ಎರಡು ವರ್ಷಗಳ ಬಳಿಕ ಮುಖವಾಡ ಕಳಚಿದ ನಟಿ ಶಿಲ್ಪಾ ಶೆಟ್ಟಿ ಪತಿ – ಮಾಸ್ಕ್ ಧರಿಸಿದ್ದೇಕೆಂದು ಬಾಯಿಬಿಟ್ಟ ರಾಜ್ ಕುಂದ್ರಾ ಹೇಳಿದ್ದೇನು..?

ಎರಡು ವರ್ಷಗಳ ಬಳಿಕ ಮುಖವಾಡ ಕಳಚಿದ ನಟಿ ಶಿಲ್ಪಾ ಶೆಟ್ಟಿ ಪತಿ – ಮಾಸ್ಕ್ ಧರಿಸಿದ್ದೇಕೆಂದು ಬಾಯಿಬಿಟ್ಟ ರಾಜ್ ಕುಂದ್ರಾ ಹೇಳಿದ್ದೇನು..?

ನ್ಯೂಸ್ ಆ್ಯರೋ : ಕಳೆದ ಎರಡು ವರ್ಷಗಳಿಂದ ಮಾಸ್ಕ್‌ ಮ್ಯಾನ್ ಎಂದೇ ಗುರುತಿಸಿಕೊಂಡಿದ್ದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್‌ ಕುಂದ್ರಾ ಅವರು ಕೊನೆಗೂ ಮಾಸ್ಕ್ ಇಲ್ಲದೆ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡಿದ್ದಾರೆ.

‘UT 69’ ಟ್ರೇಲರ್‌ ರಿಲೀಸ್‌ ಕಾರ್ಯಕ್ರಮ ಬುಧವಾರ ಮುಂಬೈನಲ್ಲಿ ನಡೆದಿದೆ. ಈ ಸಮಯದಲ್ಲಿ ರಾಜ್‌ ಕುಂದ್ರಾ ಅವರು ವೇದಿಕೆ ಮೇಲೆ ತಮ್ಮ ಮುಖವಾಡವನ್ನು ತೆಗೆದಿದ್ದಾರೆ.

ಎರಡು ವರ್ಷದ ಹಿಂದೆ ಉದ್ಯಮಿ ರಾಜ್ ಕುಂದ್ರಾ ಅವರು ಅಶ್ಲೀಲ ವಿಡಿಯೋ ಚಿತ್ರೀಕರಣ ಪ್ರಕರಣ ಸಂಬಂಧ ಬಂಧಿಯಾಗಿದ್ದರು. ಬೇಲ್ ಮೂಲಕ ಹೊರಬಂದ ರಾಜ್ ಅವರು ಆ ನಂತರದ ದಿನಗಳಲ್ಲಿ ಸಾಮಾಜಿಕವಾಗಿ ಮುಖಕ್ಕೆ ಮಾಸ್ಕ್‌ ಹಾಕಿಕೊಳ್ಳುತ್ತಿದ್ದರು. ಇದೀಗ ಕೊನೆಗೂ ಬಹಳ ದಿನಗಳ ನಂತರ ಅವರು ಮಾಸ್ಕ್‌ ತೆಗೆದು ಮುಖ ತೋರಿಸಿದ್ದಾರೆ.

ಅಶ್ಲೀಲ ವಿಡಿಯೋ ಪ್ರಕರಣದಡಿ ಜೈಲು ಸೇರಿದ್ದ ರಾಜ್ ಕುಂದ್ರಾ

ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿ ಅದನ್ನು ವಿವಿಧ ಆ್ಯಪ್‌ಗಳ ಮೂಲಕ ವಿತರಣೆ ಮಾಡುತ್ತಿದ್ದ ಆರೋಪದ ಮೇರೆಗೆ ರಾಜ್‌ ಕುಂದ್ರಾ ಅವರನ್ನು ಮುಂಬೈ ಪೊಲೀಸರು 2021 ಜುಲೈನಲ್ಲಿ ಬಂಧಿಸಿದ್ದರು. ಅದೇ ಸಮಯಕ್ಕೆ ಶೆರ್ಲಿನ್‌ ಛೋಪ್ರಾ ಸೇರಿದಂತೆ ಕೆಲವು ಮಾಡೆಲ್‌ಗಳು ರಾಜ್‌ ಕುಂದ್ರಾ ವಿರುದ್ಧ ದೂರು ನೀಡಿದ್ದರು.

ರಾಜ್‌ ಕುಂದ್ರಾ ನನ್ನನ್ನು ಬಳಸಿಕೊಂಡು ಮೋಸ ಮಾಡಿದ್ದಾರೆ ಎಂದು ಶೆರ್ಲಿನ್‌ ಆರೋಪಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೂನಂ ಪಾಂಡೆಯನ್ನು ಕೂಡಾ ವಿಚಾರಣೆ ಮಾಡಲಾಗಿತ್ತು. ಆದರೆ ನಾನು ಮಾಡಿರುವುದು ಅಶ್ಲೀಲ ವಿಡಿಯೋಗಳಲ್ಲ, ಅವು ಬೋಲ್ಡ್‌ ವಿಡಿಯೋಗಳು ಎಂದು ರಾಜ್‌ ಕುಂದ್ರಾ ವಾದಿಸಿದ್ದರು.

2 ವರ್ಷಗಳಿಂದ ಮಾಸ್ಕ್‌ ಧರಿಸುತ್ತಿದ್ದ ರಾಜ್ ಕುಂದ್ರಾ

ಸೆಪ್ಟೆಂಬರ್‌ನಲ್ಲಿ ನ್ಯಾಯಾಲಯ ರಾಜ್‌ ಕುಂದ್ರಾಗೆ ಜಾಮೀನು ನೀಡಿ ರಿಲೀಸ್‌ ಮಾಡಿತ್ತು. ಆ ಬಳಿಕ ರಾಜ್ ಅವರು ಮುಖ ತುಂಬಾ ಹೆಲ್ಮೆಟ್ ರೀತಿಯಲ್ಲಿ ಮಾಸ್ಕ್‌ ಅನ್ನು ಧರಿಸುತ್ತಿದ್ದಾರೆ. ಇತ್ತೀಚೆಗೆ ಗಣೇಶ ಹಬ್ಬದ ಸಂದರ್ಭದಲ್ಲಿ ಕೂಡಾ ರಾಜ್‌ ಕುಂದ್ರಾ ಮಾಸ್ಕ್‌ ಧರಿಸಿದ್ದರು. ”ನಾನು ಯಾವ ತಪ್ಪು ಮಾಡಿಲ್ಲ. ಸಾರ್ವಜನಿಕರು, ಸ್ನೇಹಿತರು ನನ್ನನ್ನು ನೋಡುತ್ತಾರೆ ಎಂಬ ಕಾರಣಕ್ಕೆ ಮಾಸ್ಕ್‌ ಧರಿಸುತ್ತಿಲ್ಲ. ಮೀಡಿಯಾದವರಿಂದ ನನಗೆ ಬಹಳ ನೋವಾಗಿದೆ. ಆದ ಕಾರಣ ಅವರು ನನ್ನ ಫೋಟೋ ಕ್ಲಿಕ್‌ ಮಾಡಬಾರದು, ನನ್ನ ವಿಡಿಯೋ ರೆಕಾರ್ಡ್‌ ಮಾಡಬಾರದು ಎಂಬ ಕಾರಣಕ್ಕೆ ಮಾಸ್ಕ್‌ ಧರಿಸುತ್ತಿದ್ದೇನೆ” ಎಂದು ನೆಟಿಜನ್ಸ್‌ ಪ್ರಶ್ನೆಗೆ ರಾಜ್‌ ಕುಂದ್ರಾ ಉತ್ತರಿಸಿದ್ದರು. ಇದೀಗ ಅವರ ಸಿನಿಮಾದ ಟ್ರೇಲರ್ ರಿಲೀಸ್ ವೇಳೆ ಮಾಸ್ಕ್‌ ಅನ್ನು ತೆಗೆದಿದ್ದಾರೆ.

Related post

ಇನ್ಮುಂದೆ ಅಪ್ರಾಪ್ತರು ವಾಹನ ಚಲಾಯಿಸಿ ಸಿಕ್ಕಿಬಿದ್ರೆ 25 ಸಾವಿರ ದಂಡ – ಡ್ರೈವಿಂಗ್ ಲೈಸೆನ್ಸ್ ನಿಯಮದಲ್ಲೂ ಬದಲಾವಣೆ ತಂದ ರಸ್ತೆ ಸಾರಿಗೆ ಸಚಿವಾಲಯ

ಇನ್ಮುಂದೆ ಅಪ್ರಾಪ್ತರು ವಾಹನ ಚಲಾಯಿಸಿ ಸಿಕ್ಕಿಬಿದ್ರೆ 25 ಸಾವಿರ ದಂಡ –…

ನ್ಯೂಸ್ ಆ್ಯರೋ‌ : ಇಂದಿನಿಂದ ದೇಶಾದ್ಯಂತ ಡ್ರೈವಿಂಗ್‌ ಲೈಸೆನ್ಸ್‌ ನಿಯಮದಲ್ಲಿ ಹಲವು ಬದಲಾವಣೆಗಳು ಆಗಲಿದ್ದು, ರಸ್ತೆ ಸಾರಿಗೆ ಸಚಿವಾಲಯವು ಡ್ರೈವಿಂಗ್‌ ಲೈಸೆನ್ಸ್‌ ಪಡೆಯುವ ಪ್ರಕ್ರಿಯೆಯನ್ನು ಸರಳಗೊಳಿಸುವ ಮತ್ತು ಪ್ರಾದೇಶಿಕ…
ಮಂಗಳೂರು ಲೋಕಸಭಾ ಕ್ಷೇತ್ರದ ಸೋಲು ಗೆಲುವಿನ ಲೆಕ್ಕಾಚಾರ – ಬ್ರಿಜೇಶ್ ಚೌಟ ಎದುರು ಪದ್ಮರಾಜ್ ಡಾರ್ಕ್ ಹಾರ್ಸ್ : ಸೋಲು ಗೆಲುವಿನ ನಿರೀಕ್ಷೆ ಹೆಚ್ಚಿದ್ದು ಹೇಗೆ?

ಮಂಗಳೂರು ಲೋಕಸಭಾ ಕ್ಷೇತ್ರದ ಸೋಲು ಗೆಲುವಿನ ಲೆಕ್ಕಾಚಾರ – ಬ್ರಿಜೇಶ್ ಚೌಟ…

ನ್ಯೂಸ್ ಆ್ಯರೋ‌ : ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ಇನ್ನು ಕೇವಲ ಮೂರು ದಿನ ಬಾಕಿ ಉಳಿದಿದ್ದು, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರವು ತೀವ್ರ ಕುತೂಹಲ ಕೆರಳಿಸಿದೆ. ಕಾಂಗ್ರೆಸ್ ಹಾಗೂ…
ದಿನ‌ ಭವಿಷ್ಯ 01-06-2024 ಶನಿವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 01-06-2024 ಶನಿವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಸ್ವಯಂ ಸುಧಾರಣೆಯ ಯೋಜನೆಗಳು ಒಂದಕ್ಕಿಂತ ಹೆಚ್ಚು ರೀತಿಯಲ್ಲಿ ಫಲ ನೀಡುತ್ತವೆ – ನಿಮ್ಮ ಬಗ್ಗೆ ನಿಮಗೇ ಒಳ್ಳೆಯದೆನಿಸುತ್ತದೆ ಮತ್ತು ವಿಶ್ವಾಸ ಮೂಡುತ್ತದೆ. ನೀವು ನಿಮ್ಮ ಮನೆಯ ಯಾವುದೇ ಸದಸ್ಯರಿಂದ…

Leave a Reply

Your email address will not be published. Required fields are marked *