M.S Dhoni : ಕ್ಯಾಪ್ಟನ್ ಕೂಲ್ ವಿರುದ್ಧ ಕೋಟ್ಯಾಂತರ ರೂಪಾಯಿ ವಂಚನೆ ಆರೋಪ – ಏನಿದು ಪ್ರಕರಣ? ಧೋನಿಗೆ ನೋಟಿಸ್ ನೀಡಿದ್ಯಾರು?
ನ್ಯೂಸ್ ಆ್ಯರೋ : ಟೀಂ ಇಂಡಿಯಾದ ಮಾಜಿ ನಾಯಕ, ಕೂಲ್ ಕ್ಯಾಪ್ಟನ್ ಖ್ಯಾತಿಯ ಎಂ.ಎಸ್.ಧೋನಿ ವಿರುದ್ಧ ಕೋಟಿ ಕೋಟಿ ರೂಪಾಯಿ ಹಣ ವಂಚಿಸಿದ ಆರೋಪ ಕೇಳಿ ಬಂದಿದ್ದು, ಧೋನಿ ವಿರುದ್ಧ ಪ್ರಕರಣ ದಾಖಲಾಗಿದೆ.
ಕ್ರಿಕೆಟ್ ಅಕಾಡೆಮಿ ನಿರ್ವಹಿಸುವ ವಿಚಾರದಲ್ಲಿ ಧೋನಿ ತಮಗೆ 15 ಕೋಟಿ ರೂ. ವಂಚಿಸಿದ್ದಾರೆಂದು ಉತ್ತರ ಪ್ರದೇಶದ ಅಮೇಥಿಯ ರಾಜೇಶ್ ಕುಮಾರ್ ಮೌರ್ಯ ಎಂಬುವವರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(BCCI)ಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಬಿಸಿಸಿಐ ಎಥಿಕ್ಸ್ ಕಮಿಟಿ ನಿಯಮ 36ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಆಗಸ್ಟ್ 30ರೊಳಗೆ ಈ ಬಗ್ಗೆ ವಿವರಣೆ ನೀಡುವಂತೆ ಧೋನಿಗೆ ಸೂಚನೆ ನೀಡಿದ್ದಾರೆ.
2021ರಲ್ಲಿ ಧೋನಿ ಹೆಸರಿನಲ್ಲಿ ಕ್ರಿಕೆಟ್ ಅಕಾಡೆಮಿ ನಡೆಸಲು ಒಪ್ಪಂದಕ್ಕೆ ಸಹಿ ಹಾಕಿದೆ. ನಂತರ ಈ ಒಪ್ಪಂದದ ಬಗ್ಗೆ ವಿವಾದಗಳು ಹುಟ್ಟಿಕೊಂಡಿದ್ದವು. ಒಪ್ಪಂದದ ಪ್ರಕಾರ ಆರ್ಕಾ ಕಂಪನಿ ತನಗೆ ನೀಡಬೇಕಾದ ಮೊತ್ತವನ್ನು ಪಾವತಿಸಿಲ್ಲವೆಂದು ಧೋನಿ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಈ ಸಂಸ್ಥೆ ತಮಗೆ ಸುಮಾರು ₹15 ಕೋಟಿ ವಂಚನೆ ಮಾಡಿದೆ ಎಂದು ಅರ್ಕಾ ಸ್ಪೋರ್ಟ್ಸ್ ಕಂಪನಿ ಮಾಲೀಕ ಮಿಹಿರ್ ದಿವಾಕರ್, ವ್ಯವಹಾರ ನಡೆಸುತ್ತಿದ್ದ ಸೌಮ್ಯ ದಾಸ್ ಮತ್ತು ಅರ್ಕಾ ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ವಂಚನೆ ಆರೋಪ ಮಾಡಲಾಗಿತ್ತು. ರಾಂಚಿ ಸಿವಿಲ್ ಕೋರ್ಟ್‌ನಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಸದ್ಯ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಆದರೆ ಇದೀಗ ಅದೇ ಸಂಸ್ಥೆಗೆ ಸೇರಿದ ರಾಜೇಶ್ ಕುಮಾರ್ ತಮಗೆ ಧೋನಿ ಮೋಸ ಮಾಡಿದ್ದಾರೆ ಎಂದು ಬಿಸಿಸಿಐಗೆ ದೂರು ನೀಡಿದ್ದಾರೆ.
Leave a Comment