ಇಂದು ಭಾರತೀಯ ವಾಯುಪಡೆ ದಿನ: ಯಾಕೆ ಈ ದಿನ ಆಚರಿಸುತ್ತಾರೆ ತಿಳಿಯಿರಿ

Indian Air Force Day
Spread the love

ನ್ಯೂಸ್ ಆ್ಯರೋ: ಇಂದು ವಾಯುಪಡೆ ದಿನ ಅಥವಾ ಏರ್‌ಫೋರ್ಸ್‌ ದಿನ. ವಾಯುಪಡೆಯ ದಿನವು ವಾರ್ಷಿಕ ಆಚರಣೆಯಾಗಿದ್ದು, ಇದನ್ನು ಸಶಸ್ತ್ರ ಪಡೆ ಹೊಂದಿರುವ ಹಲವಾರು ರಾಷ್ಟ್ರಗಳು ಆಚರಿಸುತ್ತವೆ. ಈ ದಿನವು ದೇಶದ ವಾಯುಪಡೆಗೆ ಮಾನ್ಯತೆ ನೀಡುವ ದಿನವಾಗಿದೆ. ಭಾರತದಲ್ಲಿ ಪ್ರತಿ ವರ್ಷ ಅಕ್ಟೋಬರ್ 8 ರಂದು ವಾಯುಪಡೆ ದಿನವನ್ನು ಆಚರಣೆ ಮಾಡಲಾಗುತ್ತದೆ.

ಭಾರತೀಯ ವಾಯುಪಡೆ ಅಸ್ತಿತ್ವಕ್ಕೆ ಬಂದದ್ದು ಹೇಗೆ?


ಭಾರತೀಯ ವಾಯುಪಡೆಯನ್ನು ಅಕ್ಟೋಬರ್ 08, 1932 ರಲ್ಲಿ ಬ್ರಿಟಿಷ್ ಸಾಮ್ರಾಜ್ಯದ ಸಹಾಯಕ ವಾಯುಪಡೆಯಾಗಿ ಸ್ಥಾಪಿಸಲಾಯಿತು. ಆ ಸಮಯದಲ್ಲಿ ಭಾರತೀಯ ವಾಯುಪಡೆಯನ್ನು ರಾಯಲ್ ಇಂಡಿಯನ್ ಏರ್ ಫೋರ್ಸ್ ಎಂದು ಕರೆಯಲಾಗುತ್ತಿತ್ತು. ಆದರೆ 1950 ರಲ್ಲಿ ಭಾರತದ ಗಣರಾಜ್ಯವಾದ ಬಳಿಕ ಭಾರತದ ವಾಯುಸೇನೆಯ ರಾಯಲ್ ಎಂಬ ಪದವನ್ನು ತೆಗೆದು ಹಾಕಿ ಇಂಡಿಯನ್ ಏರ್ ಫೋರ್ಸ್ ಎಂದು ಕರೆಯಲಾಯಿತು.

1933ರಲ್ಲಿ ಕೇವಲ ಆರು ಅಧಿಕಾರಿಗಳು ಮತ್ತು 19 ಯೋಧರೊಂದಿಗೆ ಪ್ರಾರಂಭವಾದ ಭಾರತೀಯ ವಾಯುಪಡೆಯು ಇಂದು ವಿಶ್ವದ ನಾಲ್ಕನೇ ಪ್ರಬಲ ವಾಯುಸೇನೆಯಾಗಿ ಬೆಳೆದು ನಿಂತಿದೆ ಎನ್ನುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ. 1932 ರಲ್ಲಿ ಭಾರತೀಯ ವಾಯುಸೇನೆಯನ್ನು ಸ್ಥಾಪಿಸಿದ ನೆನಪಿಗಾಗಿ ಮತ್ತು ತಮ್ಮ ಪ್ರಾಣವನ್ನು ಲೆಕ್ಕಿಸದೆ ದೇಶರಕ್ಷಣೆಯಲ್ಲಿ ತೊಡಗಿರುವ ಯೋಧರಿಗೆ ಗೌರವ ಸಲ್ಲಿಸುವ ಉದ್ದೇಶದಿಂದಾಗಿ ಪ್ರತಿವರ್ಷ ಅಕ್ಟೋಬರ್ 8 ರಂದು ಭಾರತೀಯ ವಾಯುಪಡೆ ದಿನವನ್ನು ಆಚರಿಸಲಾಗುತ್ತದೆ.

ಈ ಬಾರಿಯ ಥೀಮ್ ಏನು?

ಪ್ರತಿ ವರ್ಷ ಭಾರತೀಯ ವಾಯುಪಡೆ ದಿನವನ್ನು ಆಚರಿಸುವಾಗ ವಿಶೇಷ ಥೀಮ್‌ನೊಂದಿಗೆ ಪ್ರದರ್ಶನ ಮಾಡಲಾಗುತ್ತದೆ. ಅದೇ ರೀತಿ ಈ ವರ್ಷದ ಭಾರತೀಯ ವಾಯುಪಡೆ ದಿನದ ಕಾರ್ಯಕ್ರಮವು “ಭಾರತೀಯ ವಾಯುಪಡೆ-ಸಕ್ಷಮ, ಸಶಕ್ತ, ಆತ್ಮನಿರ್ಭರ” ಎಂಬ ವಿಷಯವನ್ನು ಆಧರಿಸಿದೆ, ಇದು ದೇಶದ ಭದ್ರತೆಯಲ್ಲಿ ಭಾರತೀಯ ವಾಯುಪಡೆಯ ಪಾತ್ರ ಏನೆಂಬುದನ್ನು ಬಿಂಬಿಸುತ್ತದೆ.

ವಾಯುಪಡೆಯ ಧ್ವಜ ಹೀಗಿದೆ:


ವಾಯುಪಡೆಯ ಧ್ವಜವು ಸ್ವಲ್ಪ ಭಿನ್ನವಾಗಿದ್ದು, ನೀಲಿ ಬಣ್ಣವನ್ನು ಹೊಂದಿದೆ. ಮೊದಲ ಭಾಗದಲ್ಲಿ ರಾಷ್ಟ್ರೀಯ ಧ್ವಜ ಮತ್ತು ಮಧ್ಯದಲ್ಲಿ ವೃತ್ತಾಕಾರ ಹೊಂದಿದ್ದು ಇದರಲ್ಲಿ ಮೂರು ಬಣ್ಣಗಳಿವೆ. ಇನ್ನು ಈ ಧ್ವಜವನ್ನು 1951 ರಂದು ಅಂಗೀಕರಿಸಲಾಗಿದೆ ಎನ್ನಲಾಗಿದೆ.

ವಿಶ್ವದ ನಾಲ್ಕನೇ ಅತಿದೊಡ್ಡ ವಾಯುಪಡೆ:


ಅಮೆರಿಕ, ರಷ್ಯಾ ಮತ್ತು ಚೀನಾದ ನಂತರ ಭಾರತೀಯ ವಾಯುಪಡೆಯು ವಿಶ್ವದ ನಾಲ್ಕನೇ ಅತಿದೊಡ್ಡ ವಾಯುಪಡೆ ಎಂಬ ಸ್ಥಾನವನ್ನು ಗಿಟ್ಟಿಸಿಕೊಂಡಿದೆ. ಇದು ಯುದ್ಧದ ಸಮಯದಲ್ಲಿ ದೇಶವನ್ನು ರಕ್ಷಿಸುವುದಲ್ಲದೆ, ವಿವಿಧ ವಿಪತ್ತುಗಳ ಸಂದರ್ಭದಲ್ಲೂ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳಲ್ಲಿ ಸಹಾಯ ಮಾಡುತ್ತದೆ. ಇದಲ್ಲದೆ, ಭಾರತೀಯ ವಾಯು ಪಡೆ ವಿಶ್ವದ ಬೇರೆ ದೇಶಗಳಿಂದ ಭಾರತೀಯ ನಾಗರಿಕರನ್ನು ಸ್ಥಳಾಂತರಿಸಲು ಸಹ ಮುಖ್ಯ ಪಾತ್ರವಹಿಸುತ್ತದೆ.

Leave a Comment

Leave a Reply

Your email address will not be published. Required fields are marked *

error: Content is protected !!