ಏಕಾಂಗಿಯಾಗಿ ಓಡಾಡುವ ಮಹಿಳೆಯರಿಗೆ ಗುಡ್ ನ್ಯೂಸ್ – ಬಂತು ನೋಡಿ ‘ವುಮೆನ್ ಸೇಫ್ಟಿ ಆ್ಯಪ್’..! ಒಂದು ಬಟನ್ ಒತ್ತಿದ್ರೆ ಸಾಕು…!

ಏಕಾಂಗಿಯಾಗಿ ಓಡಾಡುವ ಮಹಿಳೆಯರಿಗೆ ಗುಡ್ ನ್ಯೂಸ್ – ಬಂತು ನೋಡಿ ‘ವುಮೆನ್ ಸೇಫ್ಟಿ ಆ್ಯಪ್’..! ಒಂದು ಬಟನ್ ಒತ್ತಿದ್ರೆ ಸಾಕು…!

ನ್ಯೂಸ್ ಆ್ಯರೋ : ಮಹಿಳೆಯರು ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುತ್ತಿರಬೇಕಾದರೆ ಕೂಡಾ ಆಭರಣ, ಪರ್ಸ್ ಕದ್ದೊಯ್ಯುವ ಜನರನ್ನು ನಾವು ನೋಡಿರುತ್ತೇವೆ. ಬಸ್ಸು ಮತ್ತು ಎಲ್ಲೆಂದರಲ್ಲಿ ತಮ್ಮ ಚಪಲ ತೀರಿಸುವ ಕಿರಾತಕರು ನಮ್ಮ ಮಧ್ಯೆ ಇರುತ್ತಾರೆ. ಹೀಗೆ ಮಹಿಳೆಯರಿಗೆ ಎಲ್ಲಿ ಹೋದರೂ ಅಪಾಯ ಮುಗಿಯುವಂತದ್ದಲ್ಲ. ಇನ್ನು ಅಪರಿಚಿತ ಜಾಗದಲ್ಲಿ ಕೇಳಬೇಕೆ..? ಆದರೆ ಇನ್ಮುಂದೆ ಮಹಿಳೆಯರು ಸುರಕ್ಷತೆಯ ವಿಚಾರದಲ್ಲಿ ಭಯಪಡಬೇಕಾಗಿಲ್ಲ.

ಪ್ರಯಾಣದ ವೇಳೆ ಸಹ ಪ್ರಯಾಣಿಕರು ಕಿರುಕುಳ ಕೊಡುತ್ತಿದ್ದಾರೆ ಅನ್ನೋದು ಮನವರಿಕೆಯಾದರೆ ಕೂಡಲೇ ಪ್ಯಾನಿಕ್ ಬಟನ್ ಒತ್ತಿದರೆ ಸಾಕು ನೀವು ಕಳುಹಿಸಬೇಕಾದ ವ್ಯಕ್ತಿಗಳಿಗೆ ಅಲರ್ಟ್ ಸಂದೇಶ ರವಾನೆಯಾಗುವಂತಹ ನೂತನ ಅಪ್ಲಿಕೇಶನ್​ವೊಂದನ್ನು ಕಾಲೇಜು ವಿದ್ಯಾರ್ಥಿನಿಯೊಬ್ಬರು ಅಭಿವೃದ್ಧಿ ಪಡಿಸಿದ್ದಾರೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಟೆಕ್​ ಸಮ್ಮಿಟ್​ನಲ್ಲಿ ಕೆ.ಆರ್‌. ಪುರ ಸಿ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿರುವ ಆಯೇಷಾ ಸರ್ವತ್ ‘ವುಮೆನ್ ಸೇಫ್ಟಿ’ ಅಪ್ಲಿಕೇಶನ್ ಸಾಫ್ಟ್​​ವೇರ್‌ ಸಿದ್ಧಪಡಿಸಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಪುರುಷರಿಗೆ ಸರಿಸಮನಾಗಿ ಮಹಿಳೆಯರು ಬೆಳೆದು ನಿಂತಿದ್ದಾರೆ. ಮನೆ ಕಾಯಕದ ಜೊತೆಗೆ ಮನೆಯಿಂದಾಚೆಗೂ ಸಹ ದುಡಿಯುತ್ತಿದ್ದಾರೆ. ಎಷ್ಟೋ ಸಂದರ್ಭಗಳಲ್ಲಿ ಕಚೇರಿ ಕೆಲಸ ಮುಗಿಸಿಕೊಂಡು ತಡರಾತ್ರಿ ಬರಬೇಕಾದರೆ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಅತ್ಯಾಚಾರದಂತೆ ಕೃತ್ಯಗಳು ನಡೆದಿರುವ ನಿದರ್ಶನಗಳು ಇವೆ. ಅಲ್ಲದೆ, ಒಂಟಿಯಾಗಿ ಕ್ಯಾಬ್​ನಲ್ಲಿ ಸಂಚರಿಸುವಾಗ ಆತಂಕ ಇದ್ದೇ ಇರಲಿದೆ.

ಹೀಗಾಗಿ ರೆಡ್ ಝೋನ್ ಪ್ರದೇಶಗಳಲ್ಲಿ ಅಥವಾ ಅಪರಿಚಿತ ಸ್ಥಳಗಳಲ್ಲಿ ಓಡಾಡುವಾಗ ಈ ಅಪ್ಲಿಕೇಶನ್​ ಮಹಿಳೆಯರ ನೆರವಿಗೆ ಬರಲಿದೆ. ಅಪಾಯದಲ್ಲಿ ಸಿಲುಕಿರುವುದು ಗೊತ್ತಾದರೆ ಕೂಡಲೇ ಪ್ಯಾನಿಕ್​ ಬಟನ್ ಒತ್ತಿದರೆ ಸೈರನ್ ಮೊಳಗಲಿದೆ. ಜೊತೆಗೆ ನಿಮ್ಮ ಕಾಂಟ್ಯಾಕ್ಟ್ ಲಿಸ್ಟ್​ನಲ್ಲಿರುವ ಯಾರಿಗಾದರೂ ಕಳುಹಿಸಿದರೆ ಕೂಡಲೇ ‘ಐಯಮ್ ಇನ್ ಟ್ರಬಲ್’ ಎಂದು ಲೊಕೇಶನ್‌ ಸಹಿತ ಸಂದೇಶ ರವಾನೆಯಾಗಲಿದೆ ಎಂದು ಈಟಿವಿ ಭಾರತಕ್ಕೆ ಆಯೇಷಾ ತಿಳಿಸಿದ್ದಾರೆ.

ಈ ಆ್ಯಪ್ ಗೆ ಇಂಟರ್ನೆಟ್, ವೈಫೈ, ಜಿಪಿಎಸ್ ಅಗತ್ಯವಿಲ್ಲ:

ಸಾರ್ವಜನಿಕ‌‌ ಪ್ರದೇಶಗಳಲ್ಲಿ ಅಪಾಯ ಎದುರಾಗುವ ಸಂದರ್ಭ ಬಂದರೆ ಕೂಡಲೇ ಮೊಬೈಲ್​ನಲ್ಲಿ ಅಳವಡಿಸಿಕೊಂಡಿರುವ ವುಮೆನ್ ಸೇಫ್ಟಿ ಅಪ್ಲಿಕೇಶನ್​ನಲ್ಲಿ ಪ್ಯಾನಿಕ್​ ಬಟನ್ ಒತ್ತಿದರೆ ಅಲಾರಂ ರೀತಿ ಸೈರನ್ ಮೊಳಗಲಿದೆ.‌ ಈ ಮೂಲಕ ಸುತ್ತಮುತ್ತಲಿನಲ್ಲಿರುವವರ ಗಮನ ಸೆಳೆದು ನೆರವು ಪಡೆಯಹುದು.‌ ಎರಡನೇಯದಾಗಿ ನಿರ್ಜನ ಪ್ರದೇಶಗಳಲ್ಲಿ ಅಥವಾ ಒಂಟಿಯಾಗಿ ಪ್ರಯಾಣ ಮಾಡುವಾಗ ನಿಮ್ಮ ಮೊಬೈಲ್​ನಲ್ಲಿರುವ ಸಂಪರ್ಕಿತರ ನಂಬರ್​ಗಳಿಗೆ ಸಂದೇಶ ಕಳುಹಿಸಬಹುದಾಗಿದೆ.‌

ಇದಕ್ಕೆ‌ ಯಾವುದೇ ಇಂಟರ್​ನೆಟ್, ವೈಫೈ ಹಾಗೂ ಜಿಪಿಎಸ್‌ ಸಹಾಯದ ಅಗತ್ಯವಿಲ್ಲ. ಆ್ಯಂಡ್ರಾಯ್ಡ್ ಮೊಬೈಲ್ ಇರುವವರು ಮಾತ್ರ ಅಪ್ಲಿಕೇಶನ್ ನಿಂದ ನೆರವು ಪಡೆಯಬಹುದು. ಪ್ರಾಯೋಗಿಕ ಹಂತವಾಗಿ ಕಾಲೇಜಿನಲ್ಲಿ‌ ಮಹಿಳಾ ಉಪನ್ಯಾಸಕರು ಹಾಗೂ ವಿದ್ಯಾರ್ಥಿನಿಯರು ಈಗಾಗಲೇ ಈ ಅಪ್ಲಿಕೇಶನ್ ಬಳಸುತ್ತಿದ್ದಾರೆ. ಏಕಕಾಲದಲ್ಲಿ 150 ಮಂದಿಗೆ ಅಲರ್ಟ್ ಮೆಸ್ಸೇಜ್ ಕಳುಹಿಸಬಹುದಾಗಿದೆ. ಹೆಚ್ಚಿನ ಸಾಮರ್ಥ್ಯ ಕಲ್ಪಿಸಲು ಕ್ಲೌಡ್ ಖರೀದಿಸಬೇಕಿದೆ.

ಇದಕ್ಕೆ ಕಾಲೇಜು ಆಡಳಿತ ಮಂಡಳಿಯಿಂದ ಉತ್ತಮ ಬೆಂಬಲ ದೊರೆತಿದೆ ಎನ್ನುತ್ತಾರೆ ಆಯೇಷಾ. ಈ ಆ್ಯಪ್ ನ ಪ್ರಯೋಜನ ಸಾಮಾನ್ಯ ಮಹಿಳೆಯರಿಗೂ ತಲುಪಲಿ ಎಂಬುವುದೇ ಆಶಯ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *