Viral Audio : ಅರುಣ್ ಕುಮಾರ್ ಪುತ್ತಿಲ ಅವರದ್ದು‌ ಎನ್ನಲಾದ ಆಡಿಯೋ ವೈರಲ್ – ರೆಕಾರ್ಡ್ ಆಡಿಯೋ ಹಂಚಿದ್ಯಾರು? ಆಡಿಯೋದಲ್ಲಿ ಏನಿದೆ? ಫೈರ್ ಬ್ರ್ಯಾಂಡ್ ಹಿಂದಿದ್ಯಾ ರಾಜಕೀಯ ಷಡ್ಯಂತ್ರ?

20240825 133735
Spread the love

ನ್ಯೂಸ್ ಆ್ಯರೋ : ಪುತ್ತಿಲ ಪರಿವಾರದ ಅಗ್ರಮಾನ್ಯ ನಾಯಕ ಅರುಣ್ ಕುಮಾರ್ ಪುತ್ತಿಲ ಅವರದ್ದು ಎನ್ನಲಾದ ಆಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಧ್ಯಮ ವಯಸ್ಸಿನ ಮಹಿಳೆ ಮತ್ತು ಅರುಣ್ ಕುಮಾರ್ ಪುತ್ತಿಲ ನಡುವಿನ ಮಾತುಕತೆಯಲ್ಲಿ ರಾಜಕಾರಣದ ಬಗ್ಗೆ ಹತ್ತು ಹಲವು ವಿಚಾರಗಳು ಚರ್ಚೆಯಾಗಿದೆ. ತೀರಾ ಫ್ರೆಂಡ್ಲಿ‌ ಅನಿಸಬಹುದಾದ ಕರೆಯನ್ನು ರೆಕಾರ್ಡ್ ಮಾಡಿ ಅದನ್ನು ವೈರಲ್ ಮಾಡುವ ಉದ್ದೇಶ ಯಾರದ್ದಿರಬಹುದು? ಮಹಿಳೆಯೇ ರೆಕಾರ್ಡ್ ಮಾಡಿದ್ದರೆ ಅವರ್ಯಾಕೆ ಆ ರೀತಿ ಮಾಡಿದರೋ ಗೊತ್ತಿಲ್ಲ..‌ ಆದರೆ‌ ಸಾಮಾಜಿಕ ಜಾಲತಾಣಗಳಲ್ಲಿ ಆ ಆಡಿಯೋ ಭಾರೀ‌‌ ಶೇರ್ ಆಗುತ್ತಿದೆ.

ವೈರಲ್ ಆದ ಆಡಿಯೋದಲ್ಲಿ ಏನೇನಿದೆ?


ಪುತ್ತಿಲ‌‌ ಅಧ್ಯಾಯ ಇನ್ನು‌ ಮುಗಿಯಿತು ಎಂಬ ಒಕ್ಕಣೆಯೊಂದಿಗೆ ಇಬ್ಬರ ನಡುವೆ ಆರಂಭವಾದ ಮಾತಿನ ಚರ್ಚೆಯಲ್ಲಿ ರಾಜಕಾರಣದ ಬಗ್ಗೆ ಹಲವು ವಿಚಾರಗಳು ಪ್ರಸ್ತಾಪ ಆಗಿವೆ. ನಾಚಿಕೆ ಮಾನ‌ ಮರ್ಯಾದೆ ಬಿಟ್ಟವರಿಗಷ್ಟೇ ರಾಜಕೀಯ ಎಂಬ ಮಾತು ಆ ಆಡಿಯೋ ದಲ್ಲಿ ಇದೆ.

35 ವರ್ಷಗಳ ಸಾರ್ವಜನಿಕ ಜೀವನದಲ್ಲಿ ಪಕ್ಷದ್ರೋಹಿ ಎಂದೇ ನೀವು ಬಿಂಬಿತವಾಗಿದ್ದೀರಿ. ಬರೇ‌ ಸುಳ್ಳಿನ‌ ರಾಜಕಾರಣ ಮಾಡಿ ಎಷ್ಟು ಸಮಯ ಇರ್ತೀರಾ? ಬರೇ ಬ್ಯಾನರ್ ಕಟ್ಟಲು ಮಾತ್ರ ನಿಮ್ಮ ಉಪಯೋಗ ಎಂದು ಮಹಿಳೆ ಪುತ್ತಿಲ ಅವರನ್ನು ಹೀಯಾಳಿಸುವ ಸಂಭಾಷಣೆಯೂ ಆ ಆಡಿಯೋದಲ್ಲಿದೆ.

ಆಶಾ ತಿಮ್ಮಪ್ಪ ಅವರು ಅಭ್ಯರ್ಥಿಯಾದ ಕಾರಣಕ್ಕೆ ನಿಮಗೆ ಕಳೆದ ಬಾರಿ ಮತ ಸಿಕ್ಕಿತು.‌ ಅದೇನೂ‌ ನಿಮ್ಮ ವೋಟ್ ಅಲ್ಲ, ಬಿಜೆಪಿಯ ವೋಟ್ ಗಳು. ನಿಮಗಿನ್ನು ರಾಜಕೀಯ ಭವಿಷ್ಯವೇ ಇಲ್ಲ ಎಂದು ಮಹಿಳೆ ಮಾತನಾಡುವ ಆಡಿಯೋ ವೈರಲ್ ಆಗಿದೆ‌.

ಅಲ್ಲದೇ ನಿಮ್ಮದು‌ ಸುಳ್ಳಿನ‌ ರಾಜಕಾರಣ, ಎಷ್ಟು ವರ್ಷ ಹೀಗೆ ಇರ್ತೀರಾ ಅಂತೆಲ್ಲ‌ ಆ ಮಹಿಳೆ ಮಾತನಾಡಿದ್ದು, ಆಡಿಯೋ ಕೊನೆಯಲ್ಲಿ ‌ನಿಮಗೆ‌ ಪಿನ್ ಇಟ್ಟಿದ್ದೇನೆ ಈಗ ಬೇಡ ಎನ್ನುತ್ತಾ ನಗುವುದು ಆಡಿಯೋದಲ್ಲಿ ರೆಕಾರ್ಡ್ ಆಗಿದೆ. ತಮ್ಮದೇ ಅಭಿಮಾನಿ ಬಳಗ ಹೊಂದಿರುವ ಪುತ್ತಿಲ ಅವರ ವಿರುದ್ಧ ಷಡ್ಯಂತ್ರ ನಡೆದಿದೆಯಾ ಅಥವಾ ಅಸಲಿ‌ ಸತ್ಯ‌ ಏನೆಂದು ಅಭಿಮಾನಿಗಳೇ ಗೊಂದಲಕ್ಕೀಡಾಗಿದ್ದಾರೆ. ಆದರೆ ಈ ಆಡಿಯೋದ ಸತ್ಯಾಸತ್ಯತೆ ತಿಳಿದುಬರಬೇಕಿದ್ದು, ಅರುಣ್ ಕುಮಾರ್ ಪುತ್ತಿಲ ಅವರೇ ಈ ಆಡಿಯೋ ಬಗ್ಗೆ ಸ್ಪಷ್ಟನೆ ನೀಡಬೇಕಿದೆ.

ವೈರಲ್ ಆಗುತ್ತಿರುವ ಆಡಿಯೋ ⬆️ ⬆️

ಆಡಿಯೋ ಬಹಿರಂಗಕ್ಕೆ ಕಾರಣ ಪುತ್ತಿಲ ಅವರನ್ನು ಮಣಿಸಲು ಅವರ ವಿರುದ್ಧ ಷಡ್ಯಂತ್ರವೇ?

ಕರಾವಳಿಯ ಹಲವು ದಶಕಗಳ ಇತಿಹಾಸದಲ್ಲಿ ಇಲ್ಲಿ ಬಿಜೆಪಿ ಪಕ್ಷ ತನ್ನದೇ ಆದ ಬೇರು ಮಟ್ಟದಲ್ಲಿ ಕಾರ್ಯಕರ್ತರನ್ನು ಹೊಂದಿದೆ.‌ ಅದರಲ್ಲೂ ಹಿಂದುತ್ವದ ಪ್ರಯೋಗ ಶಾಲೆ ಎಂದು ಪುತ್ತೂರನ್ನು‌ ಕರೆಯಲಾಗುತ್ತದೆ. ಇಂತಹ ಕ್ಷೇತ್ರದಲ್ಲೂ ಕಳೆದ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಸೋಲಿಗೆ ಪುತ್ತಿಲ ಕಾರಣವಾಗಿದ್ದರು. ಗ್ರಾಮ ಪಂಚಾಯತ್ ಚುನಾವಣೆಗಳಲ್ಲೂ ಪುತ್ತಿಲ ಪರಿವಾರದ ಸದಸ್ಯರುಗಳು ಗೆದ್ದು ಬೀಗಿದ್ದರು. ಅಷ್ಟೇ ಅಲ್ಲದೇ ಪುತ್ತಿಲ ಅವರು ಲೋಕಸಭಾ ಚುನಾವಣೆಯಲ್ಲೂ‌ ಸ್ಪರ್ಧಿಸುವ ಗುರಿ ಹೊಂದಿದ್ದರು.

ಪುತ್ತಿಲ ಅವರು ಸ್ವತಂತ್ರವಾಗಿ ಕರಾವಳಿಯಲ್ಲಿ ಗಟ್ಟಿಯಾದರೆ ನಮ್ಮ‌ ಮತಬ್ಯಾಂಕ್ ಒಡೆಯುವುದು ಖಚಿತ ಎಂಬ ಅರಿವಾಗುತ್ತಲೇ ಬಿಜೆಪಿ ಅವರನ್ನು ಮರಳಿ ಪಕ್ಷಕ್ಕೆ ಸೇರಿಸಿಕೊಂಡಿತ್ತು. ಆದರೆ ಪುತ್ತೂರಿನಲ್ಲೇ ಹಲವು ಬಿಜೆಪಿಗರಿಗೆ ಪುತ್ತಿಲ ಬೇಕಿರಲಿಲ್ಲ. ಪುತ್ತಿಲ ಅವರ ಬೆನ್ನ ಹಿಂದೆಯೇ ಕತ್ತಿ ಮಸೆಯುತ್ತಾ ಪುತ್ತಿಲ ಅವರನ್ನು ಮಣಿಸಲು ಯತ್ನಿಸುತ್ತಿರುವ ಗುಂಪು ಏನಾದರೂ ಈ ಆಡಿಯೋ ವೈರಲ್ ಹಿಂದೆ ಇದೆಯಾ ಪುತ್ತೂರು ಮಹಾಲಿಂಗೇಶ್ವರನಿಗೇ ಗೊತ್ತು…!!!

Leave a Comment

Leave a Reply

Your email address will not be published. Required fields are marked *

error: Content is protected !!