14 ವರ್ಷದಿಂದ ಈಕೆ ಹಾಲು ಮತ್ತು ಬೆಲ್ಲ ಬಿಟ್ಟು ಮತ್ತೇನನ್ನೂ ಸೇವಿಸಿಲ್ಲ! – ಅಚ್ಚರಿಯ ಜೀವನ ನಡೆಸುತ್ತಿದ್ದಾಳೆ ಕರ್ನಾಟಕದ ಈ ಬಾಲಕಿ! ಯಾರೀಕೆ?

14 ವರ್ಷದಿಂದ ಈಕೆ ಹಾಲು ಮತ್ತು ಬೆಲ್ಲ ಬಿಟ್ಟು ಮತ್ತೇನನ್ನೂ ಸೇವಿಸಿಲ್ಲ! – ಅಚ್ಚರಿಯ ಜೀವನ ನಡೆಸುತ್ತಿದ್ದಾಳೆ ಕರ್ನಾಟಕದ ಈ ಬಾಲಕಿ! ಯಾರೀಕೆ?

ನ್ಯೂಸ್ ಆ್ಯರೋ : ಮನುಷ್ಯ ಆರೋಗ್ಯವಾಗಿರಲು ಆಹಾರ ಬಲು ಮುಖ್ಯ. ಮೂರು ಹೊತ್ತು ಚೆನ್ನಾಗಿ ಆಹಾರ ಸೇವಿಸಿದರೆ ಮಾತ್ರ ಆರೋಗ್ಯವೂ ಚೆನ್ನಾಗಿರುತ್ತದೆ. ಕೆಲವೊಬ್ಬರಿಗೆ ಒಂದು ಹೊತ್ತು ಊಟ ಬಿಟ್ಟರೂ ಆರೋಗ್ಯ ಹಾಳಾಗುತ್ತದೆ. ಅಂತಹದ್ದರಲ್ಲಿ ಇಲ್ಲೊಬ್ಬ ಬಾಲಕಿ ಬರೋಬ್ಬರಿ 14 ವರ್ಷದಿಂದ ಬೆಲ್ಲ ಮತ್ತು ಹಾಲನ್ನು ಬಿಟ್ಟು ಮತ್ತೇನನ್ನೂ ಸೇವಿಸಿಲ್ಲ. ಹಾಗಂತ ಈ ಬಾಲಕಿಯ ಆರೋಗ್ಯವೇನು ಹದಗೆಟ್ಟಿಲ್ಲ. ಹಾಗಿದ್ದರೆ ಇಂತಹದ್ದೊಂದು ಅಚ್ಚರಿಯ ಜೀವನ ನಡೆಸುತ್ತಿರುವ ಬಾಲಕಿ ಯಾರು? ಆಕೆಯ ಹಿನ್ನಲೆಯೇನು ಎಂಬುದನ್ನು ನೋಡೋಣ.

ಯಾರು ಈ ಬಾಲಕಿ?

ಯಾದಗಿರಿ ಜಿಲ್ಲೆಯ ಸುರಪುರ ಪಟ್ಟಣದ ರಂಗಂಪೇಟ ನಿವಾಸಿ ನಾಗಪ್ಪ-ಅಡಿವೆಮ್ಮ ಎಂಬ ದಂಪತಿಯ 2ನೇ ಮಗಳಾದ ರೇಣುಕಮ್ಮ ಈ ಅಚ್ಚರಿಯ ಜೀವನ ನಡೆಸುತ್ತಿರುವ ಬಾಲಕಿ.‌ ಈಕೆ ಕೇವಲ ಬೆಲ್ಲ ಹಾಗೂ ಹಾಲು ಸೇವಿಸಿ ಬರೋಬ್ಬರಿ 14 ವರ್ಷದಿಂದ ಬದುಕಿದ್ದಾಳೆ.

ಜೊತೆಗೆ ದೈಹಿಕ ಮತ್ತು‌ಮಾನಸಿಕವಾಗಿಯೂ ಆರೋಗ್ಯವಾಗಿದ್ದಾಳೆ. 14 ವರ್ಷ ವಯಸ್ಸಿನ‌ ಈಕೆ ರಂಗಂಪೇಟೆಯ ಪ್ರಿಯದರ್ಶಿನಿ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡ್ತಿದ್ದಾಳೆ.

ಈಕೆ ಯಾಕೆ ಊಟ ಮಾಡುವುದಿಲ್ಲ?

ರೇಣುಕಮ್ಮ ತಮ್ಮ ಮನೆಯಲ್ಲಿ ತಾನೇ ಅಡುಗೆ ತಯಾರು ಮಾಡ್ತಾಳೆ. ಆದರೆ ತಯಾರಿಸಿದ ಯಾವುದೇ ಅಡುಗೆಯನ್ನು ಊಟ ಮಾತ್ರ ಮಾಡುವುದಿಲ್ಲ. ಮನೆಯಲ್ಲಿ ಅವರ ತಂದೆ-ತಾಯಿ, ಸಹೋದರರು ಹಾಗೂ ತಮ್ಮ ಕ್ಲಾಸಿನ ಸಹಪಾಠಿಗಳು ಎಷ್ಟೇ ಒತ್ತಾಯ ಮಾಡಿದ್ರು ಊಟ ಮಾತ್ರ ಮಾಡೋದಿಲ್ಲ.

ಯಾಕಂದ್ರೆ ಈ ಬಾಲಕಿ ರೇಣುಕಮ್ಮನಿಗೆ ಊಟ ಮಾಡಿದ್ರೆ ವಾಂತಿ ಆಗುತ್ತಂತೆ. ಇನ್ನು ಬಾಲಕಿ ಸೇವಿಸುವ ಆಹಾರ ಪದ್ಧತಿ ಬಗ್ಗೆಯೂ ವೈದ್ಯರು ತಪಾಸಣೆ ಮಾಡಿದ್ದು, ಈಕೆಯ ಆಹಾರ ಪದ್ದತಿಯಲ್ಲಿ ವೈದ್ಯ ಲೋಕಕ್ಕೆ ಸವಾಲೆಸೆದಂತಿದೆ.

ಕಂಗಾಲಾದ ಹೆತ್ತವರು!

ಬಾಲಕಿ ರೇಣುಕಮ್ಮ ಅಚ್ಚರಿಯ ಜೀವನ ಹೆತ್ತವರಿಗೆ ನುಂಗಲಾಗದ ತುತ್ತಾಗಿದೆ. ಈಕೆ ಮಗುವಾಗಿದ್ದಾಗಲೂ ಊಟ ಮಾಡುತ್ತಿರಲ್ಲಿಲ್ಲವಂತೆ. ಆಗ ಕೇವಲ ಹಾಲನ್ನು ಕುಡಿಸುತ್ತಿದ್ದರು. ಬಳಿಕ ತುಸು ದೊಡ್ಡವಳಾದ ಮೇಲೆ ಈಕೆ ಊಟ ಮುಟ್ಟಲಿಲ್ಲ.ಆಗ ಹಸಿವು ತಣಿಸಲು ಹೆತ್ತವರು ಬೆಲ್ಲ ಮತ್ತು ಹಾಲು‌ ನೀಡಿದ್ದಾರೆ. ಅಂದಿನಿಂದ ಹಿಡಿದು ಇಂದಿನವರೆಗೂ ರೇಣುಕಮ್ಮ ಹಾಲು, ಬೆಲ್ಲ ಬಿಟ್ಟು ಮತ್ಯಾವ ಆಹಾರವನ್ನೂ ತಿಂದಿಲ್ಲ. ಈಕೆ ಯಾಕೆ ಹೀಗೆ? ಎಂದು ವೈದ್ಯರಿಗೂ ಅರ್ಥವಾಗುತ್ತಿಲ್ಲ. ಹೆತ್ತವರಂತೂ ಮಗಳನ್ನು ಕಂಡು ಕಂಗಾಲಾಗಿದ್ದಾರೆ. ಸದ್ಯ, ಈ ವಿಚಾರ ಎಲ್ಲೆಡೆ ವೈರಲ್ ಆಗಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *