ಪುತ್ತೂರು : ಕ್ಷುಲ್ಲಕ ವಿಚಾರಕ್ಕೆ ನಡೆದ ಜಗಳಕ್ಕೆ ಪ್ರೀತಿಯ ಬಣ್ಣ ಹಚ್ಚಿದ್ಲಾ ವಿದ್ಯಾರ್ಥಿನಿ? – ಮೊದಲು ಚೂರಿ, ಆಮೇಲೆ ಬ್ಲೇಡ್, ಇದೀಗ ವಿದ್ಯುತ್ ಕೈಯಲ್ಲಿ ಕಾಣೋದು ಗೀರಿದ ಗಾಯ..!! ಹೈಡ್ರಾಮದ ಹಿಂದಿರುವ ಅಸಲಿ ಕಾರಣ ಏನು??

20240820 160655
Spread the love

ನ್ಯೂಸ್ ಆ್ಯರೋ‌ : ಪುತ್ತೂರಿನಲ್ಲಿ ಹಿಂದೂ ಯುವಕ ತನಗೆ ಚೂರಿ ಇರಿದಿದ್ದಾನೆ ಎಂದು ಮುಸ್ಲಿಂ ವಿದ್ಯಾರ್ಥಿನಿಯೊಬ್ಬಳು ಆರೋಪಿಸಿ ಆಸ್ಪತ್ರೆಗೆ ದಾಖಲಾದ ಹೈಡ್ರಾಮ ‌ನಡೆದಿದ್ದು, ಈ ಪ್ರಕರಣ ಸತ್ಯಾಸತ್ಯತೆ ಬೇರೆಯೇ ಇದೆ. ಈಗಾಗಲೇ ಪೊಲೀಸರು ಸತ್ಯಾಸತ್ಯತೆಗಳ ಬಗ್ಗೆ ತನಿಖೆ ಆರಂಭಿಸಿದ್ದಾರೆ.

ಹೌದು, ಪುತ್ತೂರಿನ ಕೊಂಬೆಟ್ಟು ಸರಕಾರಿ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿಯೊಬ್ಬಳು ತನಗೆ ಅದೇ ಕಾಲೇಜಿನ ಹಿಂದೂ ವಿದ್ಯಾರ್ಥಿಯೊಬ್ಬ ಚೂರಿಯಿಂದ ಇರಿದಿರುವುದಾಗಿ ಆರೋಪಿಸಿ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾಳೆ. ಆದರೆ ಅವಳ ಕೈಯಲ್ಲಿ ಕೇವಲ ಗೀರಿದ ಗುರುತು ಕಂಡು ಬಂದಿದೆ.

ಆದರೆ ಮಾಹಿತಿ ಪ್ರಕಾರ, ಕೊಂಬೆಟ್ಟು ಕಾಲೇಜಿನಿಂದ ಪುತ್ತೂರು ಮುಖ್ಯ ಆಂಚೆ ಕಚೇರಿಯನ್ನು ಸಂಪರ್ಕಿಸುವ ರಸ್ತೆಯಲ್ಲಿ ಮುಸ್ಲಿಂ ವಿದ್ಯಾರ್ಥಿನಿ ಹಾಗು ಹಿಂದೂ ವಿದ್ಯಾರ್ಥಿಯ ಮಧ್ಯೆ ಕ್ಷುಲ್ಲಕ ವಿಷಯಕ್ಕೆ ಜಗಳವಾಗಿದೆ.

ಇದನ್ನೂ ಓದಿ : Puttur : ಲವ್ ಮಾಡುವಂತೆ ಒತ್ತಾಯ, ತಿರಸ್ಕರಿಸಿದ‌ ಮುಸ್ಲಿಂ ವಿದ್ಯಾರ್ಥಿನಿಗೆ ಬ್ಲೇಡ್ ನಿಂದ ಇರಿದ ಹಿಂದೂ ವಿದ್ಯಾರ್ಥಿ‌ – ಗಾಯಾಳು ಆಸ್ಪತ್ರೆಗೆ ದಾಖಲು, ಆಸ್ಪತ್ರೆಯಲ್ಲಿ ಹೆಸರು ಬದಲಿಸಿ ಹೇಳುವಂತೆ ಒತ್ತಡ ಎಂದ ವಿದ್ಯಾರ್ಥಿನಿ..!!

ಈ ವೇಳೆ ವಿದ್ಯಾರ್ಥಿ ಶ್ರೀಜಿತ್ ವಿದ್ಯಾರ್ಥಿನಿ ಐಷತ್ ಇರ್ಫಾನಾಳಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ ಎಂದು ಹೇಳಲಾಗುತ್ತಿದೆ. ಅಷ್ಟಕ್ಕೇ ವಿದ್ಯಾರ್ಥಿನಿ ಹೈಡ್ರಾಮಾ ಮಾಡಿ ಸರಕಾರಿ ಆಸ್ಪತ್ರೆಯಲ್ಲಿ ಆಡ್ಮಿಟ್ ಆಗಿದ್ದಾಳೆ ಎನ್ನಲಾಗುತ್ತಿದೆ.

ಸದ್ಯ ಪೊಲೀಸರು ಘಟನೆ ನಡೆದ ಸ್ಥಳದ ಸಿಸಿಟಿವಿ ವಿಡಿಯೋ ಪರಿಶೀಲಿಸುತ್ತಿದ್ದು, ಆಕೆಯ ಜತೆಗಿದ್ದ ಬೇರೆ ವಿದ್ಯಾರ್ಥಿಗಳ ಬಳಿಯೂ ಮಾಹಿತಿ ಕಲೆ ಹಾಕುತ್ತಿದ್ದಾರೆ. ಸದ್ಯ ವಿದ್ಯಾರ್ಥಿನಿ ಮಾಡಿದ ಹೈಡ್ರಾಮದ ಕುರಿತು ಪೊಲೀಸ್ ವಿಚಾರಣೆ ನಡೆಯುತ್ತಿದೆ.

ಏನಿದು‌ ಪ್ರಕರಣ?

ಪುತ್ತೂರಿನ ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿಗೆ ಸೇರಿದ ವಿದ್ಯಾರ್ಥಿಗಳಾದ ಪ್ರಥಮ ಪಿಯುಸಿಯ ಐಷತ್ ಇರ್ಫಾನಾ ಗಾಯಗೊಂಡ ವಿದ್ಯಾರ್ಥಿನಿಯಾಗಿದ್ದು, ಬ್ಲೇಡ್ ನಿಂದ ಇರಿದ ಆರೋಪಿ ಶ್ರೀಜಿತ್ ಕೂಡ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿದ್ದಾನೆ.

ವಿದ್ಯಾರ್ಥಿನಿಯ ಹೇಳಿಕೆ

ಇಂದು ಬೆಳಗ್ಗೆ ವಿದ್ಯಾರ್ಥಿನಿ ಇರ್ಫಾನಾಳನ್ನು ಫಾಲೋ ಮಾಡಿದ ಆರೋಪಿ ವಿದ್ಯಾರ್ಥಿ ಶ್ರೀಜಿತ್
ನಿನ್ನನ್ನು ಲವ್ ಮಾಡುತ್ತೇನೆ ಎಂದು ಹೇಳಿದ್ದ.

ಆ ಸಂದರ್ಭದಲ್ಲಿ ಇರ್ಫಾನಾ‌ ಆರೋಪಿಗೆ‌ ನಿಂದಿಸಿದ್ದಳು‌. ಇದರಿಂದ ಸಿಟ್ಟಿಗೆದ್ದ ಆರೋಪಿ ಶ್ರೀಜಿತ್ ಕೂಡಲೇ ಇರ್ಫಾನಾ ಕೈಗೆ ಬ್ಲೇಡ್ ನಿಂದ ಇರಿದು ಪರಾರಿಯಾಗಿದ್ದಾನೆ ಎಂದು ವಿದ್ಯಾರ್ಥಿನಿ ಆರೋಪಿಸಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾಳೆ.

20240820 1452201584380239099639996
20240820 145244359488050160325165
20240820 1452047741203925053682536
20240820 1451312012343880565282306

ಆಸ್ಪತ್ರೆಯಲ್ಲಿ ಹೆಸರು ಬದಲಾಯಿಸಿ ಹೇಳುವಂತೆ ಶಿಕ್ಷಕಿ ಒತ್ತಡ ಹೇರಿದ್ದಾರೆ ಎಂದು ವಿದ್ಯಾರ್ಥಿನಿ ‌ಆರೋಪಿಸಿದ್ದು, ಕೈಗೆ ಗಾಜು ತಾಗಿ ಗಾಯವಾಗಿದೆ ಎಂದು ಹೇಳಲು ಒತ್ತಾಯಿಸಿದ್ದಾರೆ ಎಂದೂ ಆರೋಪಿಸಿದ್ದಳು‌. ಘಟನೆಯ‌ ಬಳಿಕ ಆಸ್ಪತ್ರೆಗೆ ವಿದ್ಯಾರ್ಥಿನಿ ದಾಖಲಾಗಿದ್ದು, ಆಸ್ಪತ್ರೆಯ ಮುಂದೆ ಭಾರೀ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿದ್ದರು. ಸ್ಥಳದಲ್ಲಿ ಬಿಗುವಿನ ಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ ನೆರೆದಿದ್ದ ಜನರನ್ನು ಪೋಲಿಸರು ಆಸ್ಪತ್ರೆಯಿಂದ ಹೊರಗೆ ಕಳುಹಿಸಿದ್ದು ಮತ್ತಷ್ಟು ಸಾರ್ವಜನಿಕರು ಗುಂಪು ಸೇರುತ್ತಿದ್ದಾರೆ.

ಪ್ರಜ್ಞಾವಂತ ನಾಗರೀಕರ ಕರ್ತವ್ಯಗಳೇನು?

ಕೋಮು ಸೂಕ್ಷ್ಮ ಪ್ರದೇಶವಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧರ್ಮಾಧಾರಿತ ವಿಷಯಗಳಲ್ಲಿ ಜಾಗರೂಕರಾಗಿರಬೇಕಾದ್ದು ಅಗತ್ಯ. ಅಪ್ರಾಪ್ತ ಮಕ್ಕಳ ಜಗಳದ ವಿಚಾರವಾಗಿ ಪೋಲಿಸರು ನಿಷ್ಪಕ್ಷಪಾತ ತನಿಖೆ ನಡೆಸಿ ನ್ಯಾಯದ ಪರ ನಿಲ್ಲಬೇಕಿದೆ. ಇಲ್ಲಿ ಅಪ್ರಾಪ್ತರು ಮಾಡಿರುವ ತಪ್ಪನ್ನು ಕೆಟ್ಟದೆಂಬಂತೆ ಬಿಂಬಿಸಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವ ಮುನ್ನ ಆ ಹೆಣ್ಣು ಮಗುವಿನ ಪ್ರೈವೆಸಿಗೂ ಬೆಲೆ ನೀಡಿ. ದಯವಿಟ್ಟು ವಿಡಿಯೋಗಳನ್ನು ಶೇರ್ ಮಾಡುವುದು ತಪ್ಪಿಸಿ.. ನಮ್ಮ ಮನೆಯ ಹೆಣ್ಣು ಮಕ್ಕಳ ಬಗೆಗೂ ಕಾಳಜಿ ಇರುವಂತೆ ಇತರರ ಮೇಲೂ ಇರಲಿ ಎಂಬುದು ನಮ್ಮ ಕಳಕಳಿಯ ಮನವಿ..

Leave a Comment

Leave a Reply

Your email address will not be published. Required fields are marked *