ಪುತ್ತೂರು : ಮುಸ್ಲಿಂ ವಿದ್ಯಾರ್ಥಿನಿಗೆ ಹಿಂದೂ ವಿದ್ಯಾರ್ಥಿಯಿಂದ ಬ್ಲೇಡ್ ಇರಿತ ಪ್ರಕರಣ – ಕೆಪಿಸಿಸಿ ಕಾರ್ಯದರ್ಶಿ ಎಂ.ಎಸ್.ಮುಹಮ್ಮದ್ ಖಂಡನೆ

20240820 174704
Spread the love

ನ್ಯೂಸ್ ಆ್ಯರೋ ‌: ಕೊಂಬೆಟ್ಟು ಕಾಲೇಜು ವಿದ್ಯಾರ್ಥಿನಿಗೆ ವಿದ್ಯಾರ್ಥಿಯೊಬ್ಬ ಚೂರಿಯಿಂದ ಇರಿದಿರುವ ಘಟನೆ ಖಂಡನೀಯ. ಪ್ರಕರಣದ ಬಗ್ಗೆ ತನಿಖೆಯಾಗಿ ಸೂಕ್ತ ಕಾನೂನು ಕ್ರಮ ಆಗಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್ ಮುಹಮ್ಮದ್ ಆಗ್ರಹಿಸಿದ್ದಾರೆ.

ಮಾಧ್ಯಮದ ಜೊತೆ ಮಾತನಾಡಿದ ಅವರು ಈ ವಿಚಾರವಾಗಿ ನಾನು ಈಗಾಗಲೇ ಜಿಲ್ಲಾ ಎಸ್ಪಿ ಜೊತೆ ಮಾತನಾಡಿದ್ದೇನೆ. ಪೊಲೀಸ್ ಇಲಾಖೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತದೆ ಎಂದು ಅವರು ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಕಾಲೇಜಿನಲ್ಲಿ ಇಂತಹ ಘಟನೆ ನಡೆಯುವುದೆಂದರೆ ನಿಜವಾಗಿಯೂ ಬಹಳ ಬೇಸರದ ವಿಚಾರ. ವಿದ್ಯೆ ಕಲಿಕೆಗೆ ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಇಂತಹ ಕೃತ್ಯ ನಡೆಸುವುದೆಂದರೆ ಅದನ್ನು ಈಗಲೇ ಗಂಭೀರವಾಗಿ ಪರಿಗಣಿಸಬೇಕು.

ಶಿಕ್ಷಣ ಸಂಸ್ಥೆಯವರೂ ಕೂಡಾ ಇಂತಹ ಘಟನೆಗಳಾದಾಗ ಬೇಜವಾಬ್ದಾರಿಯಿಂದ ವರ್ತಿಸಬಾರದು ಎಂದು ಅವರು ಹೇಳಿದರು. ಘಟನೆ ನಮಗೆಲ್ಲಾ ಬಹಳ ನೋವು ಮತ್ತು ಆಘಾತ ತಂದಿದೆ. ಇಂತಹ ಕೃತ್ಯ ಭವಿಷ್ಯದಲ್ಲಿ ಮರುಕಳಿಸಬಾರದು, ಹಾಗಾಗಿ ಕಟ್ಟುನಿಟ್ಟಿನ ಕ್ರಮ ಆಗಬೇಕು ಎಂದು ಎಂ ಎಸ್ ಮುಹಮ್ಮದ್ ಹೇಳಿದರು.

Leave a Comment

Leave a Reply

Your email address will not be published. Required fields are marked *

error: Content is protected !!