ರಕ್ತದಿಂದ ಲಕ್ಷಾಂತರ ರಕ್ತಬೀಜಾಸುರರು ಹುಟ್ಟಿಕೊಂಡರು. ಇದನ್ನು ನೋಡಿದ ದುರ್ಗಾ ಮಾತೆಯು ತನ್ನ ತೇಜಸ್ಸಿನಿಂದ ಕಾಳರಾತ್ರಿ ರಚಿಸಿದಳು. ಆಗ ಕಾಳರಾತ್ರಿ ರಕ್ತಬೀಜಾಸುರನನ್ನು ಕೊಂದಳು. ಆತನ ದೇಹದಿಂದ ಹೊರಬಂದ ರಕ್ತವನ್ನು ತನ್ನ ಬಾಯಲ್ಲಿ ಇಟ್ಟುಕೊಂಡಳು.

ಕಾಳರಾತ್ರಿ ಸ್ವರೂಪ:

ಕಾಳರಾತ್ರಿ ನೋಡಲು ಭಯಾನಕವಾಗಿರುತ್ತಾಳೆ. ಕಾಳರಾತ್ರಿಯ ದೇಹ ಸಂಪೂರ್ಣವಾಗಿ ಕಪ್ಪಾಗಿರುತ್ತದೆ. ಈಕೆಯ ಕೂದಲು ಸಂಪೂರ್ಣವಾಗಿ ಹರಡಿಕೊಂಡು ಮೂರು ಕಣ್ಣುಗಳು ಇರುತ್ತವೆ. ಕರಳಿನಲ್ಲಿ ಮುಂಡಗಳ ಜಪಮಾಲೆಯನ್ನು ಕಾಳರಾತ್ರಿ ದೇವಿ ಧರಿಸಿರುತ್ತಾಳೆ. ಆಕೆಯ ಉಸಿರಿನಿಂದ ಬೆಂಕಿಯ ಜ್ವಾಲೆ ಹೊರಬರುತ್ತಿರುತ್ತದೆ. ಬಲಗೈಯನ್ನು ಎತ್ತಿ ವರ ನೀಡುವ ಈಕೆಯ ಮತ್ತೊಂದು ಕೈ ಅಭಯ ಮುದ್ರೆಯಲ್ಲಿದೆ. ಇನ್ನೊಂದು ಕೈಯಲ್ಲಿ ಕಬ್ಬಿಣದ ಕತ್ತಿ, ಇನ್ನೊಂದರಲ್ಲಿ ಕಬ್ಬಿಣದ ಕಠಾರಿ ಹಿಡಿದಿದ್ದಾಳೆ. ಕಾಳರಾತ್ರಿಯನ್ನು ಪೂಜಿಸುವುದರಿಂದ ಜೀವನದ ಕಷ್ಟಗಳು ದೂರವಾಗುತ್ತವೆ. ಕಾಳರಾತ್ರಿ ದೇವಿಯ ಮಂತ್ರವನ್ನು ಪಠಿಸುವುದರಿಂದ ಜೀವನದಲ್ಲಿ ಸಂತೋಷ ನೆಲೆಸಲಿದೆ. ಶುಭಂಕರಿ, ಕಾಳಿ, ಚಂಡಿ, ಧೂಮ್ರವರ್ಣ, ಚಾಮುಂಡಾ ಎಂದು ಕರೆಯಲಾಗುತ್ತದೆ. ಕಾಳಿ ಮಾತೆ ದೆವ್ವ, ಪ್ರೇತ ಮತ್ತು ನಕಾರಾತ್ಮಕ ಶಕ್ತಿಗಳನ್ನು ನಾಶಪಡಿಸುತ್ತಾಳೆಂದು ಪುರಾಣಗಳು ಹೇಳುತ್ತವೆ.

Leave a Comment

Leave a Reply

Your email address will not be published. Required fields are marked *

error: Content is protected !!