ನರ್ಸಿಂಗ್ ಕೋರ್ಸ್ ಪರೀಕ್ಷೆಯ ವೇಳೆ ಗುಪ್ತಾಂಗದಲ್ಲಿ ಮೊಬೈಲ್ ಪತ್ತೆ – ಪರೀಕ್ಷಾ ಕೊಠಡಿಯಲ್ಲಿ ಸಿಕ್ಕಿಬಿದ್ದ ಮಹಿಳಾಮಣಿಗಳು : ಪರೀಕ್ಷೆಯೇ ರದ್ದು..!
ನ್ಯೂಸ್ ಆ್ಯರೋ : ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ಬೀರ್ಭುಮ್‌ನ ಸೂರಿಯ ಬೆನಿಮಾಧಬ್ ಇನ್ಸ್ಟಿಟ್ಯೂಷನ್‌ನಲ್ಲಿ ಎಎನ್‌ಎಂ ಮತ್ತು ಜಿಎನ್‌ಎಂ ನರ್ಸಿಂಗ್ ಕೋರ್ಸ್‌ಗೆ ಪ್ರವೇಶ ಪರೀಕ್ಷೆ ನಡೆಯುತ್ತಿದ್ದ ವೇಳೆ ನಕಲು ಮಾಡಲು ಮೊಬೈಲ್ ತೆಗೆದುಕೊಂಡು ಬಂದಿದ್ದ ವಿದ್ಯಾರ್ಥಿಗಳನ್ನು ಡಿಬಾರ್ ಮಾಡಲಾಗಿದ್ದು, ಬಳಿಕ ಪರೀಕ್ಷೆಯನ್ನೇ ರದ್ದು ಮಾಡಲಾಗಿದೆ.
ಮಾಲ್ಡಾದ ಕೆಲವು ವಿದ್ಯಾರ್ಥಿಗಳು ಸೂರಿಯ ಬೆನಿಮಾಧಬ್ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಗೆ ಹಾಜರಾಗುತ್ತಿದ್ದರು. ಪರೀಕ್ಷಾ ಕೇಂದ್ರಗಳ ಒಳಗೆ ಮೊಬೈಲ್ ಫೋನ್ ಗಳನ್ನು ಅನುಮತಿಸಲಾಗುವುದಿಲ್ಲ ಎಂದು ತಿಳಿಸಲಾಗಿತ್ತು.
ಪ್ರತಿಯೊಬ್ಬರನ್ನು ಸರಿಯಾಗಿ ಪರಿಶೀಲನೆ ನಡೆಸಿಯೇ ಮಹಿಳಾ ಸೆಕ್ಯುರಿಟಿ ಗಾರ್ಡ್‌ಗಳು ಪರೀಕ್ಷಾ ಕೊಠಡಿಗೆ ಹೋಗಲು ಅನುಮತಿಸುತ್ತಿದ್ದರು. ಪರಿಶೀಲನೆ ವೇಳೆ ಹಲವರ ಬಳಿ ಮೊಬೈಲ್, ಕಾಪಿ ಚೀಟಿ ಪತ್ತೆಯಾಗಿತ್ತು. ತಕ್ಷಣ ಅವರಿಂದ ಅದನ್ನು ಸೀಜ್ ಮಾಡಿ ಅವರನ್ನು ಪರೀಕ್ಷಾ ಕೊಠಡಿಗೆ ಕಳುಹಿಸಲಾಗಿತ್ತು.
ಆದರೆ ಪರೀಕ್ಷೆ ಆರಂಭವಾಗುತ್ತಿದ್ದಂತೆ ಕೊಠಡಿಯೊಳಗೆ ಕೆಲವು ಭದ್ರತಾ ಸಿಬ್ಬಂದಿಗಳಿಗೆ ಮೊಬೈಲ್ ಬಳಕೆ ಅನುಮಾನ ಬಂದಿತು. ನಂತರ ವಿದ್ಯಾರ್ಥಿಗಳನ್ನು ಪರೀಕ್ಷೆಗಾಗಿ ಮತ್ತೊಂದು ಸಭಾಂಗಣಕ್ಕೆ ಕರೆದೊಯ್ಯಲಾಯಿತು.
ಅಲ್ಲಿ ಒಬ್ಬೊಬ್ಬರನ್ನೇ ವಿಚಾರಣೆಗೆ ಒಳಪಡಿಸಿ ತಪಾಸಣೆ ನಡೆಸಲಾಯಿತು. ಮೆಟಲ್ ಡಿಟೆಕ್ಟರ್ ಗಳ ಮೂಲಕ ದೇಹವನ್ನು ಹುಡುಕುತ್ತಿದ್ದಂತೆ, ಕೆಲ ವಿದ್ಯಾರ್ಥಿನಿಯರು ತಮ್ಮ ಗುಪ್ತಾಂಗದಲ್ಲಿ ಮೊಬೈಲ್ ಸಿಕ್ಕಿಸಿಕೊಂಡು ಬಂದಿದ್ದೂ ಪತ್ತೆಯಾಗಿದೆ.
ಇನ್ನೂ ಕೆಲವರು ಶೂ ಅನ್ನು ಕತ್ತರಿಸಿ ಮೊಬೈಲ್ ಫೋನ್ ಅನ್ನು ಅದರಲ್ಲಿ ಇಟ್ಟುಕೊಂಡು ಬಂದಿದ್ದರು. ಕೂಡಲೇ ಹೀಗೆ ಮೊಬೈಲ್ ಇಟ್ಟುಕೊಂಡು ಬಂದಿದ್ದವರನ್ನೆಲ್ಲಾ ವಶಕ್ಕೆ ಪಡೆದ ಅಧಿಕಾರಿಗಳು ಅವರನ್ನು ಪರೀಕ್ಷೆಗಳಿಂದ ಡಿಬಾರ್ ಮಾಡುವ ಆದೇಶ ಹೊರಡಿಸಿದರು. ಮೊಬೈಲ್‌ಗಳನ್ನೂ ವಶಕ್ಕೆ ಪಡೆದರು.
ಈ ಘಟನೆಯ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಲದ ಪರೀಕ್ಷಾ ನಿಯಂತ್ರಕರು ಪರೀಕ್ಷೆಗಳನ್ನು ರದ್ದುಪಡಿಸುವಂತೆ ಶಿಫಾರಸು ಮಾಡಿದ್ದು ಪರೀಕ್ಷೆಯನ್ನೇ ರದ್ದುಪಡಿಸಲಾಗಿದೆ.
Leave a Comment