ಮಾಲಕನ ವಿಚ್ಛೇದನ ಸುದ್ದಿಯಿಂದ ವಿಶ್ವ ಪ್ರಸಿದ್ಧ ಕಂಪೆನಿಗೆ ಭಾರಿ ನಷ್ಟ – ರೇಮಂಡ್ ಕಂಪನಿ ಕಳೆದುಕೊಂಡದ್ದು ಎಷ್ಟು ಕೋಟಿ ಗೊತ್ತಾ?

ಮಾಲಕನ ವಿಚ್ಛೇದನ ಸುದ್ದಿಯಿಂದ ವಿಶ್ವ ಪ್ರಸಿದ್ಧ ಕಂಪೆನಿಗೆ ಭಾರಿ ನಷ್ಟ – ರೇಮಂಡ್ ಕಂಪನಿ ಕಳೆದುಕೊಂಡದ್ದು ಎಷ್ಟು ಕೋಟಿ ಗೊತ್ತಾ?

ನ್ಯೂಸ್ ಆ್ಯರೋ : ವಿಶ್ವ ಪ್ರಸಿದ್ಧ ಕಂಪೆನಿಯ ಮಾಲಕನ ವಿಚ್ಛೇದನ ಸುದ್ದಿಯಿಂದ ಆ ಕಂಪನಿ ಬೃಹತ್ ಪ್ರಮಾಣದ ನಷ್ಟವನ್ನು ಎದುರಿಸುವಂತಾಗಿದೆ.

ರೇಮಂಡ್‌ ಬ್ರ್ಯಾಂಡ್‌ ನ ಬಟ್ಟೆ ಧರಿಸದವರು ಯಾರೂ ಇರಲಿಕ್ಕಿಲ್ಲ. ಎಲ್ಲರೂ ಮೆಚ್ಚುವಂತಹ ಉತ್ಪನ್ನವಿದು. ವಿಶ್ವದ ಅತಿ ದೊಡ್ಡ ಸೂಟ್ ಫ್ಯಾಬ್ರಿಕ್ ಉತ್ಪಾದಕರಲ್ಲಿ ಒಂದಾದ ರೇಮಂಡ್ ಲಿಮಿಟೆಡ್ ಪ್ರಸ್ತುತ ಷೇರು ಮಾರುಕಟ್ಟೆಯಲ್ಲಿ ಕಳೆದ ಕೆಲ ದಿನಗಳಿಂದ ನೆಲಕಚ್ಚಿದೆ.

ರೇಮಂಡ್ ಕಂಪೆನಿ ಮಾಲಕ ಕೋಟ್ಯಧೀಶ ಗೌತಮ್ ಸಿಂಘಾನಿಯಾ ಮತ್ತು ಪತ್ನಿ ನವಾಜ್ ಮೋದಿ ವಿಚ್ಛೇದನ ಪಡೆಯುತ್ತಿರುವ ಸುದ್ದಿ ಹೊರಬಿದ್ದ ತಕ್ಷಣ ಕಂಪೆನಿ ಷೇರುಗಳ ಮೇಲೆ ಪರಿಣಾಮ ಬೀರಿದೆ.

ವಿಶ್ವದ ಅತಿ ದೊಡ್ಡ ಸೂಟ್ ಫ್ಯಾಬ್ರಿಕ್ ಉತ್ಪಾದನೆಯಲ್ಲಿ ಒಂದಾದ ರೇಮಂಡ್ ಲಿಮಿಟೆಡ್ ಮುಂಬಯಿ ಷೇರುಪೇಟೆಯಲ್ಲಿ ಏಳನೇ ದಿನವೂ ಕುಸಿತಗೊಂಡು ಸರಿಸುಮಾರು 1500 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ. ಹೂಡಿಕೆದಾರರಲ್ಲಿನ ಅನಿಶ್ಚಿತತೆ ಈ ಕುಸಿತಕ್ಕೆ ಕಾರಣ ಎನ್ನಲಾಗಿದೆ.

ಪತ್ನಿ ನವಾಜ್ ಸಿಂಘಾನಿಯಾ ಅವರಿಂದ ವಿಚ್ಛೇದನ ಪಡೆಯುವ ಬಗ್ಗೆ ಗೌತಮ್ ಸಿಂಘಾನಿಯಾ ನವೆಂಬರ್ 13ರಂದು ಘೋಷಣೆ ಮಾಡಿದ್ದು ಬಳಿಕ ಕಂಪೆನಿಯ ಷೇರುಗಳು ಶೇ.12ರಷ್ಟು ಕುಸಿತವಾಗಿದೆ. ಇದು ಹೀಗೆ ಮುಂದುವರಿದರೆ ಮುಂದೆ ಕಂಪೆನಿಯ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎನ್ನುವುದು ಯಾರಿಗೂ ತಿಳಿದಿಲ್ಲ.

ಗೌತಮ್ ಸಿಂಘಾನಿಯಾ ತಮ್ಮ 1.4 ಬಿಲಿಯನ್ ಡಾಲರ್ ನಿವ್ವಳ ಮೌಲ್ಯದ ಸಂಪತ್ತಿನಲ್ಲಿ ಶೇ. 75ರಷ್ಟನ್ನು ತಮ್ಮ ಇಬ್ಬರು ಮಕ್ಕಳಾದ ನಿಹಾರಿಕಾ, ನಿಸಾ ಹಾಗೂ ತಮಗೆ ನೀಡಬೇಕು ಎಂದು ನವಾಜ್ ಮೋದಿ ಬೇಡಿಕೆ ಇಟ್ಟಿದ್ದಾರೆ. ಇದಕ್ಕೆ ಸಿಂಘಾನಿಯಾ ಕೆಲವು ಷರತ್ತುಗಳನ್ನು ವಿಧಿಸಿದ್ದಾರೆ.

ಗೌತಮ್ ಅವರ ಆಸ್ತಿಯ ಮೌಲ್ಯ 11,000 ಕೋಟಿ ರೂ. ಎನ್ನಲಾಗಿದ್ದು, ಮರಣದ ಬಳಿಕ ತಮ್ಮ ಕುಟುಂಬ ಸದಸ್ಯರು ಇದಕ್ಕೆ ವಾರಸುದಾರರಾಗಿತ್ತಾರೆ ಎಂದು ಗೌತಮ್ ಸಿಂಘಾನಿಯಾ ಹೇಳಿದ್ದು ಇದಕ್ಕೆ ನವಾಜ್ ಒಪ್ಪಿಗೆ ನೀಡಿಲ್ಲ.

ಪರಿಹಾರ ವಿಚಾರದ ಬಗ್ಗೆ ಇನ್ನೂ ಅಂತಿಮ ನಿರ್ಧಾರವಾಗಿಲ್ಲ. ದಂಪತಿ ತಮ್ಮ ಮಕ್ಕಳ ಯೋಗಕ್ಷೇಮದ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

ಸಾಲಿಸಿಟರ್ ಆಗಿದ್ದ ನಾದರ್ ಮೋದಿ ಅವರ ಪುತ್ರಿ ನವಾಜ್ ಅವರನ್ನು ಸಿಂಘಾನಿಯಾ 32 ವರ್ಷಗಳ ಹಿಂದೆ ವಿವಾಹವಾಗಿದ್ದರು. ತಮ್ಮ 32 ವರ್ಷಗಳ ಸಂಬಂಧವನ್ನು ಕಡಿದುಹಾಕಲು ಅವರಿಗ ನಿರ್ಧರಿಸಿದ್ದಾರೆ. ಇದಕ್ಕೆ ಸ್ಪಷ್ಟ ಕಾರಣವನ್ನು ಅವರು ಬಹಿರಂಗಪಡಿಸಿರಲಿಲ್ಲ.

1986 ರಲ್ಲಿ ಸಿಂಘಾನಿಯಾ ಕುಟುಂಬದ ಜೆಕೆ ಗ್ರೂಪ್ ಆಫ್ ಕಂಪೆನಿಗಳಿಗೆ ಸೇರಿದ ಗೌತಮ್ ಸಿಂಘಾನಿಯಾ ನಂತರ ಕುಟುಂಬದ ರೇಮಂಡ್ ಗ್ರೂಪ್‌ಗೆ ಸೇರಿದರು, 1990 ರಲ್ಲಿ ನಿರ್ದೇಶಕರಾದರು, ಜುಲೈ 1999 ರಲ್ಲಿ ವ್ಯವಸ್ಥಾಪಕ ನಿರ್ದೇಶಕರಾದರು ಮತ್ತು ಸೆಪ್ಟೆಂಬರ್ 2000 ರಲ್ಲಿ ಅಧ್ಯಕ್ಷರಾದರು. ಇವರ ಪತ್ನಿ ನವಾಜ್ ಮೋದಿ ಸಿಂಘಾನಿಯಾ ಕೂಡ ರೇಮಂಡ್‌ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *