ಹೊಟ್ಟೆಯಲ್ಲಿನ ಕೊಬ್ಬು ಕರಗಿಸಿ ಬೇಕೇ…? – ಹಾಗಾದ್ರೆ ಪ್ರತಿ ನಿತ್ಯ 15 ನಿಮಿಷಗಳ ಕಾಲ ಈ ಯೋಗಾಸನ ಮಾಡಿ : ಕಟಿ ಚಕ್ರಾಸನ ಮಾಡುವುದು ಹೇಗೆ?

ಹೊಟ್ಟೆಯಲ್ಲಿನ ಕೊಬ್ಬು ಕರಗಿಸಿ ಬೇಕೇ…? – ಹಾಗಾದ್ರೆ ಪ್ರತಿ ನಿತ್ಯ 15 ನಿಮಿಷಗಳ ಕಾಲ ಈ ಯೋಗಾಸನ ಮಾಡಿ : ಕಟಿ ಚಕ್ರಾಸನ ಮಾಡುವುದು ಹೇಗೆ?

ನ್ಯೂಸ್ ಆ್ಯರೋ : ವೈಯಕ್ತಿಕ ಮತ್ತು ವೃತ್ತಿಪರ ಜೀವನದ ನಡುವೆ ಸಮತೋಲನವನ್ನು ಕಾಪಾಡಿಕೊಳ್ಳುವುದು ಮಹಿಳೆಯರಿಗೆ ಒಂದು ರೀತಿಯ ಸವಾಲಿನ ಕೆಲಸವಾಗಿದೆ. ಮನೆಯ ಕೆಲಸ, ಮಕ್ಕಳು ಮತ್ತು ಹಿರಿಯರನ್ನು ನೋಡಿಕೊಳ್ಳುವುದರ ಜೊತೆಗೆ ಕಚೇರಿ ಕೆಲಸವನ್ನು ನಿಭಾಯಿಸುವುದೆಂದರೆ ಸಾಮಾನ್ಯದ ಮಾತಲ್ಲ. ಆದರೆ ಈ ಕೆಲಸದ ನಡುವೆ ಆಕೆಗೆ ತನ್ನ ಸ್ವಂತ ಕೆಲಸ ಕಾರ್ಯಗಳಿಗೆ ಸಮಯವನ್ನು ಹೊಂದಿಸಿಕೊಳ್ಳುವುದು ಕಷ್ಟದ ಕೆಲಸವಾದರೂ, ಇಷ್ಟೆಲ್ಲಾ ಕೆಲಸ ಮಾಡಲು ಶಕ್ತಿಯಂತೂ ಬೇಕು ಅಲ್ಲವೇ, ಹಾಗಾಗಿ ನೀವು ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕಾಗುತ್ತದೆ.

ದೈಹಿಕ ಚಟುವಟಿಕೆಯ ವಿಚಾರ ಬಂದಾಗ ಯೋಗಕ್ಕಿಂತ ಉತ್ತಮವಾದ ಚಟುವಟಿಕೆ ಮತ್ತೊಂದಿಲ್ಲ. ಯೋಗ ಪ್ರತಿಯೊಂದು ಕಾಯಿಲೆಗೂ ಮದ್ದಾಗಿದೆ. ಯೋಗವು ನಿಮ್ಮ ಸ್ನಾಯುಗಳನ್ನು ಹಿಗ್ಗಿಸುತ್ತದೆ. ದೇಹಕ್ಕೆ ವಿಶ್ರಾಂತಿ, ಮನಸ್ಸಿಗೆ ಶಾಂತಿ ಸಿಗುತ್ತದೆ. ಯೋಗದಿಂದ ಪ್ರತಿಯೊಬ್ಬ ವ್ಯಕ್ತಿಯು ದೀರ್ಘ ಮತ್ತು ಆರೋಗ್ಯಕರ ಜೀವನ ಆನಂದಿಸಬಹುದು.

ಹೀಗಾಗಿ ಪ್ರತಿದಿನ ಕನಿಷ್ಠ 15 ನಿಮಿಷಗಳ ಕಾಲ ನಿಯಮಿತವಾಗಿ ಯೋಗಾಸನ ಮಾಡಿ. ಯೋಗಾಸನವು ದೈಹಿಕವಾಗಿ ಮತ್ತು ಮಾನಸಿಕವಾಗಿ ಸಧೃಡರಾಗಿರುವಂತೆ ಮಾಡುತ್ತದೆ. ಅಲ್ಲದೆ ಅನಾರೋಗ್ಯ ಮತ್ತು ಚಿಂತೆಗಳು ನಮ್ಮನ್ನು ಕಾಡುವುದರಿಂದ ಮುಕ್ತಿ ನೀಡುತ್ತದೆ. ಬೊಜ್ಜು ಮತ್ತು ಸಂಧಿವಾತವು ಕೂಡ ಯೋಗಾಸನದಿಂದ ದೂರವಾಗುತ್ತದೆ.

ಯೋಗಾಸನದಲ್ಲಿ ಹಲವು ಭಂಗಿಗಳಿವೆ. ಅದರಲ್ಲಿ ಕಟಿ ಚಕ್ರಾಸನ ಕೂಡ ಒಂದು. ಕಟಿ ಎಂದರೆ ಸೊಂಟ. ಚಕ್ರಾಸನ ಎಂದರೆ ಸೊಂಟವನ್ನು ತಿರುಗುವ ಆಸನ ಎಂದು ಕರೆಯಲಾಗುತ್ತದೆ. ಈ ಭಂಗಿಯು ದೇಹಕ್ಕೆ ತುಂಬಾ ಒಳ್ಳೆಯದು. ಅದರಲ್ಲೂ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವವರು ಈ ಯೋಗಾಸನವನ್ನು ಮಾಡುವುದು ತುಂಬಾ ಮುಖ್ಯ.

ಕಟಿ ಚಕ್ರಾಸನ ಮಾಡುವುದು ಹೇಗೆ?

ಮೊದಲು ಎರಡು ಪಾದಗಳನ್ನು ಒಟ್ಟಿಗೆ ತಂದು ನೇರವಾಗಿ ನಿಂತುಕೊಳ್ಳಿ. ನಂತರ ಎರಡು ಪಾದಗಳನ್ನು ಒಂದೂವರೆ ಅಡಿ ಅಂತರದಲ್ಲಿ ಇರಿಸಿಕೊಳ್ಳಿ. ಬಳಿಕ ಎರಡೂ ತೋಳುಗಳನ್ನು ಮುಂದಕ್ಕೆ ಚಾಚಿ, ಕೈಗಳನ್ನು ಪರಸ್ಪರ ಸಮಾನಾಂತರವಾಗಿ ಇಡಬೇಕು. ನಂತರ ದೀರ್ಘವಾಗಿ ಉಸಿರಾಡಬೇಕು (ಗಾಳಿಯನ್ನು ಒಳಗೆ ತೆಗೆದುಕೊಂಡು ಹೊರ ಬಿಡಿ) ಬಳಿಕ ಕಾಲುಗಳನ್ನು ಚಲಿಸದೆ ಅದನ್ನು ಸಾಧ್ಯವಾದಷ್ಟು ಬಲಕ್ಕೆ ತಿರುಗಿಸಿ. ಹೀಗೆ ತಿರುಗಿಸುವಾಗ ಸೊಂಟದವರೆಗೆ ಮಾತ್ರ ತಿರುಗಿಸಲು ಮರೆಯದಿರಿ. ಹಿಂದಕ್ಕೆ ತಿರುಗುವಾಗಲೂ ತೋಳುಗಳನ್ನು ಪರಸ್ಪರ ಸಮಾನಾಂತರವಾಗಿ ಇಡಬೇಕು. ಹೀಗೆ 4ರಿಂದ 6 ಸೆಕೆಂಡುಗಳ ಕಾಲ ಹಿಡಿದು ಉಸಿರಾಡಿ ಮತ್ತು ಮುಂದೆ ತಿರುಗಿ. ಇದನ್ನು ಬಲಭಾಗದಲ್ಲಿ 5 ಬಾರಿ ಮತ್ತು ಎಡಭಾಗದಲ್ಲಿ 5 ಬಾರಿ ಮಾಡಿ.

ಕಟಿ ಚಕ್ರಾಸನ ಮಾಡುವುದರಿಂದಾಗುವ ಉಪಯೋಗಗಳು

  • ಸೊಂಟದ ಬಳಿಯ ಕೊಬ್ಬನ್ನು ಕರಗಿಸುತ್ತದೆ.
  • ಸಂಧಿವಾತ ಇರುವವರಿಗೆ ಕಟಿ ಚಕ್ರಾಸನ ತುಂಬಾ ಒಳ್ಳೆಯದು.
  • ಬೆನ್ನು ಮೂಳೆಯನ್ನು ಬಲಗೊಳಿಸುತ್ತದೆ.
  • ಕುತ್ತಿಗೆ ಮತ್ತು ಹೆಗಲು ಬಲಗೊಳ್ಳುತ್ತದೆ.
  • ಮಾನಸಿಕ ಒತ್ತಡ ಮತ್ತು ಖಿನ್ನತೆಯನ್ನು ದೂರ ಮಾಡುತ್ತದೆ

ಈ ವಿಷಯಗಳು ನೆನಪಿರಲಿ

ಸ್ಪಾಂಡಿಲೈಟಿಸ್ ಇರುವವರು ಕುತ್ತಿಗೆಯನ್ನು ಸ್ವಲ್ಪ ತಿರುಗಿಸಬೇಕು. ಭುಜ ಮತ್ತು ಸೊಂಟದ ನೋವಿನಿಂದ ತೀವ್ರವಾಗಿ ಬಳಲುತ್ತಿರುವವರು ಈ ಆಸನವನ್ನು ಮಾಡಬಾರದು. ಈ ಆಸನ ಮಾಡುವಾಗ ಮೊಣಕಾಲನ್ನು ಬಾಗಿಸಬಾರದು.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *