ದೀಪಾವಳಿಗೆ ಬಂಪರ್​ ಆಫರ್​: ಉಚಿತ ಸಿಲಿಂಡರ್​ ಪಡೆಯುವುದು ಹೇಗೆ?

PM Ujjwala Yojana
Spread the love

ನ್ಯೂಸ್ ಆ್ಯರೋ: ದೀಪಾವಳಿಗೂ ಮುನ್ನ ಉತ್ತರ ಪ್ರದೇಶ ಸರ್ಕಾರ ಮಹಿಳೆಯರಿಗೆ ಭರ್ಜರಿ ಗಿಫ್ಟ್ ನೀಡಲು ಹೊರಟಿದೆ. ‘ಪ್ರಧಾನ ಮಂತ್ರಿ ಉಜ್ವಲ ಯೋಜನೆ’ಯ ಎಲ್ಲಾ ಫಲಾನುಭವಿಗಳಿಗೆ ಈ ದೀಪಾವಳಿಯಲ್ಲಿ ಉಚಿತ ಎಲ್‌ಪಿಜಿ ಸಿಲಿಂಡರ್‌ಗಳನ್ನು ನೀಡಲು ಸರ್ಕಾರ ಮುಂದಾಗಿದೆ. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ‘ಎಕ್ಸ್’ ಪೋಸ್ಟ್​ನಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾರೆ.

ದೀಪಾವಳಿಗೂ ಮುನ್ನ ಎಲ್ಲ ರೀತಿಯ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸಿಎಂ ಯೋಗಿ ಆದೇಶಿಸಿದ್ದಾರೆ. ಇದರಿಂದ ಎಲ್ಲಾ ಫಲಾನುಭವಿಗಳು ಸಕಾಲದಲ್ಲಿ ಸವಲತ್ತುಗಳನ್ನು ಪಡೆಯಬಹುದಾಗಿದೆ. ನಿಮ್ಮ ರಾಜ್ಯದಲ್ಲಿಯೂ ನೀವು ಈ ಯೋಜನೆಯನ್ನು ಪಡೆಯಬಹುದು. ಈ ಯೋಜನೆಯನ್ನು ಪಡೆಯಲು ಅರ್ಜಿ ಸಲ್ಲಿಸುವ ವಿಧಾನ ತಿಳಿದುಕೊಳ್ಳಿ.

ಅರ್ಹತೆಯ ಮಾನದಂಡ:

  • ಈ ಯೋಜನೆಗೆ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಬಹುದು.
  • ಮಹಿಳಾ ಅರ್ಜಿದಾರರು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು.
  • ಮಹಿಳಾ ಅರ್ಜಿದಾರರು ಭಾರತದ ಖಾಯಂ ನಿವಾಸಿಯಾಗಿರಬೇಕು.
  • ಮಹಿಳಾ ಅರ್ಜಿದಾರರು ಪಡಿತರ ಚೀಟಿ ಹೊಂದಿರಬೇಕು.
  • ಅರ್ಜಿ ಸಲ್ಲಿಸುವ ಮೊದಲು, ಮಹಿಳೆಯು ತನ್ನ ಮನೆಯಲ್ಲಿ ಯಾವುದೇ LPG ಸಂಪರ್ಕವನ್ನು ಹೊಂದಿರಬಾರದು.
  • ಗ್ರಾಮೀಣ ಪ್ರದೇಶಗಳಲ್ಲಿ ವಾರ್ಷಿಕ ಆದಾಯ ರೂ. 1 ಲಕ್ಷ ಮತ್ತು ನಗರ ಪ್ರದೇಶಗಳಲ್ಲಿ ರೂ. 2 ಲಕ್ಷ ಮೀರಬಾರದು.

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ? :

  • ಮೊದಲು ನೀವು ಅಧಿಕೃತ ವೆಬ್‌ಸೈಟ್ https://www.pmuy.gov.in/ ಗೆ ಭೇಟಿ ನೀಡಬೇಕು.
  • ವೆಬ್‌ಸೈಟ್​ನಲ್ಲಿ, “ಪ್ರಧಾನ ಮಂತ್ರಿ ಉಜ್ವಲ ಯೋಜನೆ 3.0 ಕನೆಕ್ಷನ್” ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು.
  • ಹೊಸ ಪುಟದಲ್ಲಿ ನೀವು “ಹೊಸ ಉಜ್ವಲ 3.0 ಕನೆಕ್ಷನ್ ಅಪ್ಲಿಕೇಶನ್” ಮೇಲೆ ಕ್ಲಿಕ್ ಮಾಡಬೇಕು.
  • ಕ್ಲಿಕ್ ಮಾಡಿದ ನಂತರ ಮೂರು ಕಂಪನಿಯ ಹೆಸರುಗಳು ಕಾಣಿಸಿಕೊಳ್ಳುತ್ತವೆ. ಈ ಕಂಪನಿಗಳಲ್ಲಿ ಒಂದನ್ನು ಆಯ್ಕೆಮಾಡಿ ಮತ್ತು “Click Here To Apply” ಮೇಲೆ ಕ್ಲಿಕ್ ಮಾಡಿ.
  • ಮುಂದಿನ ಪುಟದಲ್ಲಿ, “ಬ್ರೈಟ್ ಬೆನಿಫಿಶಿಯರಿ ಕನೆಕ್ಷನ್” ಮೇಲೆ ಕ್ಲಿಕ್ ಮಾಡಿ ಮತ್ತು “ನಾನು ಮೇಲಿನ ಘೋಷಣೆಯನ್ನು ಸ್ವೀಕರಿಸುತ್ತೇನೆ” ಎಂಬ ಆಯ್ಕೆಯನ್ನು ಆರಿಸಿ.
  • “ಸರ್ಚ್ ಡಿಸ್ಟ್ರಿಬ್ಯೂಟರ್ಸ್” ಪಕ್ಕದಲ್ಲಿರುವ “ಲೋಕಲ್ ವೈಸ್” ಆಯ್ಕೆಯನ್ನು ಕ್ಲಿಕ್ ಮಾಡಿ. ಇಲ್ಲಿ ನಿಮ್ಮ ರಾಜ್ಯ, ಜಿಲ್ಲೆ ಮತ್ತು ವಿತರಕರ ಹೆಸರನ್ನು ಆಯ್ಕೆಮಾಡಿ, ನಂತರ “Next” ಮೇಲೆ ಕ್ಲಿಕ್ ಮಾಡಿ.
  • ಹೊಸ ಪುಟದಲ್ಲಿ ನೀವು KYC ವಿವರಗಳು, ಸಂಪೂರ್ಣ ವಿಳಾಸ, ರೇಷನ್ ಕಾರ್ಡ್ ವಿವರಗಳು ಮತ್ತು ಸಂಪರ್ಕ ವಿವರಗಳನ್ನು ಭರ್ತಿ ಮಾಡಬೇಕು. ನಂತರ ಬ್ಯಾಂಕ್ ವಿವರಗಳು ಮತ್ತು LPG ಸಂಪರ್ಕದ ವಿವರಗಳನ್ನು ಭರ್ತಿ ಮಾಡಿ.
  • ಫಾರ್ಮ್ ಅನ್ನು ಭರ್ತಿ ಮಾಡಿದ ನಂತರ, ಆಧಾರ್ ಕಾರ್ಡ್, ವಿಳಾಸ ಪುರಾವೆ, ಪಾಸ್‌ಪೋರ್ಟ್ ಗಾತ್ರದ ಫೋಟೋ ಮತ್ತು ರೇಷನ್ ಕಾರ್ಡ್‌ನಂತಹ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ. ನಂತರ ಕುಟುಂಬದ ಸದಸ್ಯರನ್ನು ಆಯ್ಕೆ ಮಾಡಿ.
  • “Add Member” ಮೇಲೆ ಕ್ಲಿಕ್ ಮಾಡಿ. ನಂತರ ನೀವು ಘೋಷಣೆ ಮಾರ್ಕ್​ ಅನ್ನು ನಮೂದಿಸಿದ ಬಳಿಕ “Submit” ಮೇಲೆ ಕ್ಲಿಕ್ ಮಾಡಬೇಕು. ಆಗ ನೀವು ರಶೀದಿಯನ್ನು ಪಡೆಯುತ್ತೀರಿ.
  • ಅರ್ಜಿಯ ಸ್ಥಿತಿಯನ್ನು ಪರಿಶೀಲಿಸಲು ಈ ರಸೀದಿಯನ್ನು ಜಾಗೃತವಾಗಿ ಇರಿಸಿಕೊಳ್ಳಬೇಕು. ಈ ಮೂಲಕ ನೀವು ಉಚಿತ ಗ್ಯಾಸ್ ಸಿಲಿಂಡರ್​ಗಾಗಿ ಅರ್ಜಿ ಸಲ್ಲಿಸಂತಾಗುತ್ತದೆ.

Leave a Comment

Leave a Reply

Your email address will not be published. Required fields are marked *

error: Content is protected !!