ಮೂಡಬಿದ್ರೆ : ಅಪ್ರಾಪ್ತ ಮಗಳ ಮೇಲೆ ತಂದೆಯಿಂದಲೇ ಅತ್ಯಾಚಾರ, ಗರ್ಭಿಣಿಯಾದ ಪುತ್ರಿ – ಪೊಕ್ಸೊ ಪ್ರಕರಣದಡಿ ಕಾಮುಕ ತಂದೆ ಅರೆಸ್ಟ್
ನ್ಯೂಸ್ ಆ್ಯರೋ : ಸ್ವಂತ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನು ಗರ್ಭಿಣಿಯಾಗಿಸಿದ ಆರೋಪದ ಮೇರೆಗೆ ಕಾಮುಕ ತಂದೆಯನ್ನು ಮೂಡಬಿದಿರೆ ಪೋಲಿಸರು ಬಂಧಿಸಿದ್ದಾರೆ.
55 ವರ್ಷ ಪ್ರಾಯದ ಕೂಲಿ ಕಾರ್ಮಿಕ ಬಂಧಿತನಾಗಿದ್ದು, ಈತ ಪ್ರೌಢಶಾಲೆಯಲ್ಲಿ ಓದುತ್ತಿರುವ ಮಗಳ ಮೇಲೆ ಆರು ತಿಂಗಳ ಹಿಂದೆ ಮನೆಯಲ್ಲೆ ಅತ್ಯಾಚಾರ ಎಸಗಿದ್ದ ಎನ್ನಲಾಗಿದೆ.
ಇತ್ತೀಚೆಗೆ ಆಕೆಯ ಆರೋಗ್ಯದಲ್ಲಿ ಏರುಪೇರು ಉಂಟಾದಾಗ ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಗೆ ಕರೆದೊಯ್ದಿದ್ದ. ಅಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಮಗಳು 6 ತಿಂಗಳ ಗರ್ಭಿಣಿಯಾಗಿರುವುದು ತಿಳಿದುಬಂದಿದೆ.
ಮೊದಮೊದಲು ಆರೋಪಿಯು ಬೇರೆಯವರ ಹೆಸರು ಹೇಳಿ ಪೊಲೀಸ್ ತನಿಖೆಯ ದಾರಿ ತಪ್ಪಿಸಲೆತ್ನಿಸಿದ್ದ. ಆದರೆ, ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದಾಗ ಅತ ತಪ್ಪೊಪ್ಪಿಕೊಂಡಿದ್ದಾನೆ. ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ಮೂಲತಃ ಕಾರ್ಕಳದವನಾಗಿದ್ದು ದಶಕಗಳ ಹಿಂದೆ ಮೂಡುಬಿದಿರೆ ತಾಲೂಕಿನ ಗ್ರಾಮವೊಂದರ ಸರಕಾರಿ ಜಾಗದಲ್ಲಿ ಮನೆ ಕಟ್ಟಿ ನೆಲೆಸಿದ್ದ. ಆರೋಪಿಗೆ ಪತ್ನಿ ಹಾಗೂ ಇಬ್ಬರು ಪುತ್ರಿಯರಿದ್ದಾರೆ. ಈತನ ವಿರುದ್ಧ ಹಲವು ಮದುವೆ ಪ್ರಕರಣಗಳ ಆರೋಪ ಇರುವುದು ಬೆಳಕಿಗೆ ಬಂದಿದೆ.
Leave a Comment