Manipur Violence : ಮಹಿಳೆಯರ ಬೆತ್ತಲೆ ಪೆರೇಡ್, ಸಾಮೂಹಿಕ ಅತ್ಯಾಚಾರ ಪ್ರಕರಣ – ನಾಲ್ಕು ಆರೋಪಿಗಳ ಬಂಧನ, ಹಳೆಯ FIR ನಲ್ಲೇ ಕರ್ತವ್ಯ ಲೋಪ ಎಂದ ಸಿಎಂ ಬಿರೇನ್ ಸಿಂಗ್

Manipur Violence : ಮಹಿಳೆಯರ ಬೆತ್ತಲೆ ಪೆರೇಡ್, ಸಾಮೂಹಿಕ ಅತ್ಯಾಚಾರ ಪ್ರಕರಣ – ನಾಲ್ಕು ಆರೋಪಿಗಳ ಬಂಧನ, ಹಳೆಯ FIR ನಲ್ಲೇ ಕರ್ತವ್ಯ ಲೋಪ ಎಂದ ಸಿಎಂ ಬಿರೇನ್ ಸಿಂಗ್

ನ್ಯೂಸ್ ಆ್ಯರೋ : ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆಗೊಳಿಸಿ ಪರೇಡ್ ಮಾಡಿ ಅತ್ಯಾಚಾರವೆಸಗಿರುವ ಘಟನೆಯ ವೀಡಿಯೋದಲ್ಲಿರುವ ಪ್ರಮುಖ ಆರೋಪಿ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದ್ದು, ಹಳೆಯ ಎಫ್‌ಐಆರ್ ನಲ್ಲಿ ಕರ್ತವ್ಯ ಲೋಪ ಪತ್ತೆಯಾಗಿದೆ ಎಂದು ಮಣಿಪುರ ಸಿಎಂ ಬಿರೇನ್ ಸಿಂಗ್ ಹೇಳಿದ್ದಾರೆ.

ಘಟನೆಯನ್ನು ಖಂಡಿಸಿ ಸಿಎಂ ರಾಜೀನಾಮೆಗೆ ಒತ್ತಡ ಹೆಚ್ಚುತ್ತಿದ್ದು, ಮೌನ ಮುರಿದಿರುವ ಬಿರೇನ್ ಸಿಂಗ್ ಪೊಲೀಸರು ಸ್ವಯಂ ಪ್ರೇರಿತರಾಗಿ ಪ್ರಕರಣ ದಾಖಲಿಸಿಕೊಂಡು ವಿಡಿಯೋ ವೈರಲ್ ಆದ ಬೆನ್ನಲ್ಲೆ ಆರೋಪಿಯನ್ನು ಬಂಧಿಸಿದ್ದಾರೆ. ಇಂತಹ ಹೇಯ ಕೃತ್ಯದ ಬಗ್ಗೆ ಸರ್ಕಾರ ಸುಮ್ಮನಿರುವುದಿಲ್ಲ. ಅಪರಾಧಿಗಳಿಗೆ, ಮರಣದಂಡನೆಯಂತಹ ಕಠಿಣ ಶಿಕ್ಷೆ ಸಿಗುವಂತೆ ಸರ್ಕಾರ ನೋಡಿಕೊಳ್ಳುತ್ತದೆ ಎಂದು ಬಿರೇನ್ ಸಿಂಗ್ ಹೇಳಿದ್ದಾರೆ.

ಇಬ್ಬರು ಮಹಿಳೆಯರನ್ನು ಹಿಡಿದುಕೊಂಡು ಬಂದಿದ್ದ ಗುಂಪಿನಲ್ಲಿ ಒಬ್ಬಾತ ಮಹಿಳೆಯನ್ನು ಹಿಡಿದುಕೊಂಡಿದ್ದ. ಈತನನ್ನು 32 ವರ್ಷದ ಹುಯಿರೆಮ್ ಹೆರೋಡಾಸ್ ಮೈತೇಯಿ ಎಂದು ಗುರುತಿಸಲಾಗಿದ್ದು, ಈಗಾಗಲೇ ತೌಬಲ್ ಜಿಲ್ಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಘಟನೆಯಲ್ಲಿ ಶಾಮೀಲಾದ ಎಲ್ಲರನ್ನು ಶೀಘ್ರ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಇದರ ನಡುವೆ ಈ ನಡುವೆ ಓರ್ವ ಆರೋಪಿಯ ಮನೆಗೆ ಗ್ರಾಮಸ್ಥರೇ ಸೇರಿ ಬೆಂಕಿ ಹಚ್ಚಿರುವ ಘಟನೆ ನಡೆದಿದೆ ಎನ್ನಲಾಗಿದೆ.

ಕಳೆದ ಮೇ 3 ರಂದು ಈಶಾನ್ಯ ರಾಜ್ಯದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ಒಂದು ದಿನದ ನಂತರ ಕಾಂಗ್‌ಪೋಕ್ಪಿ ಜಿಲ್ಲೆಯ ಹಳ್ಳಿಯೊಂದರಲ್ಲಿ ಈ ಘಟನೆ ನಡೆದಿತ್ತು. ಆದರೆ, ಬುಧವಾರವಷ್ಟೇ ಈ ಭಯಾನಕ ದೃಶ್ಯಾವಳಿಗಳು ಹೊರಬಂದಿದ್ದು ಇಂಟರ್ನೆಟ್ ನಿಷೇಧವನ್ನು ತೆಗೆದುಹಾಕಿದ ನಂತರ ವೈರಲ್ ಆಗಿದೆ.

Related post

ದಿನ‌ ಭವಿಷ್ಯ 10-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 10-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಸಾಧ್ಯವಾದರೆ ದೀರ್ಘ ಪ್ರಯಾಣವನ್ನು ತಪ್ಪಿಸಿ. ಏಕೆಂದರೆ ನೀವು ಪ್ರಯಾಣಿಸು ತುಂಬಾ ದುರ್ಬಲರಾಗಿದ್ದೀರಿ ಹಾಗೂ ಇದು ಮತ್ತಷ್ಟು ನಿಮ್ಮನ್ನು ದುರ್ಬಲಗೊಳಿಸುತ್ತದೆ. ಇಂದು ಷೇರು ಮಾರುಕಟ್ಟೆಯಲ್ಲಿ ಹಣವನ್ನು ಹೂಡಿಕೆ ಮಾಡುವವರು ತಮ್ಮ…
7 ದಿನ ಪರಪ್ಪನ ಅಗ್ರಹಾರ ಕಾರಾಗೃಹದ ಪಾಲಾದ ಮಾಜಿ ಸಚಿವ ಎಚ್. ಡಿ. ರೇವಣ್ಣ; ಮೇ 14 ರವರೆಗೆ ನ್ಯಾಯಾಂಗ ಬಂಧನ

7 ದಿನ ಪರಪ್ಪನ ಅಗ್ರಹಾರ ಕಾರಾಗೃಹದ ಪಾಲಾದ ಮಾಜಿ ಸಚಿವ ಎಚ್.…

ನ್ಯೂಸ್ ಆ್ಯರೋ : ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಪೆನ್‌ಡ್ರೈವ್‌ ಪ್ರಕರಣದಲ್ಲಿ (Hassan Pen Drive) ಹಾಗೂ ಸಂತ್ರಸ್ತೆಯನ್ನು…
TECH TIPS: ಕಿರಿಕಿರಿ ನೀಡುವ ಸ್ಪ್ಯಾಮ್ ಕರೆಗಳಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿ..!

TECH TIPS: ಕಿರಿಕಿರಿ ನೀಡುವ ಸ್ಪ್ಯಾಮ್ ಕರೆಗಳಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿ..!

ನ್ಯೂಸ್ ಆ್ಯರೋ : ಮನಸ್ಸಿಗೆ ಕಿರಿಕಿರಿ ನೀಡುವ ಮತ್ತು ತಮ್ಮ ಕೆಲಸದ ವೇಳೆಯಲ್ಲಿ ಅಡಚಣೆ ಉಂಟು ಮಾಡುವ ಸ್ಪ್ಯಾಮ್ ಕರೆಗಳನ್ನು (Spam call) ತಡೆಯುವುದು ಇಂದು ದೊಡ್ಡ ಸಾಹಸ…

Leave a Reply

Your email address will not be published. Required fields are marked *