ಸೆ. 30ಕ್ಕೆ ಕನ್ನಡ ಬಿಗ್ ಬಾಸ್ ಒಟಿಟಿ ಸೀಸನ್-2 ಆರಂಭ? -ಯಾರೆಲ್ಲ ಸ್ಪರ್ಧಿಸುತ್ತಾರೆ ಗೊತ್ತಾ?

ಸೆ. 30ಕ್ಕೆ ಕನ್ನಡ ಬಿಗ್ ಬಾಸ್ ಒಟಿಟಿ ಸೀಸನ್-2 ಆರಂಭ? -ಯಾರೆಲ್ಲ ಸ್ಪರ್ಧಿಸುತ್ತಾರೆ ಗೊತ್ತಾ?

ನ್ಯೂಸ್ ಆ್ಯರೋ‌ : ಕನ್ನಡದ ಬಿಗ್ ಬಾಸ್ ಜನಪ್ರಿಯ ರಿಯಾಲಿಟಿ ಶೋ. ಕಿಚ್ಚ ಸುದೀಪ್ ನಿರೂಪಣೆ ಈ ಕಾರ್ಯಕ್ರಮದ ಹೈಲೈಟ್. ಜೊತೆಗೆ ಸೆಲೆಬ್ರಿಟಿಗಳ ಜೀವನ ಶೈಲಿ, ಅವರ ಸ್ನೇಹ, ಕಚ್ಚಾಟ, ವಿವಿಧ ಟಾಸ್ಕ್ ಗಳು ಪ್ರೇಕ್ಷಕರ ಗಮನ ಸೆಳೆಯುತ್ತವೆ. ಹೀಗಾಗಿ ಈ ಶೋಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ. ಸೆ. 30ಕ್ಕೆ ಒಟಿಟಿ ಸೀಸನ್ -2 ಆರಂಭವಾಗುತ್ತದೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಸೀಸನ್ 10ಕ್ಕೂ ತಯಾರಿ

ಈ ಮಧ್ಯೆ ಓಟಿಟಿ ಸೀಸನ್-2 ಮುಗಿದ ಬಳಿಕ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸೀಸನ್ 10 ಆರಂಭವಾಗುತ್ತದೆ ಎನ್ನಲಾಗಿದ್ದು, ಎರಡೂ ಶೋಗಳಿಗೆ ಸೂಕ್ತ ಸ್ಪರ್ಧಿಗಳನ್ನು ಹುಡುಕಲಾಗುತ್ತಿದೆಯಂತೆ. ಆದರೆ ಅಧಿಕೃತ ಹೇಳಿಕೆ ಇನ್ನೂ ಬಂದಿಲ್ಲ.

ಇವರೆಲ್ಲ ಸ್ಪರ್ಧಿಸುತ್ತಾರಾ?

ಈ ಬಾರಿ ‘ರಾಬರ್ಟ್’ ಚಿತ್ರ ಖ್ಯಾತಿಯ ನಟಿ ಆಶಾ ಭಟ್, ‘ಹುಚ್ಚ’ ಚಿತ್ರದ ನಟಿ ರೇಖಾ, ಕಿರುತೆರೆ ನಟಿ ನಮ್ರತಾ ಗೌಡ, ರೀಲ್ಸ್ ಮೂಲಕ ಜನಪ್ರಿಯರಾಗಿರುವ ಭೂಮಿಕಾ ಬಸವರಾಜ್ ಮತ್ತಿತರರು ಒಟಿಟಿ ಸೀಸನ್ ನಲ್ಲಿ ಸ್ಪರ್ಧಿಸುತ್ತಾರೆ ಎನ್ನುವ ಗಾಸಿಪ್ ಹರಡಿದೆ.

ಇನ್ನು ಹಿಂದಿಯ ಬಿಗ್ ಬಾಸ್ ಒಟಿಟಿ ಸೀಸನ್-2 ಮುಕ್ತಾಯವಾಗಿದೆ. ಸಲ್ಮಾನ್ ಖಾನ್ ನಡೆಸಿಕೊಟ್ಟ ಈ ಶೋದಲ್ಲಿ ಎಲ್ವಿಶ್ ಯಾದವ್ ವಿನ್ನರ್ ಆಗಿ ಹೊರ ಹೊಮ್ಮಿದ್ದಾರೆ. ಅಭಿಷೇಕ್ ಮಲ್ಹಾನ್ ಮೊದಲ ರನ್ನರ್ ಅಪ್ ಆಗಿದ್ದಾರೆ. ಈ ಸೀಸನ್ ವಿವಾದಗಳಿಂದಲೇ ಭಾರೀ ಸುದ್ದಿಯಾಗಿತ್ತು.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *