ಶಬರಿಮಲೆಯಲ್ಲಿ ಜ.1ರಿಂದ ಮಕರವಿಳಕ್ಕು ಉತ್ಸವ ಶುರು – ದಿಗ್ಭ್ರಮೆ ಹುಟ್ಟಿಸಿದೆ ಪ್ರಮೋದ್ ಮುತಾಲಿಕ್ ಹೇಳಿಕೆ…!!

ನ್ಯೂಸ್ ಆ್ಯರೋ : 2023ಕ್ಕೆ ಗುಡ್ ಬೈ ಹೇಳಿ ಹೊಸ ವರ್ಷಕ್ಕೆ ಕಾಲಿಟ್ಟಾಯಿತು‌. ಇನ್ನೇನೋ ಮಕರ ಸಂಕ್ರಮಣವೂ ಸಮೀಪಿಸುತ್ತಿದೆ. ಶಬರಿಮಲೆಯದಲ್ಲಿ ಜನವರಿ 15ರಿಂದ ಮಕರವಿಳಕ್ಕು ಉತ್ಸವ ಆರಂಭವಾಗಲಿದೆ. ಇದಕ್ಕಾಗಿ ಬೇಕಾದ ಸಿದ್ದತೆಗಳನ್ನು ಈಗಾಗಲೇ ಟಿಡಿಬಿ ಮಾಡಿಕೊಂಡಿದೆ.

41 ದಿನಗಳ ಮಂಡಲ ಪೂಜೆಯ ನಂತರ ಡಿಸೆಂಬರ್ 27 ರಂದು ದೇವಾಲಯದ ಬಾಗಿಲು ಮುಚ್ಚಲಾಯಿತು. ಮಕರವಿಳಕ್ಕು ಯಾತ್ರೆಗಾಗಿ ಕೇರಳದ ಶಬರಿಮಲೆಯ ಅಯ್ಯಪ್ಪ ದೇವಾಲಯವನ್ನು ಶನಿವಾರ ಸಂಜೆ ತೆರೆಯಲಾಗಿದೆ. ಜನವರಿ 16 ರಂದು ಸಂಜೆ (6:36:45) ಮಕರ ಜ್ಯೋತಿ ದರ್ಶನವಾಗಲಿದೆ. ಜನವರಿ 15 ರಿಂದ ಮಕರವಿಳಕ್ಕು ಉತ್ಸವ ಪ್ರಾರಂಭವಾಗಲಿದೆ ಎಂದು ದೇವಸ್ಥಾನದ ಆಡಳಿತದ ಉನ್ನತ ಸಂಸ್ಥೆಯಾದ ತಿರುವಾಂಕೂರು ದೇವಸ್ವಂ ಬೋರ್ಡ್ (ಟಿಡಿಬಿ) ತಿಳಿಸಿದೆ.

ಅದಕ್ಕೂ ಮುನ್ನ ಜ.13 ಮತ್ತು 14ರಂದು ‘ಪ್ರಸಾದ ಶುದ್ಧ ಕ್ರಿಯೆ’, ‘ಬಿಂಬ ಶುದ್ಧ ಕ್ರಿಯೆ’ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮಕರವಿಳಕ್ಕು ದಿನದಂದು ಭಕ್ತರು ಸನ್ನಿಧಾನಂನಲ್ಲಿ (ದೇವಾಲಯ ಸಂಕೀರ್ಣ) ಅಯ್ಯಪ್ಪನ ವಿಗ್ರಹವನ್ನು ಅಲಂಕರಿಸುವ ‘ತಿರುವಾಭರಣಂ’ (ಪವಿತ್ರ ಆಭರಣಗಳು) ಸ್ವಾಗತ ಮತ್ತು ‘ಅಯ್ಯಪ್ಪನ ಆರಾಧನೆ’ಯನ್ನು ವೀಕ್ಷಿಸುವ ಅವಕಾಶವನ್ನು ಪಡೆಯುತ್ತಾರೆ.

ಮಕರವಿಳಕ್ಕು ದರ್ಶನದ ನಂತರ ಜನವರಿ 20ರವರೆಗೆ ಯಾತ್ರಾರ್ಥಿಗಳಿಗೆ ದೇವಸ್ಥಾನ ತೆರೆದಿರುತ್ತದೆ. ನಂತರ ಭಕ್ತರ ದರ್ಶನಕ್ಕೆ ಅವಕಾಶವಿರುವುದಿಲ್ಲ. ಈ ನಡುವೆ ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿಕೆ ಅಚ್ಚರಿ ಮೂಡಿಸಿದೆ.

ಮುಸ್ಲಿಮರು, ಕ್ರೈಸ್ತರು ಶಬರಿಮಲೆ ಭಕ್ತರನ್ನು ಶೋಷಣೆ ಮಾಡುತ್ತಿದ್ದಾರೆ: ಮುತಾಲಿಕ್…!

ಶಬರಿಮಲೆ ದೇವಸ್ಥಾನದ ಭಕ್ತರನ್ನು ಮುಸ್ಲಿಮರು ಮತ್ತು ಕ್ರೈಸ್ತರು ಶೋಷಣೆ ಮಾಡುತ್ತಿದ್ದಾರೆ ಎಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಶನಿವಾರ ಹೇಳಿದ್ದಾರೆ. “ನಮ್ಮದು ರಾಷ್ಟ್ರದಾದ್ಯಂತ ಅನೇಕ ದೇವಾಲಯಗಳು ಮತ್ತು ಯಾತ್ರಾ ಕೇಂದ್ರಗಳನ್ನು ಹೊಂದಿರುವ ಆಧ್ಯಾತ್ಮಿಕ ದೇಶವಾಗಿದೆ. ದಕ್ಷಿಣ ಭಾರತದ ಅಯ್ಯಪ್ಪ ದೇವಸ್ಥಾನವು ತಿರುಪತಿ ವೆಂಕಟೇಶ್ವರನಷ್ಟೇ ಪ್ರಸಿದ್ಧವಾಗಿದೆ. ಆರು ರಾಜ್ಯಗಳಿಂದ ಸುಮಾರು ಐದು ಕೋಟಿ ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಾರೆ ಎಂದು ಮುತಾಲಿಕ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

“ಒಂದು ಕೋಟಿ ವಾಹನಗಳು ನಿಲುಗಡೆ ಮಾಡುತ್ತವೆ ಮತ್ತು ಪ್ರತಿ ವಾಹನಕ್ಕೆ 40 ರೂ. ಶುಲ್ಕ ವಿಧಿಸಲಾಗುತ್ತದೆ. ಎಲ್ಲಾ ಮೂಲಗಳಿಂದ ಆದಾಯವು 3,000 ಕೋಟಿ ರೂಪಾಯಿಗಳನ್ನು ದಾಟುತ್ತದೆ” ಎಂದು ಅವರು ಹೇಳಿದರು.

”ದೇವಸ್ಥಾನದ ಆದಾಯವನ್ನು ಅದರ ಅನುಕೂಲಕ್ಕಾಗಿ ಬಳಸಲಾಗುತ್ತದೆ. ಶಬರಿಮಲೆಯ ಐದು ಕೋಟಿ ಭಕ್ತರ ಅನುಕೂಲಕ್ಕಾಗಿ ಸೌಲಭ್ಯಗಳನ್ನು ಒದಗಿಸಿಲ್ಲ. ದೇವಸ್ಥಾನದ ಆಡಳಿತ ಮಂಡಳಿಗೆ ಸರ್ಕಾರ ಬೆದರಿಕೆ ಹಾಕುತ್ತಿದೆ’ ಎಂದು ಮುತಾಲಿಕ್ ಹೇಳಿದರು. ಕರ್ನಾಟಕ ಸರಕಾರ ಕೇರಳ ಸರಕಾರದೊಂದಿಗೆ ಮಾತುಕತೆ ನಡೆಸಿ ಭಕ್ತರಿಗೆ ಸೌಲಭ್ಯ ಕಲ್ಪಿಸಬೇಕು ಎಂದರು. ಸಾವಿರಾರು ಕೋಟಿ ಆದಾಯವನ್ನು ಭಕ್ತರ ಅನುಕೂಲಕ್ಕೆ ಬಳಸಿಕೊಳ್ಳಬೇಕು. ಉಚಿತ ಆಹಾರ ವಿತರಣೆ ಕಾರ್ಯಕ್ರಮವನ್ನು ಹಿಂದಿನಂತೆ ಪುನರಾರಂಭಿಸಬೇಕು’ ಎಂದು ಆಗ್ರಹಿಸಿದರು.

ಹಿಂದೂ ಸಂಘಟನೆಗಳು ಭಕ್ತರಿಗೆ ಅನ್ನ ಪ್ರಸಾದ (ಉಚಿತ ಅನ್ನದಾನ) ವ್ಯವಸ್ಥೆ ಮಾಡುತ್ತಿದ್ದು, ಅದನ್ನು ನಿಷೇಧಿಸಿ ಪೊಲೀಸ್ ಇಲಾಖೆಗೆ ಹಸ್ತಾಂತರಿಸಲಾಗಿದೆ. ಈ ಕ್ರಮದ ನಂತರ, ಅನೇಕ ಭಕ್ತರಿಗೆ ಪ್ರಸಾದ ಸಿಗುತ್ತಿಲ್ಲ. ಭಕ್ತರಿಗೆ ಅನ್ನ ಪ್ರಸಾದ ವಿತರಿಸುವ ವ್ಯವಸ್ಥೆಯನ್ನು ಸರಿಪಡಿಸುವಂತೆ ದೇವಸ್ಥಾನದ ಆಡಳಿತ ಮಂಡಳಿಗೆ ಮನವಿ ಮಾಡುತ್ತಿದ್ದೇವೆ ಎಂದರು. ಭಕ್ತರಿಗೆ ನೀರಿನ ಲಭ್ಯತೆ ಹಾಗೂ ಸ್ನಾನಗೃಹದ ವ್ಯವಸ್ಥೆ ಕಲ್ಪಿಸಬೇಕು. ಈ ಹಿಂದೆ ಇದ್ದ ಪಾರ್ಕಿಂಗ್ ವ್ಯವಸ್ಥೆಯನ್ನು ಮತ್ತೆ ತರಬೇಕು ಎಂದರು.

ಇನ್ನು ಶಬರಿಮಲೆಗೆ ಹಿಂದೆಂದೂ ಕಾಣದ ರೀತಿಯಲ್ಲಿ ಅಯ್ಯಪ್ಪ ಭಕ್ತರ ದಂಡು ಹರಿದು ಬರುತ್ತಿದೆ. ಸ್ವಾಮಿಯ ದರ್ಶನಕ್ಕೆ ಬಂದ ಭಕ್ತರ ಸಂಖ್ಯೆ ಮಾತ್ರವಲ್ಲದೆ ತಿರುವಾಂಕೂರು ದೇವಸ್ವಂ ಮಂಡಳಿಗೆ ಕಾಣಿಕೆ ರೂಪದಲ್ಲಿ ಬಂದ ಆದಾಯವೂ ದಾಖಲೆ ಮಟ್ಟ ತಲುಪಿದೆ. ಪ್ರಸ್ತುತ ನಾಣ್ಯಗಳನ್ನು ಹೊರೆತುಪಡಿಸಿ 204 ಕೋಟಿ ಆದಾಯ ಬಂದಿದೆ ಎಂದು ಟಿಡಿಬಿ ತಿಳಿಸಿದೆ.

ಮಕರವಿಳಕ್ಕು ಉತ್ಸವಕ್ಕೆ ದೇವಸ್ಥಾನದ ಅಧಿಕಾರಿಗಳು ಹಾಗೂ ಕೇರಳ ಸರ್ಕಾರ ಸಕಲ ಸಿದ್ಧತೆ ಮಾಡಿಕೊಂಡಿದೆ. ಭಕ್ತಾದಿಗಳ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ನೂಕುನುಗ್ಗಲು ಉಂಟಾಗದಂತೆ ಎಲ್ಲೆಂದರಲ್ಲಿ ಸರತಿ ಸಾಲುಗಳ ಮೂಲಕ ದರ್ಶನ ಪೂರ್ಣಗೊಳಿಸಲು ಸಿಬ್ಬಂದಿಯನ್ನು ನೇಮಿಸಲಾಗಿದೆ. ಈ ನಡುವೆ ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿಕೆ ಅಚ್ಚರಿ ಮೂಡಿಸಿದೆ.