ಈ ನಾಲ್ಕು ಬ್ಯಾಂಕ್ ಗಳು ಇಂದಿನಿಂದ ಬಂದ್…! – ಈ ಬ್ಯಾಂಕ್ ಗಳಲ್ಲಿ ನಿಮ್ಮ ಅಕೌಂಟ್ ಇದೆಯೇ..?

ಈ ನಾಲ್ಕು ಬ್ಯಾಂಕ್ ಗಳು ಇಂದಿನಿಂದ ಬಂದ್…! – ಈ ಬ್ಯಾಂಕ್ ಗಳಲ್ಲಿ ನಿಮ್ಮ ಅಕೌಂಟ್ ಇದೆಯೇ..?

ನ್ಯೂಸ್ ಆ್ಯರೋ : ಹೊಸ ವರ್ಷ ಎಂದಾಕ್ಷಣ ಅನೇಕ ರೀತಿಯ ಹೊಸ ಸಂಗತಿಗಳು ಬೆಳಕಿಗೆ ಬರುತ್ತಲೇ ಇರುತ್ತದೆ. ದೇಶದ ಪ್ರಮುಖ ನಿರ್ಧಾರವೊಂದನ್ನು ತೆಗೆದುಕೊಂಡಿದ್ದು, ಇಂದಿನಿಂದ ನಾಲ್ಕು ಬ್ಯಾಂಕ್​ಗಳು ಕಣ್ಮರೆಯಾಗಲಿವೆ. ಆ ಬ್ಯಾಂಕ್​ ಗಳ ಮಾಹಿತಿ ಇಲ್ಲಿದೆ. ಹೊಸ ವರ್ಷದ ಮೊದಲ ದಿನದಿಂದ ಆರ್​ಬಿಐ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. RBI ತೆಗೆದುಕೊಂಡ ನಿರ್ಣಯ ಏನು ಎಂಬುದರ ಮಾಹಿತಿ ಇಲ್ಲಿದೆ.

ದೇಶದ ಕೇಂದ್ರ ಬ್ಯಾಂಕ್ ಆಗಿರುವ ರಿಸರ್ವ ಬ್ಯಾಂಕ್ ಆಫ್ ಇಂಡಿಯಾ ನಾಲ್ಕು ಸಹಕಾರಿ ಬ್ಯಾಂಕ್​ಗಳ ಪರವಾನಿಗೆಯನ್ನು ರದ್ದುಗೊಳಿಸಿದೆ. ಈ ಬ್ಯಾಂಕ್​ಗಳಲ್ಲಿ ನಿಮ್ಮ ಖಾತೆ ಇದೆಯಾ ಎಂಬುದನ್ನು ಚೆಕ್ ಮಾಡಿಕೊಳ್ಳಬೇಕು.

  • ಬೋಟೆಡ್ ಪೀಪಲ್ಸ್ ಕೋ ಆಪರೇಟಿವ್ ಬ್ಯಾಂಕ್‌ನ ಪರವಾನಗಿಯನ್ನು ಆರ್‌ಬಿಐ ರದ್ದುಗೊಳಿಸಿದೆ. ಇದನ್ನು ಬ್ಯಾಂಕಿಂಗ್ ಅಲ್ಲದ ಸಂಸ್ಥೆ ಎಂದು ಗುರುತಿಸಲಾಗಿದೆ. ಇನ್ಮುಂದೆ ಇದು ಯಾವುದೇ ಬ್ಯಾಂಕಿಂಗ್ ವ್ಯವಹಾರಗಳನ್ನು ನಡೆಸಲು ಆಗಲ್ಲ. ಬೋಟೆಡ್ ಪೀಪಲ್ಸ್ ಕೋ ಆಪರೇಟಿವ್ ಯಾವುದೇ ಠೇವಣಿಗಳನ್ನು ಸ್ವೀಕರಿಸಲ್ಲ. ಹಕ್ಕು ಪಡೆಯದ ಠೇವಣಿಗಳು ಮತ್ತು ಪಾವತಿಸದ ಠೇವಣಿಗಳನ್ನು ಈಗ ಸದಸ್ಯರಲ್ಲದವರು ಪಾವತಿಸಬಹುದು.
  • ಆದರ್ಶ ಮಹಿಳಾ ನಗರಿ ಸಹಕಾರಿ ಬ್ಯಾಂಕ್‌ನ ಪರವಾನಗಿಯನ್ನು ಸಹ ಆರ್​ಬಿಐ ರದ್ದುಗೊಳಿಸಿದೆ. ಇದು ಸಹ ಮುಂದೆ ಯಾವುದೇ ಬ್ಯಾಂಕಿಂಗ್ ವ್ಯವಹಾರಗಳನ್ನು ಮಾಡಲು ಸಾಧ್ಯವಾಗಲ್ಲ. ಬ್ಯಾಂಕ್ ದಿವಾಳಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಆರ್‌ಬಿಐ ಈಗಾಗಲೇ ಮಹಾರಾಷ್ಟ್ರದ ಸಹಕಾರ ಸಂಘಗಳ ಆಯುಕ್ತರು ಮತ್ತು ರಿಜಿಸ್ಟ್ರಾರ್‌ಗೆ ಸೂಚನೆಗಳನ್ನು ನೀಡಿದೆ. ಆದರ್ಶ ಮಹಿಳಾ ನಗರಿ ಸಹಕಾರಿ ಬ್ಯಾಂಕ್‌ ಬಂಡವಾಳ ಕೊರತೆ ಎದುರಿಸಿದ್ದರಿಂದ ಪರವಾನಿಗೆ ರದ್ದುಗೊಳಿಸಲಾಗಿದೆ ಎಂದು ಆರ್​​ಬಿಐ ಹೇಳಿದೆ. ಒಂದು ವೇಳೆ ಕಾರ್ಯಾಚರಣೆ ಮುಂದುವರಿದ್ರೆ ಗ್ರಾಹಕರಿಗೆ ತೊಂದರೆ ಆಗುತ್ತಿತ್ತು ಎಂದು ಆರ್​​​ಬಿಐ ಹೇಳಿದೆ.
  • ಗ್ರಾಹಕರಿಗೆ ಬ್ಯಾಂಕಿನ ಮರುಪಾವತಿಯು ಸಾಕಾಗುವುದಿಲ್ಲ ಮತ್ತು ಇದು ಸಾರ್ವಜನಿಕ ಹಿತಾಸಕ್ತಿಗೆ ಹಾನಿಯಾಗುವ ಸಾಧ್ಯತೆಯಿದೆ ಎಂದು ಆರ್‌ಬಿಐ ಬಹಿರಂಗಪಡಿಸಿದೆ. ಆದರೆ ಗ್ರಾಹಕರಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಬ್ಯಾಂಕ್ ಭರವಸೆ ನೀಡಿದೆ. ಡಿಐಸಿಜಿಸಿ ಯೋಜನೆಯಡಿ ಬ್ಯಾಂಕ್ ಗ್ರಾಹಕರು ಗರಿಷ್ಠ 5 ಲಕ್ಷ ರೂಪಾಯಿ ಪಡೆಯುತ್ತಾರೆ. ಈ ವಿಮಾ ಯೋಜನೆಯಡಿ, ಬ್ಯಾಂಕ್ ದಿವಾಳಿಯಾದರೆ, ಗ್ರಾಹಕರಿಗೆ ಗರಿಷ್ಠ ರೂ. 5 ಲಕ್ಷ ಸಿಗುತ್ತದೆ. ಅಂದರೆ ಬ್ಯಾಂಕಿನಲ್ಲಿ ರೂ. 5 ಲಕ್ಷದವರೆಗೆ ಹಣ ಹೊಂದಿರುವವರು ಪೂರ್ಣ ಮೊತ್ತವನ್ನು ಪಡೆಯುತ್ತಾರೆ.

ಇದರ ಜೊತೆಯಲ್ಲಿ ಫೈಜ್ ಮರ್ಕೆಂಟೈಲ್ ಸಹಕಾರಿ ಬ್ಯಾಂಕ್‌, ಮುಸಿರಿ ಅರ್ಬನ್ ಕೋಆಪರೇಟಿವ್ ಬ್ಯಾಂಕ್‌ ಗಳ ಪರವಾನಿಗೆಯನ್ನು ಆರ್​ಬಿಐ ರದ್ದುಗೊಳಿಸಿದೆ.

ನಮ್ಮ ಬ್ಯಾಂಕ್ ವ್ಯವಹಾರಗಳನ್ನು ನಾವು ಜಾಗರೂಕತೆಯಿಂದ ಪಾಲಿಸಲು ಈ ಮೇಲಿನ ಮಾಹಿತಿಗಳನ್ನು ಗಣನೆಗೆ ತೆಗೆದುಕೊಳ್ಳಬೇಕು

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *