ಚಲಿಸುತ್ತಿದ್ದ ರೈಲಿನಲ್ಲಿಯೇ ಹುಡುಗಿಗೆ ತಾಳಿ ಕಟ್ಟಿದ ಭೂಪ – ವೀಡಿಯೋ ವೈರಲ್..!

ಚಲಿಸುತ್ತಿದ್ದ ರೈಲಿನಲ್ಲಿಯೇ ಹುಡುಗಿಗೆ ತಾಳಿ ಕಟ್ಟಿದ ಭೂಪ – ವೀಡಿಯೋ ವೈರಲ್..!

ನ್ಯೂಸ್ ಆ್ಯರೋ : ಈಗಿನ ಕಾಲದಲ್ಲಿ ಯುವಜನತೆ ಮಾಡುವ ಕಾರುಬಾರು ಅಷ್ಟಿಷ್ಟಲ್ಲ ಬಿಡಿ. ವಯಸ್ಸು 18 ಆಗಿಲ್ಲವಾದರೂ ಮದುವೆ ಹುಚ್ಚಾಟ ಅಂದುಕೊಂಡಿರುತ್ತಾರೆ. ಕೆಲವರಿಗೆ ಜೀವನದ ಮೇಲೆ ಅಷ್ಟೊಂದು ಗಂಭೀರತೆ ಇರೋದೆ ಇಲ್ಲ. ಪ್ರೀತಿಸಿದ ಮಾತ್ರಕ್ಕೆ ಹೇಗೋಗೋ ಮದುವೆಯಾಗಲು ಬಯಸಿ ಮದುವೆಯಾದ ಮೇಲೆ ನರಕ ಅನುಭವಿಸುತ್ತಾರೆ. ಮದುವೆಗೆ ಯಾವತ್ತೂ ಆತುರ ಪಡಬಾರದು. ಅದರ ಸಂದರ್ಭ ಬಂದಾಗ ದೇವರು ಆಶೀರ್ವದಿಸಿದಾಗ ಆಗಿಯೇ ಆಗುತ್ತದೆ ಎಂಬುದು ಈಗಿನ ಬುದ್ಧಿಜೀವಿಗಳ ಅಭಿಪ್ರಾಯ.

ಕೆಲವರಿಗೆ ಮದುವೆ ಅಂದ್ರೆನೇ ಒಂದು ಕನಸಾಗಿರುತ್ತದೆ. ಹಾಗೆ ಆಗ್ಬೇಕು, ಹೀಗೆ ಆಗಬೇಕು. ಎಲ್ಲಿ ಆಗ್ಬೇಕು ಅನ್ನೋದು ಪ್ಲಾನಿಂಗ್ ಇರುತ್ತೆ.‌ ಆದರೆ ಇಲ್ಲೊಂದು ಜೋಡಿ ಮದುವೆಯಾಗಿರೋದು ಎಲ್ಲಿ ಅಂತೀರಾ ಇಲ್ಲಿ ನೋಡಿ..

ಪ್ರಸ್ತುತ, ಅಂತಹ ಒಂದು ಮದುವೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಚರ್ಚೆಗೆ ಗ್ರಾಸವಾಯಿದೆ, ಇದರಲ್ಲಿ ಯುವ ಜೋಡಿಯೊಂದು ಚಲಿಸುತ್ತಿರುವ ರೈಲಿನಲ್ಲಿ ವಿವಾಹವಾಗುತ್ತಿರುವುದನ್ನು ನೀವು ನೋಡಬಹುದು. ಈ ಸಂದರ್ಭದಲ್ಲಿ ಅವರನ್ನು ನೋಡಲು ರೈಲಿನಲ್ಲಿ ಭಾರಿ ಜನಸಮೂಹವೇ ನೆರೆದಿದೆ. ಚಲಿಸುತ್ತಿರುವ ರೈಲಿನಲ್ಲಿಯೇ ಯುವ ಜೋಡಿಯೊಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ.

ಸಿಂಧೂರ ಹಚ್ಚುವುದರಿಂದ ಹಿಡಿದು ಮಂಗಳಸೂತ್ರ ಮತ್ತು ಮಾಲೆ ಹಾಕುವವರೆಗೆ ಈ ದಂಪತಿಗಳು ರೈಲಿನಲ್ಲಿಯೇ ಸಂಪೂರ್ಣ ವಿವಾಹ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದಾರೆ, ಆದರೆ ಸಪ್ತಪದಿ ತುಳಿಯುವುದು ಅವರಿಂದ ಸಾಧ್ಯವಾಗಿಲ್ಲ.

ವೀಡಿಯೋದಲ್ಲಿ ಏನಿದೆ..?

ಹುಡುಗಿಯ ಹಣೆಗೆ ಚಲಿಸುವ ರೈಲಿನಲ್ಲಿ ಹುಡುಗ ಹೇಗೆ ಸಿಂಧೂರವನ್ನು ತುಂಬಿದ್ದಾನೆ ಎಂಬುದನ್ನು ನೀವು ವೀಡಿಯೊದಲ್ಲಿ ನೋಡಬಹುದು. ಇದಾದ ನಂತರ ಹುಡುಗಿ ರೈಲಿನಲ್ಲಿದ್ದ ಜನರ ಮುಂದೆ ಆತನನ್ನು ತಬ್ಬಿಕೊಳ್ಳುತ್ತಾಳೆ. ನಂತರ ಹುಡುಗನು ಅವಳ ಕೊರಳಿಗೆ ಮಂಗಳಸೂತ್ರವನ್ನು ಹಾಕುತ್ತಾನೆ ಮತ್ತು ನಂತರ ಇಬ್ಬರೂ ಸಹ ಪರಸ್ಪರರ ಕೊರಳಿಗೆ ಹಾರವನ್ನು ಹಾಕುತ್ತಾರೆ.

ಇದನ್ನು ಮಾಡಿದ ನಂತರ, ಹುಡುಗಿ ಮತ್ತೊಮ್ಮೆ ಅವನನ್ನು ತಬ್ಬಿಕೊಳ್ಳುತ್ತಾಳೆ ಮತ್ತು ಅವನ ಪಾದಗಳನ್ನು ಸ್ಪರ್ಶಿಸುವುದನ್ನು ಸಹ ಕಾಣಬಹುದು. ರೈಲಿನಲ್ಲಿದ್ದ ಹಲವರು ಈ ದೃಶ್ಯವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಸನ್ಸೋಲ್‌ನಿಂದ ಜಸಿದಿಹ್ ಮಾರ್ಗದ ನಡುವೆ ಈ ಘಟನೆ ನಡೆದಿದ್ದು, ಸ್ಥಳೀಯ ರೈಲಿನಲ್ಲಿ ಎಲ್ಲರ ಸಮ್ಮುಖದಲ್ಲಿ ದಂಪತಿಗಳು ವಿವಾಹವಾದರು ಎಂದು ಹೇಳಲಾಗುತ್ತಿದೆ.

ಈ ವಿಡಿಯೋ ಪಡೆದ ವೀಕ್ಷಣೆ ಎಷ್ಟು ಗೊತ್ತಾ..?

ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಇನ್ಸ್ಟಾಗ್ರಾಮ್ ನಲ್ಲಿ max_sudama_1999 ಹೆಸರಿನ ಐಡಿ ಮೂಲಕ ಹಂಚಿಕೊಳ್ಳಲಾಗಿದೆ ಮತ್ತು ‘ಚಲಿಸುತ್ತಿರುವ ರೈಲಿನಲ್ಲಿ ವಿವಾಹ ವಾಹ್ ವಾ ಎಂತಹ ಅದ್ಭುತ’ ಎಂದು ಶೀರ್ಷಿಕೆಯನ್ನು ನೀಡಲಾಗಿದೆ. ಈ ವಿಡಿಯೋವನ್ನು ಇದುವರೆಗೆ 1 ಲಕ್ಷದ 48 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದ್ದು, 3 ಸಾವಿರಕ್ಕೂ ಹೆಚ್ಚು ಮಂದಿ ವಿಡಿಯೋವನ್ನು ಲೈಕ್ ಮಾಡಿದ್ದಾರೆ.

ವೀಡಿಯೋ ನೋಡಿದ ನೆಟ್ಟಿಗರ ಅಭಿಪ್ರಾಯವೇನು..?

ವೀಡಿಯೊವನ್ನು ನೋಡಿದ ನಂತರ, ಬಳಕೆದಾರರು ವಿವಿಧ ರೀತಿಯ ಪ್ರತಿಕ್ರಿಯೆಗಳನ್ನು ಸಹ ನೀಡಿದ್ದಾರೆ. ‘ಇದನ್ನೆಲ್ಲ ಮಾಡಿಸುವಲ್ಲಿ ನಮ್ಮ ಭಾರತದ ಸಾರ್ವಜನಿಕರೇ ಮುಂಚೂಣಿಯಲ್ಲಿರುತ್ತಾರೆ’ ಎಂದು ಯಾರೋ ಬರೆದುಕೊಂಡಿದ್ದರೆ, ‘ಇನ್ನೂ ಪರಸ್ಪರರ ಕೈ ಎಂದಿಗೂ ಬಿಡಬೇಡಿ’ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.

ಅಂತೆಯೇ, ಕಾಮೆಂಟ್ ಮಾಡುವಾಗ, ಮೂರನೇ ಬಳಕೆದಾರರು ಈ ಮದುವೆಯನ್ನು ‘ಇದು ಪ್ರೇಮ ವಿವಾಹವಲ್ಲ ಬದಲಿಗೆ ‘ರೈಲು ವಿವಾಹ’ ಎಂದು ಕರೆದಿದ್ದಾರೆ, ಇನ್ನೊಬ್ಬ ಬಳಕೆದಾರರು ‘ಇದು ಭಾರತದಲ್ಲಿ ಮಾತ್ರ ನಡೆಯುತ್ತದೆ’ ಎಂದು ಬರೆದುಕೊಂಡಿದ್ದಾರೆ.

ಹುಚ್ಚಾಟ ಅನ್ನೋದು ಇದಕ್ಕೆ ನೋಡಿ. ಮಕ್ಕಳ ಈ ಬಗೆಯ ಮಂಕುಬುದ್ದಿಗೆ ಹೆತ್ತವರು ನರಕ ಅನುಭವಿಸಬೇಕು‌. ಇಂತಹ ಸಾಹಸಕ್ಕೆ ಯಾವತ್ತೂ ಮಕ್ಕಳು ಇಳಿಯಬಾರದು.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *