ಕನ್ನಡತಿ ಧಾರಾವಾಹಿ ನಟಿ ಮದುವೆ ಪ್ರಸ್ತಾಪಕ್ಕೆ ಹೆದರಿ ಪ್ರಾಣ ಬಿಟ್ಟ ಯುವಕ
ಬೆಂಗಳೂರು: ಕನ್ನಡತಿ ಧಾರಾವಾಹಿಯ ನಟಿಯನ್ನು ಕೆಲವು ದಿನಗಳಿಂದ ಪ್ರೀತಿ ಮಾಡುತ್ತಿದ್ದ ಯುವಕ, ನಟಿಯ ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದ್ದಾನೆ. ಆದರೂ ಬೆನ್ನುಬಿಡದೇ ಮದುವೆಗೆ ಪೀಡಿಸಿದ್ದ ಯುವತಿಯ ಕಾಟಕ್ಕೆ ಬೇಸತ್ತು ಇದೀಗ ಪ್ರಾಣವನ್ನೇ ಬಿಟ್ಟಿದ್ದಾನೆ.
ಮೃತ ಯುವಕನನ್ನು ಮದನ್ (25) ಎಂದು ಗುರುತಿಸಲಾಗಿದೆ. ಸಿರಿಯಲ್ ನಟಿ ವೀಣಾ ಮೋಹಕ್ಕೆ ಬಿದ್ದಿದ್ದ ಮದನ್ ಆಕೆಯನ್ನು ಪ್ರೀತಿ ಮಾಡುತ್ತಾ ಕೆಲವು ದಿನಗಳಿಂದ ಇಬ್ಬರೂ ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದರು. ಇಬ್ಬರೂ ನಿನ್ನೆ ರಾತ್ರಿ ಇಬ್ಬರು ಒಂದೇ ರೂಮಿನಲ್ಲಿ ಪಾರ್ಟಿ ಮಾಡಿದ್ದರು. ಯುವಕ ಮದನ್‌ನನ್ನು ಮನೆಗೆ ಕರೆಸಿಕೊಂಡು ಕಂಠಪೂರ್ತಿ ಕುಡಿದು ಪಾರ್ಟಿ ಮಾಡಿದ ಇಬ್ಬರ ನಡುವೆ ಮದುವೆ ವಿಚಾರಕ್ಕೆ ಜಗಳ ನಡೆದಿದೆ. ಯುವತಿ ನೀನು ನನ್ನನ್ನು ಮದುವೆ ಮಾಡಿಕೊಳ್ಳುವಂತೆ ಹೇಳಿದ್ದಾಳೆ. ಆದರೆ, ಈತನಿಗೆ ನಟಿಯ ನಡತೆಯ ಮೇಲೆ ನಂಬಿಕೆ ಇರಲಿಲ್ಲ. ಆದ್ದರಿಂದ ಮದುವೆ ನಿರಾಕರಣೆ ಮಾಡಿದ್ದಾನೆ.
ಇನ್ನು ಈಕೆಗೆ ಮದ್ಯ ಸೇವನೆ ಅಭ್ಯಾಸ ಇದ್ದುದರಿಂದ ನಮ್ಮ ಮನೆಗೆ ಈಕೆ ತಕ್ಕ ಸೊಸೆಯಲ್ಲ ಎಂದು ಮದುವೆಯನ್ನು ಪ್ರಿಯಕರ ನಿರಾಕರಣೆ ಮಾಡಿದ್ದಾನೆ. ಆದರೂ, ನೀನು ನನ್ನನ್ನು ಮದುವೆ ಮಾಡಿಕೊಳ್ಳಲೇಬೇಕು ಎಂದು ಹಠ ಮಾಡಿದ್ದಾಳೆ. ಇದರಿಂದ ಮನನೊಂದ ಯುವಕ ಮದನ್ ಬಾತ್ ರೂಮಿಗೆ ಹೋಗಿ ಬರುವುದಾಗಿ ಹೋಗಿ ಅಲ್ಲಿಯೇ ಸಾವಿಗೀಡಾಗಿದ್ದಾನೆ ಎಂದು ತಿಳಿದು ಬಂದಿದೆ.
Leave a Comment