ಜಗಳ ಆಡುವಾಗ ಕಾರ್ತಿಕ್ ತುಂಬಾ ಗಲೀಜಾಗಿ ಕಾಣ್ತಾರೆ, ಇಂಥಾ ಬಾಯ್ ಫ್ರೆಂಡ್ ಬೇಡ್ವೇ ಬೇಡ – ದೊಡ್ಮನೆಯಲ್ಲಿ ಸಂಗೀತಾ ಶೃಂಗೇರಿ ಹೊಸ ವರಾತ..!!

ಜಗಳ ಆಡುವಾಗ ಕಾರ್ತಿಕ್ ತುಂಬಾ ಗಲೀಜಾಗಿ ಕಾಣ್ತಾರೆ, ಇಂಥಾ ಬಾಯ್ ಫ್ರೆಂಡ್ ಬೇಡ್ವೇ ಬೇಡ – ದೊಡ್ಮನೆಯಲ್ಲಿ ಸಂಗೀತಾ ಶೃಂಗೇರಿ ಹೊಸ ವರಾತ..!!

ನ್ಯೂಸ್ ಆ್ಯರೋ : ಕನ್ನಡ ಬಿಗ್ಬಾಸ್ ಸೀಸನ್ 10 ರಿಯಾಲಿಟಿ ಶೋ ಇವತ್ತು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಪ್ರತೀ ದಿನ ಒಂದಲ್ಲ ಒಂದು ವಿಷಯಕ್ಕೆ ಗಲಾಟೆ, ತಳ್ಳಾಟ, ಬೈಗುಳ ಇದರಿಂದಲೇ ಸೆಲೆಬ್ರಿಟಿಗಳು ವೀಕ್ಷಕರನ್ನು ಮನರಂಜಿಸುತ್ತಿದ್ದಾರೆ. ಈ ಶೋದಲ್ಲಿ ನಿಮಗೆಲ್ಲರಿಗೂ ತಿಳಿದಿರುವಂತೆ ಕಾರ್ತಿಕ್, ಸಂಗೀತಾ, ತನಿಷಾ ಒಂದೊಳ್ಳೆ ಫ್ರೆಂಡ್ಸ್ ಆಗಿದ್ದರು. ಕಾಲ ಕ್ರಮೇಣ ಸಂಗೀತಾ ಕೆಲವು ವಿಚಾರಗಳಿಗೆ ಬದಲಾದರು. ಈಗಂತೂ ಇಬ್ಬರು ಶುದ್ಧ ವೈರಿಗಳ ರೀತಿಯಲ್ಲಿ ಪ್ರತಿದಿನ ಕಿತ್ತಾಡುತ್ತಿದ್ದಾರೆ.

ಈಗ ಮತ್ತೊಮ್ಮೆ ಸಂಗೀತಾ ಕಾರ್ತಿಕ್ ಅವರ ವಿಚಾರಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಸದ್ಯ ಬಿಗ್ಬಾಸ್ ನಲ್ಲಿ ಸಂಗೀತಾದ್ದೇ ಹವಾ. ಪಕ್ಕಾ ವಿಲನ್ ಥರ ಆಕೆಯನ್ನು ನೆಟ್ಟಿಗರು ನೋಡ್ತಿದ್ದಾರೆ. ಜಗತ್ತನ್ನೇ ನೆಗೆಟಿವ್ ಕಣ್ಣಿಂದ ನೋಡೋ ಈಕೆಗೆ ಕಾಣೋದೆಲ್ಲ ನೆಗೆಟಿವ್ ಆಗೇ ಕಾಣುತ್ತೆ. ತನ್ನನ್ನು ಬಚಾವ್ ಮಾಡಿಕೊಳ್ಳಲು ಯಾವುದಕ್ಕೂ ರೆಡಿ ಅಂತಿರೋ ಆಕೆಯ ಮನಸ್ಥಿತಿ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ನಡೆಯುತ್ತಿದೆ.

ಅದರಲ್ಲೂ ಸಂಗೀತಾ ಕಾರ್ತಿಕ್‌ಗೆ ತಲೆ ಬೋಳಿಸಿಕೊಳ್ಳೋ ಟಾಸ್ಕ್ ಕೊಟ್ಟ ಮೇಲಂತೂ ಜನ ಈಕೆಯ ಬಗ್ಗೆ ಬೇಸತ್ತು ಹೋಗಿ ಈಕೆಯ ಪೇಜ್ ಫಾಲೋ ಮಾಡೋದನ್ನೇ ಬಿಟ್ಟು ಬಿಡ್ತಿದ್ದಾರೆ. ಢಂ ಅಂತ ಈಕೆಯ ಫ್ಯಾನ್ ಫಾಲೋವಿಂಗ್ ಕುಸಿದಿದೆ. ಸುಮಾರು ಹನ್ನೊಂದು ಸಾವಿರ ಜನ ಫ್ಯಾನ್ಸ್ ಫಾಲೋ ಮಾಡೋದನ್ನು ಬಿಟ್ಟಿದ್ದಾರೆ.

ಎಷ್ಟೋ ಸೆಲೆಬ್ರಿಟಿಗಳಿಗೆ ಬಿಗ್‌ಬಾಸ್ ಗೆ ಹೋಗಿ ಬಂದಮೇಲೆ ಆಫರ್, ಜನಪ್ರಿಯತೆ ಹೆಚ್ಚಾಗಿದೆ. ಆದರೆ ಸಂಗೀತಾಗೆ ಮಾತ್ರ ಇದು ಉಲ್ಟಾ ಹೊಡೀತಿದೆ. ಸದ್ಯ ಕಾರ್ತಿಕ್‌ನಂಥಾ ಬಾಯ್ ಫ್ರೆಂಡ್‌ ನಂಗೆ ಬೇಡ್ವೇ ಬೇಡ ಅನ್ನೋ ಸಂಗೀತಾ ಯಾರ್ಯಾರು ಹೇಗ್ಹೇಗೆ ಅನ್ನೋದನ್ನೂ ಜಡ್ಜ್ ಮಾಡಿಬಿಟ್ಟಿದ್ದಾರೆ.

ಕಾರ್ತಿಕ್ ಬಗ್ಗೆ ಸಂಗೀತಾ ಏನ್ ಹೇಳ್ತಾರೆ..?

ಇಷ್ಟು ದಿನ ಕಾರ್ತಿಕ್‌ ಜೊತೆಗೆ ಆತ್ಮೀಯವಾಗಿದ್ದ ಸಂಗೀತಾ ಇದೀಗ ಕಾರ್ತಿಕ್ ಬಗ್ಗೆಯೇ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಜಗಳದ ವೇಳೆ ಕಾರ್ತಿಕ್ ಅಗ್ಲಿಯಾಗಿ ಕಾಣ್ತಾರೆ. ಅದೊಂದು ಫೇಸ್‌ನಿಂದಾಗಿ ಕಾರ್ತಿಕ್‌ನಂಥ ಬಾಯ್‌ಫ್ರೆಂಡ್ ಇರುವ ಬಗ್ಗೆ ನಾನು ಯಾವತ್ತೂ ಯೋಚಿಸುವುದಿಲ್ಲ ಅನ್ನೋ ಸಂಗೀತ ಮಾತು ವೈರಲ್ ಆಗಿದೆ.

ನನಗೆ ತನಿಷಾ ತುಂಬಾ ಇರಿಟೇಟಿಂಗ್ ಅನ್ಸುತ್ತೆ. ಅವರು ಬೇರೆಯವರ ಜೊತೆ ಜಗಳ ಆಡುವಾಗಲೂ ನನಗೆ ಅಗ್ಲಿ ಅನ್ಸುತ್ತೆ. ನಮ್ರತಾ, ನೀವು ಮತ್ತು ತನಿಷಾ ಅವತ್ತು ಜಗಳ ಆಡಿದಾಗ ನಂಗೆ ತನಿಷಾ ಅಗ್ಲಿ ಅನ್ಸಿತ್ತು. ಅದು ಬಿಟ್ಟು ಬೇರೆ ಯಾವುದೂ ನಿಮ್ಮದು ಅಗ್ಲಿ ಅನಿಸಲಿಲ್ಲ.’ ಎಂದು ಸಂಗೀತಾ ನಮ್ರತಾ ಬಳಿ ಹೇಳಿದ್ದಾರೆ.

‘ನಂಗೆ ಕಾರ್ತಿಕ್‌ದು ತೀರಾ ಅಗ್ಲಿ ಅನ್ಸುತ್ತೆ. ಮೋರ್ ದ್ಯಾನ್ ತನಿಷಾ. ದಿಸ್ ಈಸ್‌ ವೆರಿ ಸ್ಕೇರಿ. ಕಾರ್ತಿಕ್‌ಗೇ ನೇರವಾಗಿ ಹೇಳಿದ್ದೀನಿ, ಜಗಳ ಮಾಡುವಾಗ ನೀವು ತುಂಬಾ ಅಗ್ಲಿ ಕಾಣಿಸ್ತೀರಾ ಅಂತ. ಅಂದ್ರೆ ಭವಿಷ್ಯದಲ್ಲಿ ಯಾವಾಗ್ಲಾದರೂ ಅಂದ್ರೆ 100 ವರ್ಷ ಆದ್ಮೇಲೂ ಅವರು ನನಗೆ ಬಾಯ್‌ಫ್ರೆಂಡ್ ಆಗೋದಾದರೂ ಇದೊಂದು ಫೇಸ್‌ನ ನೋಡಿಕೊಂಡು ನಾನು ಅವರಿಂದ ದೂರ ಹೋಗ್ತೀನಿ ಅನ್ಸುತ್ತೆ.

ಇದೊಂದು ಫೇಸ್‌ನಿಂದ I will never even think about having a boyfriend like that ಅಂತ ಅನ್ಸುತ್ತೆ’ ಅನ್ನೋ ಸಂಗೀತಾ ಮಾತಿಗೆ ಸೋಷಿಯಲ್ ಮೀಡಿಯಾದಲ್ಲಿ ಚಿತ್ರ ವಿಚಿತ್ರ ಪ್ರತಿಕ್ರಿಯೆ ಬರುತ್ತಿದೆ.

ಬಿಗ್ಬಾಸ್ ಮುಗಿಯುವ ವೇಳೆಗೆ ಇವರಿಬ್ಬರ ಸಂಬಂಧ ಮತ್ತ್ಯಾವ ತಿರುವನ್ನು ಪಡೆದುಕೊಳ್ಳುತ್ತದೆ ನೋಡಬೇಕಷ್ಟೆ. ಆದರೂ ತುಂಬಾ ಸಲುಗೆಯಿಂದ ಉತ್ತಮ ಗೆಳೆತನದಿಂದ ಇದ್ದ ಈ ಜೋಡಿ ಇದೀಗ ಹಾವು- ಮುಂಗುಸಿಯಂತಾಗಿರೋದು ವಿಪರ್ಯಾಸ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *