Sengol In Coastal : ಕರಾವಳಿಯಲ್ಲೂ ಇತ್ತು ಸೆಂಗೋಲ್ – ಅರಸುಮನೆತನದ ಫೋಟೋ ಭಾರೀ ವೈರಲ್..!!

Sengol In Coastal : ಕರಾವಳಿಯಲ್ಲೂ ಇತ್ತು ಸೆಂಗೋಲ್ – ಅರಸುಮನೆತನದ ಫೋಟೋ ಭಾರೀ ವೈರಲ್..!!

ನ್ಯೂಸ್ ಆ್ಯರೋ : ಇತ್ತೀಚೆಗೆ ನೂತನ ಸಂಸತ್ತಿನ ಉದ್ಘಾಟನೆ ಸಂದರ್ಭದಲ್ಲಿ “ಸೆಂಗೋಲ್ ” ಭಾರಿ ಸುದ್ದಿಯಲ್ಲಿತ್ತು. ಇದೇ ಸೆಂಗೋಲ್ ಮಾದರಿಯ ರಾಜದಂಡದ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗುತ್ತಿದೆ, ಅದು ಉಡುಪಿಗೆ ಸಂಬಂಧಿಸಿದ ಚಿತ್ರ ಎಂಬುದು ವಿಶೇಷ.

ಉಡುಪಿಯ ಬಿಜೆಪಿ ಮುಖಂಡ, ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಅವರು ಪಟ್ಟದ ಕತ್ತಿ ಹಿಡಿದು ಕೈಯಲ್ಲಿ ಸೆಂಗೋಲ್ ಹಿಡಿದ ಭಂಗಿಯಲ್ಲಿರುವ ಚಿತ್ರ ಇದಾಗಿದೆ. ಈ ಬಗ್ಗೆ ತಿಂಗಳೆ ವಿಕ್ರಮಾರ್ಜುನ ಹೆಗ್ಡೆಯವರು ಸ್ಪಷ್ಟನೆ ನೀಡಿದ್ದಾರೆ.

ಈ ಹಿಂದೆ ದ. ಕ. ಹಾಗೂ ಉಡುಪಿ ಜಿಲ್ಲೆಯಲ್ಲಿ ಹಲವು ಅರಮನೆಗಳಿದ್ದವು. ಆ ಅರಮನೆಗಳಿಗೆ ಪಟ್ಚದರಸ ಎಂದು ನೇಮಕ ಮಾಡುವ ಪರಿಪಾಠವಿತ್ತು. ಮಕ್ಕಳ ಕಟ್ಟು, ಅಳಿಯಕಟ್ಚು ಪ್ರಕಾರ ಪುರುಷನೊಬ್ಬನಿಗೆ ಪಟ್ಟಾಭಿಷೇಕ ಮಾಡಲಾಗುತ್ತದೆ. ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆಯವರದ್ದು ತಿಂಗಳೆ ಅರಸು ಮನೆತನ. ಅವರ ಅಜ್ಜ ಶಿವರಾಮ ಹೆಗ್ಡೆ, ತಂದೆ ರವೀಂದ್ರ ಹೆಗ್ಡೆಯವರಿಗೆ ಅರಸು ಪಟ್ಟವಾಗಿರಲಿಲ್ಲ, ನಂತರದ ದಿನಗಳಲ್ಲಿ ದೈವ ದೇವರ ಅಪೇಕ್ಷೆಯಂತೆ ವಿಕ್ರಮಾರ್ಜುನ ಹೆಗ್ಡೆಯವರಿಗೆ ಪಟ್ಟಾಭಿಷೇಕವಾಯಿತು.

ಪಟ್ಟದ ಅರಮನೆಯಲ್ಲಿ ಪ್ರಸಿದ್ಧ ಕುಲ ದೇವರು, ಪ್ರಸಿದ್ಧ ದೈವ ಸಾನಿಧ್ಯ ಇದ್ದೇ ಇರುತ್ತದೆ. ಅದರ ಆಜ್ಞಾಪಾಲಕನಾಗಿರುವ ಅರಸುವಿನ ಮೂಲಕ ನ್ಯಾಯ ಪರಿಪಾಲಿಸುವ ಪರಿಪಾಠವಿದೆ ಎಂದಿದ್ದಾರೆ. ತಿಂಗಳೆಯವರು ” ಸೆಂಗೋಲ್ ” ಹಿಡಿದಿರುವ ಈ ಚಿತ್ರ ವೈರಲ್ ಆಗಿದ್ದು ಪರ ವಿರೋಧ ಚರ್ಚೆಯೂ ಜೋರಾಗಿ ನಡೆಯುತ್ತಿದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *