Beauty Tips : ಮೊಡವೆಯ ಸಮಸ್ಯೆ ಹೆಚ್ಚಾಗಿ ಕಾಡ್ತಿದ್ಯಾ…? ಇಲ್ಲಿದೆ ಸುಲಭ ಪರಿಹಾರ…
ನ್ಯೂಸ್ ಆ್ಯರೋ : ಇಂದಿನ ಯುವ ಜನರು ಸೌಂದರ್ಯದ ವಿಚಾರಕ್ಕೆ ತುಂಬಾ ಪ್ರಾಮುಖ್ಯತೆ ನೀಡುತ್ತಾರೆ. ಟಿವಿ ಜಾಹೀರಾತಿನಲ್ಲಿ ತೋರಿಸುವ, ಬ್ಯೂಟಿ ಪ್ರೊಡಕ್ಟ್ ಗಳನ್ನು ದುಬಾರಿ ಹಣ ಕೊಟ್ಟು ಖರೀದಿ ಮಾಡುತ್ತಾರೆ. ಇಂತಹ ರಾಸಾಯನಿಕ ವಸ್ತುಗಳ ಬಳಕೆಯಿಂದಾಗಿ ಮುಖದಲ್ಲಿ ಮೊಡವೆಗಳ ಸಮಸ್ಯೆಗಳು ಹೆಚ್ಚಾಗುತ್ತದೆ.
ಕೆಲವರಂತೂ ಈ ಮೊಡವೆಗಳಿಂದ ಮುಕ್ತಿ ಪಡೆಯಲು ಹರಸಾಹಸ ಪಡುತ್ತಾರೆ. ದುಬಾರಿ ಕಾಸ್ಮೆಟಿಕ್ ಖರೀದಿಸಿ ಮುಖಕ್ಕೆ ಹಚ್ಚಿ ಅನೇಕ ಪ್ರಯೋಗಗಳನ್ನು ಮಾಡುತ್ತಾರೆ. ಮೊಡವೆಗಳಿಂದ ಪರಿಹಾರ ಪಡೆಯಲು ಇಲ್ಲಿದೆ ಸುಲಭ ಮನೆಮದ್ದು.
ಜೇನು ತುಪ್ಪ : ರೋಗನಿರೋಧಕ ಶಕ್ತಿಯನ್ನು ಹೊಂದಿರುವ ಜೇನುತುಪ್ಪ ಮೊಡವೆ ನಿವಾರಿಸಲು ಸಹಕಾರಿ. ರಾತ್ರಿ ಮಲಗುವ ಮುನ್ನ ಮೊಡವೆ ಇರುವ ಭಾಗಕ್ಕೆ ಜೇನುತುಪ್ಪ ಹಚ್ಚಿ, ಬ್ಯಾಂಡೇಜ್ ನಿಂದ ಮುಚ್ಚಬೇಕು. ರಾತ್ರಿಯಿಡೀ ಹಾಗೆ ಬಿಟ್ಟು, ಬೆಳಗ್ಗೆ ಎದ್ದ ಕೂಡಲೇ ಬ್ಯಾಂಡೇಜ್ ತೆಗೆದು ಮುಖವನ್ನು ತೊಳೆಯಬೇಕು.
ಇದರಿಂದ ನಿಮ್ಮ ಮುಖದಲ್ಲಿರುವ ಮೊಡವೆಗಳು ಮಾಯವಾಗುತ್ತದೆ.
ಐಸ್ ಕ್ಯೂಬ್ : ಐಸ್ ಕ್ಯೂಬ್ ನಿಂದಲೂ ಮುಖದಲ್ಲಿರುವ ಮೊಡವೆಯಿಂದ ನಿವಾರಣೆ ಪಡೆಯಬಹುದು. ಪ್ರತಿದಿನ 2 ರಿಂದ 3 ಬಾರಿ ಐಸ್ ಕ್ಯೂಬ್ ನಿಂದ ಮುಖಕ್ಕೆ ಮಸಾಜ್ ಮಾಡುವುದರಿಂದ ನಿಮ್ಮ ಮುಖದಲ್ಲಿರುವ ಮೊಡವೆಗಳು ಮಾಯವಾಗುತ್ತದೆ.
ಪಪ್ಪಾಯಿ ಹಣ್ಣು : ಪಪ್ಪಾಯಿ ಹಣ್ಣು ವಿಟಮಿನ್ ಸಿ ಅಂಶವನ್ನು ಹೊಂದಿದೆ. ಪೂರ್ತಿ ಹಣ್ಣಾಗಿರುವ ಪಪ್ಪಾಯಿಯನ್ನು ಸಣ್ಣಗೆ ತುಂಡು ಮಾಡಿ, ಇದರಿಂದ ಮುಖಕ್ಕೆ ಮಸಾಜ್ ಮಾಡಬೇಕು. ಐದು ನಿಮಿಷಗಳ ಬಳಿಕ ಮುಖವನ್ನು ಉಗುರು ಬೆಚ್ಚ ನೀರಿನಲ್ಲಿ ತೊಳೆಯಿರಿ. ಇದು ನಿಮ್ಮ ಮುಖದಲ್ಲಿರುವ ಮೊಡವೆಯನ್ನು ಸುಲಭವಾಗಿ ನಿವಾರಿಸುತ್ತದೆ.
ಮನೆಯಲ್ಲೇ ಸಿಗುವ ವಸ್ತುಗಳಿಂದ ಸುಲಭವಾಗಿ ಪರಿಹಾರ ಪಡೆಯಿರಿ. ಶುಷ್ಕ ಹಾಗೂ ಕಾಂತಿಯುತ ತ್ವಚೆಯನ್ನು ನಿಮ್ಮದಾಗಿಸಿಕೊಳ್ಳಿ.
Leave a Comment