ಕೇಕ್ ಪ್ರಿಯರಿಗೆ ಕ್ಯಾನ್ಸರ್ ಗಿಫ್ಟ್: ಕೇಳಿ ಶಾಕ್ ಆಗಿರಬೇಕು ಅಲ್ವಾ?
ನ್ಯೂಸ್ ಆ್ಯರೋ: ರಾಜ್ಯಾದ್ಯಂತ ಪರೀಕ್ಷಿಸಿದ 235 ಮಾದರಿಗಳ ಕೇಕ್ ಗಳ ಪೈಕಿ 12ರಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಪತ್ತೆಯಾದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಎಚ್ಚರಿಕೆ ನೀಡಿದೆ.
ಹೌದು. . ಬೆಂಗಳೂರಿನ ಹಲವಾರು ಬೇಕರಿಗಳಲ್ಲಿ ಪರೀಕ್ಷೆ ಮಾಡಿದ ನಂತರ ಆರೋಗ್ಯ ಇಲಾಖೆಯು, ಬರೋಬ್ಬರಿ 12 ಬಗೆಯ ಕೇಕ್ ಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಇರುವುದನ್ನು ಪತ್ತೆ ಹಚ್ಚಿದೆ. ಕೇಕ್ ನಲ್ಲಿ ಬಳಸಲಾಗುವ ಕೃತಕ ಬಣ್ಣಗಳು ಮನುಷ್ಯನಿಗೆ ಯಾವುದೇ ಸಂದರ್ಭದಲ್ಲಿ ಕ್ಯಾನ್ಸರ್ ತರಬಹುದು ಎಂದು ಹೇಳಲಾಗಿದೆ.
ಹೀಗಾಗಿ ಆರೋಗ್ಯ ಇಲಾಖೆಯು ಎಲ್ಲ ಬೇಕರಿಗಳಿಗೂ ಆಹಾರ ಸುರಕ್ಷತಾ ಮಾನದಂಡಗಳನ್ನು ಅನುಸರಿಸುವಂತೆ ಕರೆಕೊಟ್ಟಿದೆ. ಏಕೆಂದರೆ ಈ ಕೃತಕ ಬಣ್ಣಗಳು ಕೇವಲ ಕ್ಯಾನ್ಸರ್ ತರುವುದು ಮಾತ್ರವಲ್ಲದೆ ಮಾನಸಿಕ ಹಾಗೂ ದೈಹಿಕ ಆರೋಗ್ಯ ಸಮಸ್ಯೆಗಳನ್ನು ಕೂಡ ತಂದುಕೊಡುವ ಸಾಧ್ಯತೆ ಇರುತ್ತದೆ.
ಆರೋಗ್ಯ ಸಂಸ್ಥೆ ಹೇಳಿರುವ ಹಾಗೆ ರೆಡ್ ವೆಲ್ವೆಟ್ , ಬ್ಲಾಕ್ ಫಾರೆಸ್ಟ್ ಕೇಕ್, ಪೊನ್ಸೆಯು 4 ಆರ್, ಟಾರ್ಟ್ರಾಜೈನ್ ಮತ್ತು ಕಾರ್ಮೊಯಿಸಿನ್ ಗಳಲ್ಲಿ ಎದ್ದು ಕಾಣುವ ಹಾಗೆ ಕೃತಕ ಬಣ್ಣಗಳನ್ನು ಬಳಸಿರುತ್ತಾರೆ. ಇವುಗಳು ಗಣನೀಯ ಪ್ರಮಾಣದಲ್ಲಿ ಆರೋಗ್ಯ ಸಮಸ್ಯೆಯನ್ನು ತರುವುದರ ಜೊತೆಗೆ ಪದೇ ಪದೇ ಆಹಾರ ಸುರಕ್ಷತಾ ಅಧಿಕಾರಿಗಳಿಂದ ಬೇಕರಿ ಮಾಲೀಕರು ತೊಂದರೆಗೆ ಒಳಗಾಗುವಂತೆ ಮಾಡುತ್ತಿವೆ.
ಇನ್ನು ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಹೇಳುವ ಹಾಗೆ ಆಹಾರ ಸುರಕ್ಷತಾ ಮಾನದಂಡಗಳನ್ನು ಪ್ರತಿಯೊಂದು ಬೇಕರಿ ಕೂಡ ಅನುಸರಿಸಬೇಕು. ಪ್ರತಿ ತಿಂಗಳು ಸ್ಯಾಂಪಲ್ ಗಳನ್ನು ಟೆಸ್ಟಿಂಗ್ ಮತ್ತು ಇನ್ಸ್ಪೆಕ್ಷನ್ ಗಾಗಿ ಹೋಟೆಲ್ ಹಾಗೂ ಬೇಕರಿಗಳಿಂದ ಕಳುಹಿಸಿ ಕೊಡಲಾಗುತ್ತದೆ.
ಗ್ರಾಹಕರಿಗೆ ಕೊಡಲಾಗುವ ಯಾವುದೇ ಆಹಾರಗಳು ಹೆಚ್ಚಿನ ಗುಣಮಟ್ಟ ಹೊಂದಿರಬೇಕು ಮತ್ತು ಸರಿಯಾದ ಕ್ರಮ ಅನುಸರಿಸದ ಬೇಕರಿ ಹಾಗೂ ಹೋಟೆಲ್ ಮಾಲೀಕರಿಗೆ ಕಟ್ಟುನಿಟ್ಟಾದ ಶಿಸ್ತು ಕ್ರಮ ಇರುವ ಬಗ್ಗೆ ಎಚ್ಚರಿಕೆ ನೀಡಿದರು
Leave a Comment