ಇಂದಿನಿಂದ ಗ್ಯಾಸ್ ಸಿಲಿಂಡರ್ ಮತ್ತೆ ಭಾರೀ ಅಗ್ಗ‌ – ಬೆಲೆಯೇರಿಕೆ ಬಿಸಿಯ ನಡುವೆ ಗ್ರಾಹಕರಿಗೆ ಬಂಪರ್ ಆಫರ್

ಇಂದಿನಿಂದ ಗ್ಯಾಸ್ ಸಿಲಿಂಡರ್ ಮತ್ತೆ ಭಾರೀ ಅಗ್ಗ‌ – ಬೆಲೆಯೇರಿಕೆ ಬಿಸಿಯ ನಡುವೆ ಗ್ರಾಹಕರಿಗೆ ಬಂಪರ್ ಆಫರ್

ನ್ಯೂಸ್ ಆ್ಯರೋ : ಹೊಸ ಹಣಕಾಸು ವರ್ಷದ ಮೊದಲ ದಿನವಾದ ಎಪ್ರಿಲ್ 1ರಿಂದ ಎಲ್ ಪಿಜಿ (LPG) ಸಿಲಿಂಡರ್ ಗ್ರಾಹಕರಿಗೆ ಸಿಹಿಸುದ್ದಿ ಸಿಕ್ಕಿದ್ದು, ಎಲ್ ಪಿಜಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 32 ರೂ.ಇಳಿಕೆ ಮಾಡಲಾಗಿದೆ.

ಸದ್ಯ ಈ ತಿಂಗಳು ದೇಶೀಯ ಸಿಲಿಂಡರ್ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ದೆಹಲಿಯಲ್ಲಿ ಎಲ್ ಪಿಜಿ ಸಿಲಿಂಡರ್ ಬೆಲೆ ಇಂದಿನಿಂದ 30.50 ರೂ.ಗೆ ಇಳಿದಿದೆ. ಕೋಲ್ಕತ್ತಾದಲ್ಲಿ 32 ರೂ., ಮುಂಬೈನಲ್ಲಿ 31.50 ರೂ., ಚೆನ್ನೈನಲ್ಲಿ 30.50 ರೂ. ರೂ. ಇಳಿಕೆ ಮಾಡಲಾಗಿದೆ.

ಐಒಸಿ ಪ್ರಕಾರ, ಇಂದಿನಿಂದ ದೆಹಲಿಯಲ್ಲಿ 19 ಕೆಜಿ ಎಲ್ ಪಿಜಿ ವಾಣಿಜ್ಯ ಸಿಲಿಂಡರ್ ಬೆಲೆ 1764.50 ರೂ. ಈ ಹಿಂದೆ ಇದು 1795 ರೂ. ಕೋಲ್ಕತ್ತಾದಲ್ಲಿ, ಇದು ಈಗ 1911 ರೂ.ಗಳ ಬದಲು 1879.00 ರೂ.ಗೆ ಲಭ್ಯವಿದೆ. ಮುಂಬೈನಲ್ಲಿ ಇದು ಈಗ 1717.50 ರೂ. ಚೆನ್ನೈನಲ್ಲಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಈಗ 1930.00 ರೂ.ಗೆ ಇಳಿಕೆಯಾಗಿದೆ.

ಕೆಲವೇ ದಿನಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯ ನಡುವೆ ವಾಣಿಜ್ಯ ಸಿಲಿಂಡರ್ ಗಳ ದರವನ್ನು ಕಡಿಮೆ ಮಾಡುವುದರಿಂದ ಬೆಲೆಯೇರಿಕೆಯಿಂದ ಸ್ವಲ್ಪ ಪರಿಹಾರ ಸಿಕ್ಕಿದೆ. ಮಾರ್ಚ್ ನಲ್ಲಿ ಮಹಿಳಾ ದಿನದಂದು, ಸರ್ಕಾರವು ದೇಶೀಯ ಸಿಲಿಂಡರ್ ಗಳ ಬೆಲೆಯಲ್ಲಿ ಕೊಂಚ ಕಡಿಮೆಗೊಳಿಸಿತ್ತು.

ಕರ್ನಾಟಕದಲ್ಲಿ (Karnataka) ಮೊದಲು 1851 ರೂ. ಇದ್ದ ಸಿಲಿಂಡರ್ ಈಗ, 19 ಕೆಜಿ LPG ಸಿಲಿಂಡರ್ 1821.50 ರೂ.ಗೆ ಲಭ್ಯವಾಗಲಿದೆ. ಇನ್ನೂ, ಗೃಹಬಳಕೆಯ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಪ್ರಸ್ತುತ ರಾಜ್ಯದಲ್ಲಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 807.5 ರೂ. ಇದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *