ಮರೀನಾ ಬೀಚ್ನಲ್ಲಿ ಘೋರ ದುರಂತ: ಏರ್ ಶೋನಲ್ಲಿ ಉಸಿರುಗಟ್ಟಿ 5 ಮಂದಿ ಸಾವು
ನ್ಯೂಸ್ ಆ್ಯರೋ: ಭಾರತೀಯ ವಾಯುಪಡೆಯ 92ನೇ ವಾರ್ಷಿಕೋತ್ಸವದ ನೆನಪಿನಲ್ಲಿ ಚೆನ್ನೈನ ಮರೀನಾ ಬೀಚ್ನಲ್ಲಿ ಏರ್ ಶೋ ಆಯೋಜಿಸಿತ್ತು. ಹೌದು. . ಕಳೆದ ದಿನ 2 ದಶಕಗಳ ಬಳಿಕ ನಡೆದ ಅತೀ ದೊಡ್ಡ ಏರ್ ಶೋನಲ್ಲಿ ಭಾರೀ ಅವಘಡ ಸಂಭವಿಸಿದೆ. 15 ಲಕ್ಷಕ್ಕೂ ಅಧಿಕ ಜನರು ಸೇರಿದ್ದರಿಂದ ಚೆನ್ನೈನಲ್ಲಿ ದುರಂತವೇ ನಡೆದಿದೆ. ಬಿಸಿಲಿನ ತಾಪಕ್ಕೆ ಹಾಗೂ ಕಾಲ್ತುಳಿತಕ್ಕೆ ಲಿಮ್ಕಾ ದಾಖಲೆ ಜೊತೆಗೆ ಸಾವಿನ ದಾಖಲೆಯೂ ಆಗಿದೆ.
ಎಲ್ಲಿ ನೋಡಿದ್ರೂ ಜನರ ರಾಶಿ. ರೈಲಿನಲ್ಲಿ ನಿಲ್ಲೋಕೂ ಕೂಡ ಜಾಗವಿಲ್ಲದಂತೆ ಕಿಕ್ಕಿರಿದು ಸೇರಿರುವ ಜನ. ಒಂದಲ್ಲ ಎರಡಲ್ಲ ಬರೋಬ್ಬರಿ ಸುಮಾರು 15 ಲಕ್ಷಕ್ಕೂ ಅಧಿಕ ಜನರು ಸೇರಿದ್ದ ಕಾರ್ಯಕ್ರಮದಲ್ಲಿ ಭಾರೀ ದೊಡ್ಡ ಅವಘಡ ಸಂಭವಿಸಿದೆ.
ದೊಡ್ಡ ಏರ್ ಶೋ ವೀಕ್ಷಿಸಲು ಜನರು ಮಕ್ಕಳು ಹಾಗೂ ವೃದ್ಧರೊಂದಿಗೆ ನೆರೆದಿದ್ದರು. ಏರ್ ಶೋ ಕಣ್ತುಂಬಿಕೊಂಡು ಹಿಂದಿರುಗುತ್ತಿದ್ದ ಜನರಲ್ಲಿ ಭಾರೀ ನೂಕುನುಗ್ಗಲು ಉಂಟಾಗಿದೆ. ಈ ವೇಳೆ ಬಿಸಿಲಿನ ಝಳ ಹೆಚ್ಚಿದ ಕಾರಣ ಕೆಲವರು ತಲೆ ಸುತ್ತಿ ಬಿದ್ದಿದ್ದಾರೆ. ಇದರ ಜೊತೆಗೆ ಸರಿಯಾದ ನಿರ್ವಹಣೆ, ಪೂರ್ವ ಸಿದ್ಧತೆ ಇಲ್ಲದ ಕಾರಣ ಕಾಲ್ತುಳಿತ ಸಂಭವಿಸಿ ಐದಕ್ಕೂ ಅಧಿಕ ಜನ ಸಾವನ್ನಪ್ಪಿದ್ದಾರೆ.
ಇನ್ನು ಬಿಸಿಲಿಗೆ ಪ್ರಜ್ಞೆ ತಪ್ಪಿದ 200ಕ್ಕೂ ಅಧಿಕ ಮಂದಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಒಟ್ಟಾರೆ 21 ವರ್ಷಗಳ ನಂತರ ನಡೆದ ವೈಮಾನಿಕ ಪ್ರದರ್ಶನದಲ್ಲಿ ಸಾವಿನ ನರ್ತನವಾಗಿದೆ.
Leave a Comment