ಇದೆಂಥಾ ವಿಚಿತ್ರ..! ಧರಾಶಾಹಿಯಾಗಿದ್ದ 2000ವರ್ಷದ ಹುಣಸೆಮರ – ಚಿಕಿತ್ಸೆ ಬಳಿಕ ಮರುಜೀವ…!

ಇದೆಂಥಾ ವಿಚಿತ್ರ..! ಧರಾಶಾಹಿಯಾಗಿದ್ದ 2000ವರ್ಷದ ಹುಣಸೆಮರ – ಚಿಕಿತ್ಸೆ ಬಳಿಕ ಮರುಜೀವ…!

ನ್ಯೂಸ್ ಆ್ಯರೋ : ಪ್ರಕೃತಿಯೇ ಹಾಗೆ.. ವಿಶೇಷವಾದ ಶಕ್ತಿಯನ್ನು ಮೈತುಂಬಿಕೊಂಡಿರುವಾಕೆ. ಅದಕ್ಕೆ ಆಕೆಗೆ ಹೆಣ್ಣೆಂಬ ಅಗ್ರಸ್ಥಾನ. ‘ಹಸಿರೇ ಉಸಿರು’ ಎಂಬ ಗಾದೆ ಮಾತು ಸುಳ್ಳಲ್ಲ. ಆಮ್ಲಜನಕದ ಮೂಲವೇ ಹಸಿರಲ್ಲವೇ…ಅದೇ ಇಲ್ಲವಾದಲ್ಲಿ ಉಸಿರಾಡಲು ಹೇಗೆ ಸಾಧ್ಯ ಹೇಳಿ…

ಅನಾರೋಗ್ಯಕ್ಕೆ ತುತ್ತಾದರೆ ಮನುಷ್ಯ, ಪ್ರಾಣಿಗಳಿಗೆ ಚಿಕಿತ್ಸೆ ನೀಡಿ ಗುಣಪಡಿಸಬಹುದು. ಆದರೆ ನೆಲಕ್ಕುರುಳಿದ 2,000 ವರ್ಷ ಹಳೆಯ ಮರಕ್ಕೆ ಚಿಕಿತ್ಸೆ ನೀಡಿ ಮತ್ತೆ ಮೊದಲಿದ್ದ ಜಾಗದಲ್ಲಿ ಈಗ ನೆಡಲಾಗಿರುವ ಅಪರೂಪದ ಘಟನೆ ನಡೆದಿದೆ.

ಏನಿದು ವಿಚಿತ್ರ…?

ಬರೋಬ್ಬರಿ 2,000 ವರ್ಷದ ಹುಣಸೆ ಮರ ಧರೆಗುರುಳಿ, 4 ತಿಂಗಳ ನಂತರ ಮತ್ತೆ ಚಿಗುರಿದೆ. ಇದು ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದ ಕಲ್ಮಠದ ಆವರಣದಲ್ಲಿ ಕಂಡುಬರೋ ದೊಡ್ಡಹುಣಸೆ.

ಈ ಮರ 2,000 ವರ್ಷದಷ್ಟು ಹಳೆಯದು. ಇಲ್ಲೇ ಇರುವ ಅತ್ಯಂತ ಹಳೆಯ 3 ಮರಗಳ ಪೈಕಿ ಈ ಮರ ಜುಲೈ 7 ರಂದು ಮಳೆ-ಗಾಳಿ ಹಾಗೂ ಫಂಗಸ್ ಕಾಣಿಸಿಕೊಂಡ ಹಿನ್ನೆಲೆ ಬೇರು ಸಮೇತ ನೆಲಕ್ಕುರುಳಿತ್ತು. ಘೋರಕನಾಥ ತಪಸ್ವಿಗಳು ಈ 3 ಮರಗಳನ್ನು ನೆಟ್ಟಿದ್ದರು ಎಂದು ಹೇಳಲಾಗುತ್ತದೆ. 18 ಮೀ. ಎತ್ತರ, 12 ಮೀ. ಅಗಲವಾಗಿದ್ದ ಈ ಮರ ಬೀಳುತ್ತಿದ್ದಂತೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದರು.

ಸತತ 1 ವಾರ ಕಾರ್ಯಾಚರಣೆ ನಡೆಸಿ ದೊಡ್ಡಹುಣಸೆ ಮರವನ್ನು ಮರುಸ್ಥಾಪನೆ ಮಾಡಲಾಗಿತ್ತು. ಈಗ 4 ತಿಂಗಳ ನಂತರ ಮರಕ್ಕೆ ಮರುಜನ್ಮ ಸಿಕ್ಕಿದೆ. ದೊಡ್ಡಹುಣಸೆ ಮರವು ಮೊದಲಿನಂತೆ ಚಿಗುರೊಡೆಯುತ್ತಿದೆ. ಸಣ್ಣದಾಗಿ ರಂಬೆ, ಕೊಂಬೆಗಳು ಚಿಗುರುತ್ತಿವೆ. ಇದರಿಂದ ಕಲ್ಮಠ ಶ್ರೀಗಳಾದ ಚನ್ನಬಸವ ಸ್ವಾಮೀಜಿ ಖಷಿಯಾಗಿದ್ದಾರೆ. ಮರದ ಬುಡದಲ್ಲಿ ಬೇರುಗಳಲ್ಲಿ ಫಂಗಸ್ ಆಗಿ ಸಂಪೂರ್ಣವಾಗಿ ಕೊಳೆತ ಪರಿಣಾಮ ಮರ ಬಿದ್ದಿತ್ತು.

ಮರದ ಬುಡದಲ್ಲಿ ಕೊಳೆತ ಭಾಗವನ್ನು ಸ್ವಚ್ಛ ಮಾಡಿ, ರಾಸಾಯನಿಕಗಳನ್ನು ಸಿಂಪಡಣೆ ಮಾಡಲಾಗಿತ್ತು. ಭೂಮಿಯಲ್ಲಿ ತೋಡಿರುವ ಗುಂಡಿಯಲ್ಲಿಯೂ ರಾಸಾಯನಿಕಗಳನ್ನು ಹಾಕಲಾಗಿದೆ. ಮರದ ಟೊಂಗೆಗಳನ್ನು ಕತ್ತರಿಸಿ, ಸಗಣಿಯನ್ನು ಸಿಂಪಡಣೆ ಮಾಡಿ ಟ್ರೀಟ್‌ಮೆಂಟ್ ಮಾಡಲಾಗಿತ್ತು. ಇದೆಲ್ಲದರ ಬಳಿಕ ಬೃಹತ್ ಗಾತ್ರದ ಕ್ರೇನ್ ಹಾಗೂ ಜೆಸಿಬಿಗಳನ್ನು ಬಳಸಿಕೊಂಡು ಮರವನ್ನು ಅದೇ ಸ್ಥಳದಲ್ಲಿ ನೆಡಲಾಗಿತ್ತು.

2,000 ವರ್ಷ ಐತಿಹಾಸಿಕ ಹಿನ್ನೆಲೆಯುಳ್ಳ ಮರವನ್ನು ಮರುಸ್ಥಾಪನೆ ಮಾಡಲಾಗಿತ್ತು. ಈಗ ದೊಡ್ಡಹುಣಸೆ ಮರ ಚಿಗುರಿಕೊಂಡಿದೆ. ಈ ಮರವನ್ನು ನೋಡಲು ಸುತ್ತಮುತ್ತಲಿನ ಪ್ರವಾಸಿಗರು ಸ್ಥಳಕ್ಕೆ ಆಗಮಿಸುತ್ತಿದ್ದಾರೆ.

ಏನದು ವಿಚಿತ್ರ ಅಲ್ವಾ..? ಅದಕ್ಕೆ ಹೇಳೋದು ಪ್ರಕೃತಿಯ ಸಾಮರ್ಥ್ಯದ ಎದುರು ಮಾನವನ ಆಟ ಏನೂ ನಡೆಯೋಲ್ಲ. ಧರಾಶಾಹಿಯಾಗಿದ್ದ ಮರ ಮತ್ತೆ ಚಿಗುರಿರುವುದನ್ನು ನೋಡಲು ಒಂದು ತೆರನಾದ ಖುಷಿ ಅಲ್ಲವೇ..? ಚಿಗುರು ಹೆಮ್ಮರವಾಗಿ ಬೆಳೆದು ನಿಂತು ನೆರಳಾಗಲಿ….!

Related post

ದಿನ‌ ಭವಿಷ್ಯ 08-05-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 08-05-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದ ಚೇತರಿಸಿಕೊಳ್ಳುತ್ತೀರಿ. ಆದರೆ ಸ್ವಾರ್ಥಿಗಳಾದ, ಮುಂಗೋಪಿ ವ್ಯಕ್ತಿಯ ಸಹವಾಸವನ್ನು ತಪ್ಪಿಸಿ – ಅವರು ನಿಮ್ಮ ಮೇಲೆ ಒತ್ತಡ ಹಾಕಬಹುದು-ಇದು ಸಮಸ್ಯೆಯನ್ನು ಮತ್ತಷ್ಟು ಉಲ್ಬಣಗೊಳಿಸಬಹುದು. ಇಂವು ನಿಮಗೆ…
ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…

Leave a Reply

Your email address will not be published. Required fields are marked *