FASTag SCAM : ಟೋಲ್ ದಾಟದಿದ್ರೂ ಕಟ್ ಆಗುತ್ತೆ ಹಣ – ಶುರುವಾಗಿದೆ ಫಾಸ್ಟ್​ಟ್ಯಾಗ್ ಮೂಲಕ ಹಣ ಕಬಳಿಸುವ ಹೊಸ ದಂಧೆ!

FASTag SCAM : ಟೋಲ್ ದಾಟದಿದ್ರೂ ಕಟ್ ಆಗುತ್ತೆ ಹಣ – ಶುರುವಾಗಿದೆ ಫಾಸ್ಟ್​ಟ್ಯಾಗ್ ಮೂಲಕ ಹಣ ಕಬಳಿಸುವ ಹೊಸ ದಂಧೆ!

ನ್ಯೂಸ್ ಆ್ಯರೋ : ರಾಜ್ಯದ ಬಹುತೇಕ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಗೇಟ್ ಗಳು ಇದ್ದೇ ಇರುತ್ತವೆ. ಇತ್ತೀಚೆಗಂತೂ ಎಲ್ಲಾ ವಾಹನಗಳಿಗೂ ಫಾಸ್ಟ್​ಟ್ಯಾಗ್ ಅಳವಡಿಸಿರಲಾಗುತ್ತದೆ. ಹಾಗೆಯೇ ಫಾಸ್ಟ್​ಟ್ಯಾಗ್ ಮೂಲಕ ಸುಲಭವಾಗಿ ಟೋಲ್ ಮೊತ್ತ ಪಾವತಿಸಬಹುದು. ಆದರೆ ನೀವೊಮ್ಮೆ ನಿಮ್ಮ ಫಾಸ್ಟ್​ಟ್ಯಾಗ್ ಬ್ಯಾಲೆನ್ಸ್ ಎಷ್ಟಿದೆ ಎಂಬುದನ್ನು ಚೆಕ್ ಮಾಡಿಕೊಳ್ಳುವುದು ಒಳ್ಳೆಯದು. ಯಾಕೆಂದರೆ ಈ ವಿಚಾರದಲ್ಲಿ ಸ್ವಲ್ಪ ಯಾಮಾರಿದ್ರೂ ಕೂಡ ನಿಮ್ಮ ಜೇಬಿಗೆ ಕತ್ತಿರಿ ಬೀಳೋದು ಗ್ಯಾರಂಟಿ..!

ಟ್ರಾಫಿಕ್ ಜಾಮ್ ತಡೆಯಲು ಫಾಸ್ಟ್ಯಾಗ್

ಟೋಲ್ ಗೇಟ್ ಗಳಲ್ಲಿ ಉಂಟಾಗುವ ಟ್ರಾಫಿಕ್ ಜಾಮ್ ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರ ಫಾಸ್ಟ್ಯಾಗ್ ನಿಯಮ ಜಾರಿಗೊಳಿಸಿತು. ಇದು ಪ್ರಿಪೇಯ್ಡ್ ಸೌಲಭ್ಯವಾಗಿದ್ದು, ಇದನ್ನು ವಾಹನದ ಮುಂದಿನ ಗಾಜಿಗೆ ಅಂಟಿಸಲಾಗುತ್ತದೆ. ಇದರಿಂದಾಗಿ ಟೋಲ್ ತ್ವರಿತವಾಗಿ ಪಾವತಿಯಾಗುತ್ತದೆ ಮತ್ತು ಟ್ರಾಫಿಕ್ ಜಾಮ್ ಕಿರಿಕಿರಿ ತಪ್ಪುತ್ತದೆ. ಆದರೆ ಕೆಲವೊಂದು ಟೋಲ್ ಗಳಲ್ಲಿ‌ ಇದೀಗ ವಾಹನಗಳು ಟೋಲ್ ದಾಟದಿದ್ದರೂ ಟೋಲ್ ಕಡಿತವಾಗುತ್ತಿದ್ದು, ಇದು ಹಣ ಕೀಳುವ ಹೊಸ ದಂದೆ ಎನ್ನಲಾಗುತ್ತಿದೆ.

ಈ ದಂಧೆ ನಡೆಯೋದು ಹೇಗೆ ಗೊತ್ತಾ?

ಇತ್ತೀಚಿನ ದಿನಗಳಲ್ಲಿ ಹಲವೆಡೆ ವಾಹನ ಸವಾರರು ನಮ್ಮ ವಾಹನ ಟೋಲ್ ದಾಟದಿದ್ರೂ ಹಣ ಕಟ್ ಆಗುತ್ತಿದೆ ಎಂದು ಆರೋಪಿಸುತ್ತಿದ್ದಾರೆ. ಆದರೆ‌ ಬಗ್ಗೆ ನ್ಯಾಷನಲ್​ ರೋಡ್​ ಸೇಫ್ಟಿ ಕೌನ್ಸಿಲ್​ ಸದಸ್ಯರು ‘ಇಂತಹ ಘಟನೆಗಳು‌ ನಮ್ಮ ಗಮನಕ್ಕೆ ಬಂದಿಲ್ಲ. ಯಾವುದೇ ವಾಹನಗಳಿಗೆ ಟೋಲ್​ ಪ್ಲಾಜಾ ದಾಟದಿದ್ರೂ ಹಣ ಕಡಿತವಾದರೆ ಅಂತವರು 24 ಗಂಟೆಯೊಳಗೆ ದೂರು ನೀಡಿ ಹಣ ವಾಪಸ್​ ಪಡೆಯಬಹುದು. ಒಂದು ವೇಳೆ ಈ ರೀತಿ ಹಣ ಕಟ್ ಆಗುತ್ತಿದ್ದರೆ ಅದಕ್ಕೆ ತಾಂತ್ರಿಕ ದೋಷ ಕಾರಣವಾಗಿರಬಹುದು’ ಎನ್ನುತ್ತಿದ್ದಾರೆ.

ಟ್ವಿಟ್ಟರ್ ಮೂಲಕವೂ ದೂರು ನೀಡಬಹುದು?

ಒಂದು ವೇಳೆ ನಿಮ್ಮ ವಾಹನವು ಟೋಲ್ ದಾಟದಿದ್ರು ಅಕೌಂಟ್ ನಿಂದ ಹಣ ಕಟ್ ಆಗುತ್ತಿದ್ದರೆ, ನೀವು ಈ ಬಗ್ಗೆ ಟೋಲ್​​ನ ಮ್ಯಾನೇಜರ್​, ಸೂಪರಿಂಟೆಂಡೆಂಟ್​​, ಸೂಪರ್ವೈಸರ್​​, ಪಿಡಿಗಳಿಗೆ ಮಾತ್ರವಲ್ಲ ಸಾರಿಗೆ ಮಂತ್ರಿಗಳಿಗೂ ದೂರು ನೀಡಬಹುದಾಗಿದೆ. ಜೊತೆಗೆ ಮೇಲ್​ ಅಥವಾ ಟ್ವಿಟರ್​ ಮೂಲಕ ದೂರು ನೀಡಿದರು ಸಮಸ್ಯೆ ಬಗೆಹರಿಯಲಿದೆ. ಆದರೂ ಕೂಡ ನೀವು ಪದೇ ಪದೇ ನಿಮ್ಮ ಅಕೌಂಟಿಂಗ್ ನಿಂದ ಫಾಸ್ಟ್​ ಟ್ಯಾಗ್​ ರೀಚಾರ್ಜ್​ ಎಲ್ಲೆಲ್ಲಿ ಎಷ್ಟೆಷ್ಟು ಕಟ್ ಆಗಿದೆ ಎಂಬುದನ್ನು ಪರೀಕ್ಷಿಸಿಕೊಳ್ಳುವುದು ಒಳ್ಳೆಯದು. ಇಲ್ಲವಾದಲ್ಲಿ ನಿಮ್ಮ ಹಣ ಟೋಲ್ ದಂಧೆ ಕೋರರ ಜೇಬು ತುಂಬಬಹುದು..!

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *