ಮೋಮೋಸ್ ಅಂದ್ರೆ ಇಷ್ಟೇನಾ ನಿಮ್ಗೆ….? ಹಾಗಿದ್ರೆ ತಪ್ಪದೇ ಈ ವಿಡಿಯೋ ನೋಡಿ…!
ನ್ಯೂಸ್ ಆ್ಯರೋ : ಈಗಿನ ಜನರಿಗಂತೂ ಹೋಟೆಲ್ ತಿಂಡಿ ಅಥವಾ ಸ್ಟ್ರೀಟ್ ಫುಡ್ ಅಂದ್ರೆ ಪಂಚಪ್ರಾಣ. ಇವುಗಳನ್ನು ಬಾಯಿ ಚಪ್ಪರಿಸಿಕೊಂಡು ತಿಂತಾರೆ. ಆದ್ರೆ ಅಂತಹ ತಿಂಡಿಗಳನ್ನು ತಯಾರಿಸುವ ವಿಧಾನ ನೋಡಿದ್ರೆ ಯಾರೂ ತಿನ್ನಲ್ಲ.
ಹೌದು, ಇಲ್ಲೊಂದು ವಿಡಿಯೋದಲ್ಲಿ ಮೋಮೋಸ್ ತಯಾರಿಸುವ ವಿಧಾನವನ್ನು ತೋರಿಸಲಾಗಿದೆ. ಈ ವಿಡಿಯೋ ನೀವೇನಾದ್ರೂ ನೋಡಿದ್ರೆ ಮೊಮೋಸ್ ತಿನ್ನೋದಲ್ಲಾ, ಅದ್ರ ಹತ್ರ ಕೂಡ ಹೋಗೋದಿಲ್ಲ ನೀವು.
ಸದ್ಯ ಈ ಮೋಮೋಸ್ ತಯಾರಿಸುವ ವಿಧಾನದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಾ ಇದೆ. ಹಾಗಿದ್ರೆ ನೀವೂ ಈ ವಿಡಿಯೋವನ್ನು ನೋಡಿ.
ಮೋಮೋಸ್ ತಯಾರಿಸಲು ಮೈದಾ ಹಿಟ್ಟನ್ನು ಬಳಸುತ್ತಾರೆ. ಚಪಾತಿಗೆ ನಾವು ಮೈದಾ ಹಿಟ್ಟನ್ನ ಯಾವ ರೀತಿ ಕಲಸಿ ಕೊಳ್ಳುತ್ತೇವೆ ಅದೇ ರೀತಿ ಮೊಮೊಸ್ ಗೂ ಕಲಸಿಕೊಳ್ಳಬೇಕು. ಇಲ್ಲೊಬ್ಬ ಯುವಕ ಮೊಮೊಸ್ ಮಾಡಲು ಮೈದಾಹಿಟ್ಟನ್ನು ಒಂದು ಪಾತ್ರೆಗೆ ಹಾಕಿ ಅವುಗಳನ್ನ ತನ್ನ ಕಾಲುಗಳಿಂದ ಮಿಕ್ಸ್ ಮಾಡುತ್ತಿರುವುದು ಈ ವಿಡಿಯೋದಲ್ಲಿ ಕಾಣಿಸುತ್ತದೆ. ಇದು ಮಧ್ಯಪ್ರದೇಶದಲ್ಲಿ ನಡೆದಿರುವ ಘಟನೆ.
ಈ ವಿಡಿಯೋವನ್ನು ನೋಡಿದ ಸೋಶಿಯಲ್ ಮೀಡಿಯಾ ಬಳಕೆದಾರರು ‘ಮೋಮೋಸ್ ತಿಂದವರ ಕಥೆ ಏನು?’, ‘ಜನರ ಆರೋಗ್ಯದ ಬಗ್ಗೆ ಕಾಳಜಿ ಇಲ್ಲ’, ‘ಇಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.
Leave a Comment