Neeraj Chopra : ಚಿನ್ನದ ಪದಕದ ಆಸೆ ಚಿಗುರಿಸಿದ ಗೋಲ್ಡನ್ ಬಾಯ್ – ಒಂದೇ ಎಸೆತದಲ್ಲಿ ಫೈನಲ್ ಗೆ ಪ್ರವೇಶ ಪಡೆದ ಚೋಪ್ರಾ
ನ್ಯೂಸ್ ಆ್ಯರೋ : ಹಾಲಿ ನಡೆಯುತ್ತಿರುವ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಏಕೈಕ ಚಿನ್ನದ ಪದಕದ ನಿರೀಕ್ಷೆ ಉಳಿಸಿರುವ ಗೋಲ್ಡನ್ ಬಾಯ್ ನೀರಜ್ ಚೋಪ್ರಾ ಜಾವೆಲಿನ್ ಥ್ರೋ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ್ದು, ಭಾರತಕ್ಕೆ ಮರೀಚಿಕೆಯಾಗಿರುವ ಚಿನ್ನದ ಪದಕದ ಕನಸು ಮೂಡಿಸಿದ್ದಾರೆ.
ಇಂದು ನಡೆದ ಅರ್ಹತಾ ಸುತ್ತಿನಲ್ಲಿ ಕೇವಲ ಒಂದೇ ಒಂದು ಥ್ರೋ ಮಾಡಿದ ನೀರಜ್ ಚೋಪ್ರಾ ಅಲ್ಲೇ ತನ್ನ ಫೈನಲ್ ಸ್ಥಾನ ಖಚಿತ ಪಡಿಸಿಕೊಂಡರು. ಬಿ ಗುಂಪಿನ ಅರ್ಹತಾ ಸುತ್ತಿನಲ್ಲಿ ಚೋಪ್ರಾ ಅವರು 89.34 ಮೀಟರ್ ದೂರ ಜಾವೆಲೆನ್ ಎಸೆದು ಅರ್ಹತಾ ಸುತ್ತಿನಲ್ಲಿ ಮೊದಲ ಸ್ಥಾನ ಗಳಿಸಿದರು. ಅಲ್ಲದೆ ತಮ್ಮ ಮೊದಲ ಪ್ರಯತ್ನದಲ್ಲಿಯೇ ಫೈನಲ್‌ಗೆ ಅರ್ಹತೆ ಪಡೆದರು.
ಆದರೆ ಇದೇ ಮೊದಲ ಬಾರಿಗೆ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿರುವ ಭಾರತದ ಮತ್ತೋರ್ವ ಎಸೆತಗಾರ ಕಿಶೋರ್ ಜೇನಾ ಅವರು ಫೈನಲ್ ಗೆ ಅರ್ಹತೆ ಪಡೆಯಲು ವಿಫಲರಾಗಿದದ್ದು, ಅವರು 80.73 ಮೀಟರ್ ಎಸೆಯಲಷ್ಟೇ ಶಕ್ತರಾದರು.
ಕಳೆದ 2022ರ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ 90 ಮೀಟರ್ ಗಡಿ ದಾಟಿದ್ದ ಪಾಕಿಸ್ತಾನದ ಅರ್ಶದ್ ನದೀಂ ಕೂಡಾ ನೀರಜ್ ಅವರೊಂದಿಗೆ ಫೈನಲ್ ಪ್ರವೇಶ ಪಡೆದಿದ್ದು, ಅವರು 86.59 ಮೀಟರ್ ಎಸೆದರು.
ನೀರಜ್ ಚೋಪ್ರಾ ಮತ್ತು ನದೀಮ್ ಅವರಂತೆಯೇ, ಗ್ರೆನಾಡದ ಆಂಡರ್ಸನ್ ಕೂಡ ತಮ್ಮ ಮೊದಲ ಪ್ರಯತ್ನದಲ್ಲಿ 88.63 ಮೀ ದೂರವನ್ನು ದಾಖಲಿಸುವ ಮೂಲಕ ಫೈನಲ್ ಪ್ರವೇಶ ಪಡೆದಿದ್ದಾರೆ.
Leave a Comment