ಕಾಂತಾರ ಟೀಸರ್ ನೋಡಿ ‘ವ್ಹಾವ್’ ಎಂದು ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ ಗೂಗಲ್ – “ಕಾಂತಾರ” ಆನ್ ಲೈನ್ ಕ್ರೇಝ್ ಹೇಗಿದೆ ಗೊತ್ತಾ?

ಕಾಂತಾರ ಟೀಸರ್ ನೋಡಿ ‘ವ್ಹಾವ್’ ಎಂದು ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ ಗೂಗಲ್ – “ಕಾಂತಾರ” ಆನ್ ಲೈನ್ ಕ್ರೇಝ್ ಹೇಗಿದೆ ಗೊತ್ತಾ?

ನ್ಯೂಸ್ ಆ್ಯರೋ : ‘ ಕಾಂತಾರ’ ಇವತ್ತು ಎಲ್ಲಾ ಮನೆ- ಮನಗಳಲ್ಲಿ ಮಾರ್ದನಿಸುತ್ತಿರುವ ಶಬ್ಧ. ಇದು ಸಿನಿಮಾ ಅಭಿಮಾನಿಗಳ ಹೃದಯವನ್ನು ತಟ್ಟಿ ದಂತಹ ಅದ್ಭುತ ಸಿನಿಮಾ. ಈಗಾಗಲೇ ರಿಲೀಸ್ ಆಗಿರುವ ಕಾಂತಾರ ಫಸ್ಟ್ ಲುಕ್ ಜನರಲ್ಲಿ ಮತ್ತಷ್ಟು ಕುತೂಹಲವನ್ನು ಹೆಚ್ಚು ಮಾಡಿದೆ.

ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ಕಾಂತಾರ 1 ಸಿನಿಮಾದ ಟೀಸರ್ ಬಿಡುಗಡೆಯಾಗಿ ಒಂದು ದಿನದೊಳಗಾಗಿ 13 ಮಿಲಿಯನ್ ವೀಕ್ಷಣೆಯಾಗಿದೆ. ಈಗ ಕಾಂತಾರ 1 ಸಿನಿಮಾದ ಟೀಸರ್ ವೀಕ್ಷಣೆಯ ಬಗ್ಗೆಯೇ ಗೂಗಲ್‌ನಲ್ಲಿ ಅತಿಹೆಚ್ಚು ಹುಡುಕಾಟ ಮಾಡಲಾಗಿದೆ. ಆದ್ದರಿಂದ ಗೂಗಲ್‌ನಿಂದಲೂ ಕಾಂತಾರ ಟೀಸರ್ ವೀಕ್ಷಣೆ ಮಾಡಲಾಗಿದ್ದು, 2024 ಭಾರೀ ರೋಮಾಂಚನಕಾರಿಯಾಗಿದೆ. ಕಾಂತಾರ ಟೀಸರ್ ನೋಡಿ ವಾ..ವ್ ಎಂದು ಹೇಳಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದೆ.

ಕಳೆದೊಂದು ದಿನದಿಂದ ಸಾಮಾಜಿಕ ಜಾಲತಾಣದಲ್ಲಿ ಭಾರತ ಮಾತ್ರವಲ್ಲದೇ ಜಾಗತಿಕ ಮಟ್ಟದಲ್ಲಿ ಕಾಂತಾರ ಚಾಪ್ಟರ್ ಒನ್ (Kantara Chapter-1) ಸಿನಿಮಾದ ಫಸ್ಟ್ ಲುಕ್ ಟೀಸರ್ ಸಖತ್‌ ವೈರಲ್‌ ಆಗಿದ್ದು, ಟ್ರೆಂಡಿಂಗ್ ಸೃಷ್ಟಿಸಿದೆ. ಯಾವುದೇ ಸಾಮಾಜಿಕ ಜಾಲತಾಣವನ್ನು ತೆರೆದರೂ ಅಲ್ಲಿ ಕಾಂತಾರ 1 ಚಿತ್ರದ ಪೋಸ್ಟರ್‌ (Poster) ಅಬ್ಬರವೇ ಎದ್ದು ಕಾಣಿಸುತ್ತಿದೆ. ಯುಟ್ಯೂಟ್‌ನಲ್ಲೂ ಈ ಸಿನಿಮಾದ ಟೀಸರ್ ಹವಾ ಜೋರಾಗಿದ್ದು, ಕೇವಲ 24 ಗಂಟೆಗಲಲ್ಲಿ 13 ಮಿಲಿಯನ್‌ (1.3 ಕೋಟಿಗೂ ಅಧಿಕ) ವೀಕ್ಷಕರ ಸಂಖ್ಯೆಯಾಗಿದೆ.

ಇನ್ನು ಗೂಗಲ್‌ನಲ್ಲಿ ಕಾಂತಾರ 1 ಸಿನಿಮಾ ಬಿಡುಗಡೆ ದಿನಾಂಕವನ್ನು 77 ಲಕ್ಷಕ್ಕೂ ಅಧಿಕ ಜನರು ಹುಡುಕಾಡಿದ್ದಾರೆ. ಇನ್ನು ಕಾಂತಾರ 1 ಸಿನಿಮಾದ ಟೀಸರ್ ವೀಕ್ಷಣೆ ಮಾಡಿದ ಗೂಗಲ್ ‘2024 got more exciting. saw the ಕಾಂತಾರ teaser, and just want to say wooooooaaaah’ (2024 ಹೆಚ್ಚು ರೋಮಾಂಚನಕಾರಿಯಾಗಿದೆ. ಕಾಂತಾರ ಟೀಸರ್ ನೋಡಿದೆ, ಮತ್ತು ಕೇವಲ ವಾ….ವ್ ಎಂದು ಹೇಳಲು ಬಯಸುತ್ತೇನೆ) ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿಕೊಂಡಿದೆ.

ರಿವೀಲ್ ಆಗಿರುವ ಫಸ್ಟ್ ಲುಕ್ ವೀಡಿಯೋದಲ್ಲಿ ಏನಿದೆ..?

ಕಾಂತಾರ ಚಾಪ್ಟರ್ 1 ಫಸ್ಟ್‌ ಲುಕ್ ರಿವೀಲ್ ಆಗಿರುವ ವಿಡಿಯೋದ ಆರಂಭದಲ್ಲಿ ರಿಷಬ್ ಶೆಟ್ಟಿ ಬೆಳಕು ಹಿಡಿದು ಕಾಡಿನೊಳಗೆ ಓಡಿ ಹೋಗುತ್ತಾರೆ. ಆಗ ಇಂಗ್ಲಿಷ್‌ನಲ್ಲಿ “light…..Eveything is visibal in light. But this is just not light. Its a vision. Vision that choses what was, what is and what will be tomorrow..and you see’ ಎಂದು ರಿಷಬ್ ಹೇಳುವುದನ್ನು ಕೇಳಬಹುದು.

ಒಂದು ದಟ್ಟ ಗುಹೆಯಲ್ಲಿ ರುದ್ರಾಕ್ಷಿ ಮಾಲೆ ಧರಿಸಿ ಉಗ್ರ ಅವತಾರದಲ್ಲಿ ನಿಂತಿರುವ ರಿಷಬ್‌ನ ಈ ಫಸ್ಟ್‌ ಲುಕ್‌ನಲ್ಲಿ ನೋಡಬಹುದು. ಮೈ ತುಂಬಾ ರಕ್ತದ ಕಲೆಯನ್ನು ನೋಡಬಹುದು. ಮತ್ತೊಂದು ಅಶ್ಚರ್ಯ ಏನೆಂದರೆ ರಿಷಬ್ ಮುಖ ರಿವೀಲ್ ಆಗುವ ಸಮಯದಲ್ಲಿ ಅವರ ಹಿಂದೆ ಶಿವನ ತ್ರಿಶೂಲ ಕಾಣಿಸುತ್ತದೆ.

ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ, ಬೆಂಗಾಲಿ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗಲಿದೆ. ಕೆರಾಡಿಯ ಆನೆಗುಡ್ಡೆ ದೇವಸ್ಥಾನದಲ್ಲಿ ಮುಹೂರ್ತ ಅದ್ಧೂರಿಯಾಗಿ ನಡೆದಿದೆ. ಈ ಹಿಂದೆ ಸೂಪರ್ ಹಿಟ್ ಆದ ಕಾಂತಾ ಸಿನಿಮಾ ಮುಹೂರ್ತವನ್ನು ಕೂಡ ಇದೇ ಕೆರಾಡಿಯ ಆನೆಗುಡ್ಡ ದೇವಸ್ಥಾನದಲ್ಲಿ ನೆರವೇರಿತ್ತು. ಈಗ ಸಾಮಾಜಿಕ ಜಾಲತಾಣದಲ್ಲಿ ಕಾಂತಾರ 1 ಸಿನಿಮಾದ ಜ್ವರ ಆರಂಭವಾಗಿದೆ ಎಂದೇ ಹೆಳಬಹುದು. ಇನ್ನು ಗೂಗಲ್‌ನಲ್ಲಿ 0.28 ಸೆಕೆಂಡ್‌ಗೆ ಒಬ್ಬರಂತೆ ಕಾಂತಾರ-1 ಸಿನಿಮಾದ ಬಿಡುಗಡೆ ದಿನಾಂಕವನ್ನು ಹುಡುಕುತ್ತಿದ್ದಾರೆ. ಇದರ ಮೂಲಕವೇ ಕಾಂತಾರ ನಮ್ಮ ಮನಸ್ಸನ್ನು ಎಷ್ಟರ ಮಟ್ಟಿಗೆ ಕೆರಳಿಸಿದೆ ಎಂಬುದನ್ನು ಕಾಣಬಹುದಾಗಿದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *