ಪ್ರಯಾಣ ದರದಲ್ಲಿ ರಿಯಾಯಿತಿ; ಗಣೇಶ ಹಬ್ಬಕ್ಕೆ ಗುಡ್ ನ್ಯೂಸ್ ಕೊಟ್ಟ KSRTC
ನ್ಯೂಸ್ ಆ್ಯರೋ : ಇನ್ನೇನು ಎರಡು ಮೂರು ದಿನಗಳಲ್ಲಿ ಬರುತ್ತಿರುವ ಗೌರಿ ಗಣೇಶ ಹಬ್ಬಕ್ಕೆ ಪ್ರಯಾಣಿಕರಿಗೆ ಶುಭ ಸುದ್ದಿ ನೀಡಿದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ. ಗೌರಿ ಹಬ್ಬಕ್ಕೆ ಊರಿಗೆ ತೆರಳರಿರುವ ಗ್ರಾಹಕರಿಗೆ ಟಿಕೆಟ್ ಬುಕ್ಕಿಂಗ್ ನಲ್ಲಿ ರಿಯಾಯಿತಿ ಘೋಷಣೆ ಮಾಡಲಾಗಿದೆ.
ಬೆಂಗಳೂರಿನಿಂದ ಇತರ ಜಿಲ್ಲೆಗಳಿಗೆ ಸೆ. 5 ರಿಂದ 7 ರವರೆಗೆ ಹೆಚ್ಚುವರಿ 1,500 ಬಸ್‌ಗಳನ್ನು ಓಡಿಲಾಗುವುದು ಎಂದು ತಿಳಿಸಿದೆ. ಇದರ ಜೊತೆಗೆ ಸೆ. 8ರಂದು ಹೊರ ರಾಜ್ಯಗಳಿಗೆ ತೆರಳಲು ಹೊಸ ಬಸ್ಸುಗಳ ವ್ಯವಸ್ಥೆ ಕಲ್ಪಿಸಲಾಗುವುದು.
ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಿಂದ ಕುಕ್ಕೆ ಸುಬ್ರಹ್ಮಣ್ಯ, ಹಾಸನ, ಧರ್ಮಸ್ಥಳ, ಮಂಗಳೂರು, ಶಿವಮೊಗ್ಗ, ಕುಂದಾಪುರ, ಹೊರನಾಡು, ಹುಬ್ಬಳ್ಳಿ, ದಾವಣಗೆರೆ ಕಡೆಗೆ ವಿಶೇಷ ಬಸ್‌ಗಳು ಸಂಚರಿಸಲಿವೆ. ಹಾಗೆಯೇ ಶೃಂಗೇರಿ, ಧಾರವಾಡ, ವಿಜಯಪುರ, ರಾಯಚೂರು, ಬೆಳಗಾವಿ, ಕಲಬುರಗಿ, ಕಾರವಾರ, ಬಳ್ಳಾರಿ, ಬೀದರ್, ವಿಜಯವಾಡ ಜಿಲ್ಲೆಗಳಿಗೆ ಹೆಚ್ಚುವರಿ ಬಸ್ ವ್ಯವಸ್ಥೆ ಇರಲಿದೆ.
ಹೊರ ರಾಜ್ಯಗಳಾದ ಮಧುರೈ, ಚೆನ್ನೈ, ಕೊಯಮತ್ತೂರು, ಕುಂಭಕೋಣಂ, ತಿರುಪತಿ, ತಿರುಚ್ಚಿ, ತ್ರಿಶೂರ್, ಎರ್ನಾಕುಲಂ, ಪಾಲಕ್ಕಾಡ್, ಚೆನ್ನೈ, ಹೈದರಾಬಾದ್, ಕೋಝಿಕ್ಕೋಡ್, ತಮಿಳುನಾಡು ಮತ್ತು ಕೇರಳದ ಸ್ಥಳಗಳಿಗೆ ವಿಶೇಷ ಬಸ್‌ಗಳು ಕಾರ್ಯನಿರ್ವಹಿಸಲಿವೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.
ಏಕಕಾಲದಲ್ಲಿ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಟಿಕೆಟ್‌ಗಳನ್ನು ಬುಕ್ ಮಾಡಿದ ಪ್ರಯಾಣಿಕರಿಗೆ ಶೇಕಡಾ 5 ರಷ್ಟು ರಿಯಾಯಿತಿ ಲಭ್ಯವಿರುತ್ತದೆ ಮತ್ತು ರಿಟರ್ನ್ ಪ್ರಯಾಣದ ಟಿಕೆಟ್‌ಗಳಿಗೆ ಶೇಕಡಾ 10 ರಷ್ಟು ರಿಯಾಯಿತಿಯನ್ನು ನೀಡಲಾಗುವುದು ಎಂದು ಘೋಷಿಸಿದೆ.
Leave a Comment