ಮಣಿಪುರ ಮತ್ತೆ ಉದ್ವಿಗ್ನ, ಭೀಕರ ಹಿಂಸಾಚಾರ – ಹಲವೆಡೆ ಕರ್ಫ್ಯೂ ಜಾರಿ, ಸೇನೆಯ ನಿಯೋಜನೆ

ಮಣಿಪುರ ಮತ್ತೆ ಉದ್ವಿಗ್ನ, ಭೀಕರ ಹಿಂಸಾಚಾರ – ಹಲವೆಡೆ ಕರ್ಫ್ಯೂ ಜಾರಿ, ಸೇನೆಯ ನಿಯೋಜನೆ

ನ್ಯೂಸ್ ಆ್ಯರೋ‌ : ಭಾರೀ ಪ್ರಮಾಣದ ಹಿಂಸಾಚಾರದಿಂದ ನಲುಗಿರುವ ಮಣಿಪುರದಲ್ಲಿ ಸೋಮವಾರ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಇಂಫಾಲ್‌ನಲ್ಲಿ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ವರದಿಗಳ ನಂತರ ಪರಿಸ್ಥಿತಿ ಮತ್ತೆ ಉದ್ವಿಗ್ನಗೊಂಡಿದೆ.

ಇಂಫಾಲ್‌ನ ನ್ಯೂ ಚೆಕಾನ್ ಪ್ರದೇಶದಲ್ಲಿ ಮೈಟೆಯಿ ಮತ್ತು ಕುಕಿ ಸಮುದಾಯಗಳು ಮುಖಾಮುಖಿಯಾದ ನಂತರ ಕರ್ಫ್ಯೂ ಅನ್ನು ಪುನಃ ಹೇರಲಾಗಿದೆ. ಪರಿಸ್ಥಿತಿ ನಿಯಂತ್ರಿಸಲು ಸೇನೆ ಮತ್ತು ಅರೆಸೇನಾ ಪಡೆಗಳನ್ನು ಕರೆಸಲಾಗಿದೆ ಎಂದು ವರದಿ ಹೇಳಿದೆ.

ರಾಷ್ಟ್ರೀಯ ಟಿವಿ ಮಾಧ್ಯಮಗಳ ವರದಿಗಳ ಪ್ರಕಾರ ಹಿಂದಿನ ಹಿಂಸಾಚಾರದ ನಂತರ ಜನರು ಖಾಲಿ ಮಾಡಿದ ಮನೆಗಳಲ್ಲಿ ವಿಧ್ವಂಸಕ ಕೃತ್ಯಗಳು ವರದಿಯಾಗಿವೆ. ಕೆಲವು ಮನೆಗಳಿಗೆ ಮತ್ತೆ ಬೆಂಕಿ ಹಚ್ಚಲಾಗಿದೆ.

ಮಣಿಪುರ ಕಳೆದ ಒಂದು ತಿಂಗಳಿಗೂ ಹೆಚ್ಚು ಜನಾಂಗೀಯ ಘರ್ಷಣೆಗಳಿಗೆ ಸಾಕ್ಷಿಯಾಗಿತ್ತು. ಮೇ 3ರಂದು ಪರಿಶಿಷ್ಟ ಪಂಗಡದ ಸ್ಥಾನಮಾನದ ಬೇಡಿಕೆಗಾಗಿ ಪ್ರತಿಭಟಿಸಲು ಬುಡಕಟ್ಟು ಜನಾಂಗದವರು ಒಗ್ಗಟ್ಟಿನ ಮೆರವಣಿಗೆಯನ್ನು ಆಯೋಜಿಸಿದ ನಂತರ ಗುಡ್ಡಗಾಡು ರಾಜ್ಯದಲ್ಲಿ ಘರ್ಷಣೆಗಳು ಪ್ರಾರಂಭವಾದವು. ಒಂದು ವಾರಕ್ಕೂ ಹೆಚ್ಚು ಕಾಲ ನಡೆದ ಹಿಂಸಾಚಾರದಲ್ಲಿ 70ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. ಕೋಟಿಗಟ್ಟಲೆ ಮೌಲ್ಯದ ಆಸ್ತಿಯನ್ನು ಸುಟ್ಟುಹಾಕಲಾಯಿತು ಮತ್ತು ಸರಕಾರ-ಸಂಘಟಿತ ಶಿಬಿರಗಳಿಗೆ ತೆರಳಲು ಸಾವಿರಾರು ಜನರು ತಮ್ಮ ಮನೆಗಳನ್ನು ತೊರೆಯಬೇಕಾಯಿತು.

ಮೀಸಲು ಅರಣ್ಯ ಭೂಮಿಯಿಂದ ಕುಕಿ ಗ್ರಾಮಸ್ಥರನ್ನು ಹೊರಹಾಕುವ ಬಗ್ಗೆ ಘರ್ಷಣೆಗಳು ನಡೆದು, ಒಂದು ಸಣ್ಣ ಆಂದೋಲದಿಂದ ಆರಂಭವಾಗಿ ದೊಡ್ಡ ಗಲಾಟೆ ಹೊತ್ತಿಕೊಂಡಿತ್ತು. ಇದೀಗ ರಾಜ್ಯಾದ್ಯಂತ ಇದು ಕಾಡ್ಗಿಚ್ಚಿನಂತೆ ಹಬ್ಬಿದೆ.

Related post

ಇಂದಿನಿಂದ ಚಾರ್‌ಧಾಮ್ ಯಾತ್ರೆ ಆರಂಭ: ಬುಕ್ಕಿಂಗ್ ತುಂಬಾ ಸುಲಭ

ಇಂದಿನಿಂದ ಚಾರ್‌ಧಾಮ್ ಯಾತ್ರೆ ಆರಂಭ: ಬುಕ್ಕಿಂಗ್ ತುಂಬಾ ಸುಲಭ

ನ್ಯೂಸ್ ಆ್ಯರೋ : ಬದರಿನಾಥ್ ಧಾಮ್, ಯಮುನೋತ್ರಿ ಧಾಮ್‌, ಕೇದಾರನಾಥ ಧಾಮ್ ಮತ್ತು ಗಂಗೋತ್ರಿ ಧಾಮ್ ಕ್ಷೇತ್ರಗಳನ್ನು ಸಂದರ್ಶಿಸುವುದನ್ನು ಚಾರ್ ಧಾಮ್ ಯಾತ್ರಾ ಎಂದು ಕರೆಯುತ್ತಾರೆ. ಇಂತಹ ಪವಿತ್ರವಾದ…
ದಿನ‌ ಭವಿಷ್ಯ 10-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 10-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಸಾಧ್ಯವಾದರೆ ದೀರ್ಘ ಪ್ರಯಾಣವನ್ನು ತಪ್ಪಿಸಿ. ಏಕೆಂದರೆ ನೀವು ಪ್ರಯಾಣಿಸು ತುಂಬಾ ದುರ್ಬಲರಾಗಿದ್ದೀರಿ ಹಾಗೂ ಇದು ಮತ್ತಷ್ಟು ನಿಮ್ಮನ್ನು ದುರ್ಬಲಗೊಳಿಸುತ್ತದೆ. ಇಂದು ಷೇರು ಮಾರುಕಟ್ಟೆಯಲ್ಲಿ ಹಣವನ್ನು ಹೂಡಿಕೆ ಮಾಡುವವರು ತಮ್ಮ…
7 ದಿನ ಪರಪ್ಪನ ಅಗ್ರಹಾರ ಕಾರಾಗೃಹದ ಪಾಲಾದ ಮಾಜಿ ಸಚಿವ ಎಚ್. ಡಿ. ರೇವಣ್ಣ; ಮೇ 14 ರವರೆಗೆ ನ್ಯಾಯಾಂಗ ಬಂಧನ

7 ದಿನ ಪರಪ್ಪನ ಅಗ್ರಹಾರ ಕಾರಾಗೃಹದ ಪಾಲಾದ ಮಾಜಿ ಸಚಿವ ಎಚ್.…

ನ್ಯೂಸ್ ಆ್ಯರೋ : ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಪೆನ್‌ಡ್ರೈವ್‌ ಪ್ರಕರಣದಲ್ಲಿ (Hassan Pen Drive) ಹಾಗೂ ಸಂತ್ರಸ್ತೆಯನ್ನು…

Leave a Reply

Your email address will not be published. Required fields are marked *