ಭ್ರಷ್ಟಾಚಾರ ಹಗರಣ; ಆರ್ ಜಿ ಕರ್ ಮೆಡಿಕಲ್ ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ನಿವಾಸಕ್ಕೆ ED ದಾಳಿ
ನ್ಯೂಸ್ ಆ್ಯರೋ : ಕೋಲ್ಕತಾದ ಆರ್ ಜಿ ಕರ್ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯ ಹಗರಣಕ್ಕೆ ಸಂಬಂಧಿಸಿದಂತೆ ಆರ್ ಜಿ ಕರ್ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಮತ್ತು ಬಿಪ್ಲಾಬ್ ಸಿಂಗ್ ಮನೆಗೆ ಮೇಲೆ ಇಂದು ಬೆಳಗ್ಗೆ ಇಡಿ ದಾಳಿ ಮಾಡಿದೆ.
ಕಳೆದ ತಿಂಗಳು ಆರ್ ಜಿ ಕರ್ ಆಸ್ಪತ್ರೆಯಲ್ಲಿ 31 ವರ್ಷದ ವೈದ್ಯ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆಸಿ, ಕೊಲೆ ನಡೆದಿತ್ತು. ಈ ಪ್ರಕರಣಕ್ಕೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿ ಪ್ರತಿಭಟನೆಗಳು ನಡೆದವು.
ಇದೀಗ ಮೆಡಿಕಲ್ ಕಾಲೇಜಿನ ಭ್ರಷ್ಟಾಚಾರ ಹಗರಣದಡಿಯಲ್ಲಿ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಮತ್ತು ಬಿಪ್ಲಾಬ್ ಸಿಂಗ್ ರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.
ಇಂದು ಬೆಳಗ್ಗೆ ಇಡಿಯು ಸಂದೀಪ್ ಘೋಷ್ ಅವರ ಬೆಲಿಯಾಘಾಟಾ , ಹೌರಾ ಹಾಗೂ ಸುಭಾಸ್ ಗ್ರಾಮ್ ನಿವಾಸಗಳ ಮೇಲೆ ದಾಳಿ ನಡೆಸಿದೆ. ಆಸ್ಪತ್ರೆಯ ಡಾಟಾ ಎಂಟ್ರಿ ನಿರ್ವಾಹಕ ಪ್ರಸೂನ್ ಚಟರ್ಜಿ ಸೇರಿ ಇನ್ನೂ ಮೂವರು ನಿಕಟವರ್ತಿಗಳ ನಿವಾಸದ ಮೇಲೂ ಇಡಿ ದಾಳಿ ನಡೆಸಿದೆ.
Leave a Comment