ಈ ರೀತಿ ರಸ್ಕ್ ಮಾಡೋದನ್ನು ನೋಡಿದ್ದೀರಾ? – ಈ ವೈರಲ್ ವಿಡಿಯೋ ನೋಡಿದ್ರೆ ನೀವು ಇನ್ನೆಂದೂ ರಸ್ಕ್ ತಿನ್ನೋದಿಲ್ಲ..!

ಈ ರೀತಿ ರಸ್ಕ್ ಮಾಡೋದನ್ನು ನೋಡಿದ್ದೀರಾ? – ಈ ವೈರಲ್ ವಿಡಿಯೋ ನೋಡಿದ್ರೆ ನೀವು ಇನ್ನೆಂದೂ ರಸ್ಕ್ ತಿನ್ನೋದಿಲ್ಲ..!

ನ್ಯೂಸ್ ಆ್ಯರೋ : ಸಾಮಾಜಿಕ ಜಾಲತಾಣ ಅನ್ನುವ ಈ ವಿಚಿತ್ರ ಜಗತ್ತಿನಲ್ಲಿ ದಿನವೊಂದಕ್ಕೆ ಸಾವಿರಾರು ವಿಡಿಯೋಗಳು ಹರಿದಾಡುತ್ತವೆ. ಅವುಗಳಲ್ಲಿ ಕೆಲವೊಂದು ಉಪಯುಕ್ತವಾಗಿರುತ್ತವೆ ಎಂದರೆ ತಪ್ಪಲ್ಲ. ಈ ಹಿಂದೆ ನೀವು ಪ್ರತಿನಿತ್ಯ ತಿನ್ನುವ ರಸ್ತೆ ಬದಿ ಆಹಾರವನ್ನು ಎಷ್ಟು ಕೆಟ್ಟದಾಗಿ ತಯಾರಿಸುತ್ತಾರೆ ಎಂಬುದನ್ನ ಸೋಶಿಯಲ್ ಮೀಡಿಯಾಗಳಲ್ಲಿ ಗಮನಿಸಿರಬಹುದು. ಇದೀಗ ರಸ್ಕ್ ತಯಾರಿಸುವ ವಿಡಿಯೋ ವೈರಲ್ ಆಗುತ್ತಿದ್ದು, ಬಹುಶಃ ಈ ವಿಡಿಯೋ ನೋಡಿದ್ರೆ ಮತ್ತೆಂದೂ ನೀವು ರಸ್ಕ್ ತಿನ್ನಲ್ಲ.

ಅಷ್ಟಕ್ಕೂ ಈ ವಿಡಿಯೋದಲ್ಲಿ ಏನಿದೆ? ರುಚಿರುಚಿಯಾದ ರಸ್ಕ್ ಎಷ್ಟು ಕೆಟ್ಟದಾಗಿ ತಯಾರಿಸುತ್ತಾರೆ? ಎಂಬ ಕುತೂಹಲ ನಿಮ್ಮಲ್ಲಿದ್ರೆ ಈ ವಿಡಿಯೋ ಮತ್ತು ವರದಿಯತ್ತ ಮಿಸ್ ಮಾಡದೆ ಕಣ್ಣಾಡಿಸಿ.

ವಿಡಿಯೋದಲ್ಲಿ ಅಂತಹದ್ದೇನಿದೆ?

ಈ ರಸ್ಕ್ ತಯಾರಿಸುವ ವೈರಲ್ ವಿಡಿಯೋವನ್ನು ಭಾರತೀಯ ರೈಲ್ವೆ ಅಧಿಕಾರಿ ಅನಂತ್ ರೂಪನಗುಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅತ್ಯಂತ ಕೆಟ್ಟದಾಗಿ ರಸ್ಕ್ ಮಾಡುವುದನ್ನು ಕಾಣಬಹುದು. ಯಾವುದೇ ಕೈ ಗವುಸುಗಳನ್ನು ಹಾಕದೆ ಬರಿಗೈಯಲ್ಲಿ ರಸ್ಕ್ ತಯಾರಿಸಲು ಬಳಸುವ ಹಿಟ್ಟನ್ನು ನಾದುತ್ತಿದ್ದು, ಸುತ್ತಮುತ್ತಲಿನ ಪ್ರದೇಶವೂ ಕೂಡ ಗಲೀಜಾಗಿದೆ.

ರಸ್ಕ್ ಮಾಡುವ ಸಂಪೂರ್ಣ ವಿಧಾನ ಇಲ್ಲಿದ್ದು, ಯಾವೊಬ್ಬ ಕೆಲಸಗಾರನೂ ಕೈಗವುಸು ಹಾಕಿಲ್ಲ. ಜೊತೆಗೆ ರಸ್ಕ್ ಮಾಡುತ್ತಲೇ ಸಿಗರೇಟ್ ಸೇರುವುದನ್ನು ಕಾಣಬಹುದು. ಒಂದಿಂಚೂ ಶುಚಿತ್ವಕ್ಕೆ ಇಲ್ಲಿ ಮಹತ್ವ ನೀಡಿಲ್ಲ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ.

ನೆಟ್ಟಿಗರು ಗರಂ!

ಈ ವಿಡಿಯೋ ಸದ್ಯ ವೈರಲ್ ಆಗುತ್ತಿದ್ದು, ನೆಟ್ಟಿಗರು ಗರಂ ಆಗಿದ್ದಾರೆ. ವಿಡಿಯೋ ಹಂಚಿಕೊಂಡಿರುವ ಅನಂತ್ ರೂಪನಗುಡಿ, ‘ಒಂದು ವೇಳೆ ಇದು ನಿಜವೇ ಆಗಿದ್ದರೆ ರಸ್ಕ್ ತಿನ್ನಲು ಭಯವಾಗುತ್ತದೆ’ ಎಂದು ಬರೆದುಕೊಂಡರೆ, ಮತ್ತೋರ್ವ, ‘ಹಿಟ್ಟು ನಾದುವ ಮುನ್ನ ಇವರ ಕೈ ಎಲ್ಲಿತ್ತೋ ಏನೋ’ ಎಂದಿದ್ದಾನೆ.

ಇನ್ನೋರ್ವ, ‘ರೆಸ್ಟೋರೆಂಟ್ ಗಳಲ್ಲಿ ಈ ರೀತಿ ಆಹಾರ ತಯಾರಿಸುವುದನ್ನು ಕಂಡು ನಾನು ಹೊರಗಡೆ ತಿನ್ನುವುದನ್ನೇ ಬಿಟ್ಟಿದ್ದೇನೆ, ಈಗ ಬೇಕರಿ ತಿನಿಸುಗಳನ್ನು ಕೂಡ ತ್ಯಜಿಸಬೇಕೇನೋ’ ಎಂದು ಬರೆದುಕೊಂಡಿದ್ದಾನೆ. ಯಾವುದಕ್ಕೂ ನೀವೊಮ್ಮೆ ಈ ವಿಡಿಯೋ ನೋಡಿ ಇನ್ಮುಂದೆ ರಸ್ಕ್ ತಿನ್ನಬೇಕೋ, ಬೇಡವೋ ಎಂದು ನಿರ್ಧರಿಸಿ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *