Shimoga : ಪತ್ನಿ ಮನೆ ಮುಂದೆಯೇ ರೌಡಿ ಶೀಟರ್ ಭೀಕರ ಕೊಲೆ ‌- ಮಾರಾಕಾಸ್ತ್ರಗಳಿಂದ ದಾಳಿ ನಡೆಸಿ ಅಪರಿಚಿತರು ಪರಾರಿ

Shimoga : ಪತ್ನಿ ಮನೆ ಮುಂದೆಯೇ ರೌಡಿ ಶೀಟರ್ ಭೀಕರ ಕೊಲೆ ‌- ಮಾರಾಕಾಸ್ತ್ರಗಳಿಂದ ದಾಳಿ ನಡೆಸಿ ಅಪರಿಚಿತರು ಪರಾರಿ

ನ್ಯೂಸ್ ಆ್ಯರೋ‌ : ಮುಂಜಾನೆಯ ವೇಳೆ ಪತ್ನಿ ಮನೆಯಿಂದ ಹೊರಗೆ ಬಂದಿದ್ದ ರೌಡಿ ಶೀಟರ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆಗೈದ ಘಟನೆ ಪೇಪರ್ ಟೌನ್ ಪೋಲಿಸ್ ಠಾಣಾ ವ್ಯಾಪ್ತಿಯ ಭದ್ರಾವತಿಯ ಬೊಮ್ಮನಕಟ್ಟೆ ಬಡಾವಣೆ ಸಮೀಪ ನಡೆದಿದೆ.

ಕೊಲೆಯಾದ ರೌಡಿ ಶೀಟರ್ ಅನ್ನು ಮುಜ್ಜು ಅಲಿಯಾಸ್ ಮುಜಾಹಿದ್ (35) ಎಂದು ಗುರುತಿಸಲಾಗಿದೆ.

ಪತ್ನಿಯ ಮನೆಯಿಂದ ಹೊರ ಬಂದ ವೇಳೆ ಮುಜಾಹಿದ್ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ ಪರಾರಿಯಾಗಿದ್ದಾರೆ.

ಮನೆಯ ಗೇಟ್ ಮುಂದೆಯೇ ಮುಜಾಹಿದ್ ಮುಖ ಮತ್ತು ಕೈ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಲಾಗಿದೆ. ಗೇಟ್ ಪಕ್ಕದಲ್ಲೇ ಮುಜಾಹಿದ್‌ನ ಮೃತದೇಹ ಮತ್ತು ಬೈಕ್‌ ಬಿದ್ದಿದೆ. ಕೊಲೆಗೆ ಕಾರಣ ತಿಳಿದುಬಂದಿಲ್ಲ.

ಮುಜಾಹಿದ್ ವಿರುದ್ಧ ಕೊಲೆ ಮತ್ತು ಕೊಲೆ ಯತ್ನ ಸಂಬಂಧ ನಾಲ್ಕು ಪ್ರಕರಣ ದಾಖಲಾಗಿದ್ದವು. ಈತ ರೌಡಿ ಶೀಟರ್ ಆಗಿದ್ದ. ಪೇಪರ್ ಟೌನ್ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೋಲಿಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related post

ಇಂದಿನಿಂದ ಚಾರ್‌ಧಾಮ್ ಯಾತ್ರೆ ಆರಂಭ: ಬುಕ್ಕಿಂಗ್ ತುಂಬಾ ಸುಲಭ

ಇಂದಿನಿಂದ ಚಾರ್‌ಧಾಮ್ ಯಾತ್ರೆ ಆರಂಭ: ಬುಕ್ಕಿಂಗ್ ತುಂಬಾ ಸುಲಭ

ನ್ಯೂಸ್ ಆ್ಯರೋ : ಬದರಿನಾಥ್ ಧಾಮ್, ಯಮುನೋತ್ರಿ ಧಾಮ್‌, ಕೇದಾರನಾಥ ಧಾಮ್ ಮತ್ತು ಗಂಗೋತ್ರಿ ಧಾಮ್ ಕ್ಷೇತ್ರಗಳನ್ನು ಸಂದರ್ಶಿಸುವುದನ್ನು ಚಾರ್ ಧಾಮ್ ಯಾತ್ರಾ ಎಂದು ಕರೆಯುತ್ತಾರೆ. ಇಂತಹ ಪವಿತ್ರವಾದ…
ದಿನ‌ ಭವಿಷ್ಯ 10-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 10-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಸಾಧ್ಯವಾದರೆ ದೀರ್ಘ ಪ್ರಯಾಣವನ್ನು ತಪ್ಪಿಸಿ. ಏಕೆಂದರೆ ನೀವು ಪ್ರಯಾಣಿಸು ತುಂಬಾ ದುರ್ಬಲರಾಗಿದ್ದೀರಿ ಹಾಗೂ ಇದು ಮತ್ತಷ್ಟು ನಿಮ್ಮನ್ನು ದುರ್ಬಲಗೊಳಿಸುತ್ತದೆ. ಇಂದು ಷೇರು ಮಾರುಕಟ್ಟೆಯಲ್ಲಿ ಹಣವನ್ನು ಹೂಡಿಕೆ ಮಾಡುವವರು ತಮ್ಮ…
7 ದಿನ ಪರಪ್ಪನ ಅಗ್ರಹಾರ ಕಾರಾಗೃಹದ ಪಾಲಾದ ಮಾಜಿ ಸಚಿವ ಎಚ್. ಡಿ. ರೇವಣ್ಣ; ಮೇ 14 ರವರೆಗೆ ನ್ಯಾಯಾಂಗ ಬಂಧನ

7 ದಿನ ಪರಪ್ಪನ ಅಗ್ರಹಾರ ಕಾರಾಗೃಹದ ಪಾಲಾದ ಮಾಜಿ ಸಚಿವ ಎಚ್.…

ನ್ಯೂಸ್ ಆ್ಯರೋ : ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಪೆನ್‌ಡ್ರೈವ್‌ ಪ್ರಕರಣದಲ್ಲಿ (Hassan Pen Drive) ಹಾಗೂ ಸಂತ್ರಸ್ತೆಯನ್ನು…

Leave a Reply

Your email address will not be published. Required fields are marked *